ಬೀದಿಬದಿ ವ್ಯಾಪಾರಿಗಳು ಆರೋಗ್ಯದತ್ತ ನಿಗಾ ವಹಿಸಬೇಕು: ಸುರೇಶ್ ಕಿವಿಮಾತು

| Published : Aug 01 2024, 12:36 AM IST

ಬೀದಿಬದಿ ವ್ಯಾಪಾರಿಗಳು ಆರೋಗ್ಯದತ್ತ ನಿಗಾ ವಹಿಸಬೇಕು: ಸುರೇಶ್ ಕಿವಿಮಾತು
Share this Article
  • FB
  • TW
  • Linkdin
  • Email

ಸಾರಾಂಶ

ಶಿರಾಳಕೊಪ್ಪದಲ್ಲಿ ನಡೆದ ಪಿಎಂ ಸ್ವನಿಧಿ ಸೇವಾ ಸಮೃದ್ಧಿ ಕಾರ್ಯಕ್ರಮ ಜರುಗಿತು, ಡೊಳ್ಳೆ ಗಿಡಕ್ಕೆ ನೀರು ಹಾಕುವ ಮೂಲಕ ಪುರಸಭೆ ಮುಖ್ಯಾಧಿಕಾರಿ ಹೇಮಂತ್‌ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ, ಶಿರಾಳಕೊಪ್ಪ

ನಮ್ಮ ದೇಶದ ಬೀದಿಬದಿ ವ್ಯಾಪಾರಿಗಳು ಆರೋಗ್ಯದ ಕಡೆ ಗಮನಹರಿಸದೇ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್ ಹೇಳಿದರು.

ಪುರಸಭೆಯ ಯಡಿಯೂರಪ್ಪ ಸಭಾಂಗಣದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನನೋಪಾಯ ಇಲಾಖೆ ಹಾಗೂ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪಿಎಂ ಸ್ವನಿಧಿ ಸೇವಾ ಸಮೃದ್ಧಿ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಬೀದಿಬದಿ ವ್ಯಾಪಾರಿಗಳಿಗೆ ೧೦ ಸಾವಿರ ರು.ನಿಂದ ೨ ಲಕ್ಷದವರೆಗೂ ಸಾಲ ಕೊಡುತ್ತಿದೆ. ಅದರ ಸದುಪಯೋಗಪಡಿಸಿಕೊಳ್ಳುವಲ್ಲಿ ಸಬಲರಾಗ ಬೇಕು. ಹೊರ ದೇಶದಲ್ಲಿ ಬೀದಿಬದಿ ವ್ಯಾಪಾರಿಗಳು ಉತ್ತಮ ದೇಹದಾರ್ಢ್ಯ ಹೊಂದಿ ಕ್ರೀಡಾಪಟುಗಳಂತೆ ಕಾಣುತ್ತಾರೆ. ನೀವು ಸಹ ಉತ್ತಮ ಜೀವನ ನಡೆಸಲು ಶ್ರಮವಹಿಸಿ ಎಂದರು.

ತಾಲ್ಲೂಕ ಶಿಶು ಅಭಿವೃದ್ಧಿ ಅಧಿಕಾರಿ ರತ್ಮಮ್ಮ ಮಾತನಾಡಿ, ಮಹಿಳೆಯರ ಸ್ವಾವಲಂಬನೆ ಬದುಕಿಗಾಗಿ ಸರ್ಕಾರ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಮಹಿಳೆ ಯರು ಅದನ್ನು ಪಡೆಯದೇ ಆರ್ಥಿಕ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಕಾನೂನು ಅರಿವಿಲ್ಲದೇ ಬಾಲ್ಯ ವಿವಾಹಗಳನ್ನು ಸಾಕಷ್ಟು ನಡೆಸಲಾಗುತ್ತಿದೆ. ಹಾಗೆಯೇ ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಇತ್ತೀಚಿನ ದಿನಗಳಲ್ಲಿ ಬಾಲ ತಾಯಂದಿರು ಹೆಚ್ಚಾಗುತ್ತಿದ್ದಾರೆ. ಇವುಗಳನ್ನು ತಡೆಯಲು ಪೋಕ್ಸೋ ಕಾಯಿದೆ ಜಾರಿಗೆ ತಂದರೂ ಜಿಲ್ಲೆಯಲ್ಲಿ ೮೨೦ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇಂಥ ಬಳವಣಿಗೆಗಳು ಕಳವಳಕ್ಕೆ ಕಾರಣವಾಗಿದೆ ಎಂದರು.

ಸಮನ್ವಯ ಅಧಿಕಾರಿ ಕಾಶೀನಾಥ ಮಾತನಾಡಿ, ಬೀದಿಬದಿ ವ್ಯಾಪಾರಿಗಳು ಗ್ರಾಹಕರಿಗೆ ಗುಣಮಟ್ಟದ ಆಹಾರ ನೀಡಿದಾಗ ವ್ಯವಹಾರ ಸಹಜವಾಗಿ ವೃದ್ಧಿ ಆಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಹೇಮಂತ್‌, ಕಾರ್ಮಿಕ ಇಲಾಖೆಯ ಪಕೀರಪ್ಪ, ಆರೋಗ್ಯ ನಿರೀಕ್ಷಕ ಉಮೇಶ್ ಹಾಗೂ ಪುರಸಭೆ ಸದಸ್ಯರು ಹಾಜರಿದ್ದರು.