ಹಿಂದೂ ಸಮಾಜದ ಗೌರವಕ್ಕೆ ದಕ್ಕೆ ತರುವಂತಹ ಇಂತಹ ಕಾರ್ಯಗಳು ಮತ್ತೊಮ್ಮೆ ಆಗದಂತೆ ತಡೆಯಲು ನಾವು ನಮ್ಮ ಧರ್ಮದ ಕುರಿತು ಯುವಜನತೆಯಲ್ಲಿ ಭಕ್ತಿ, ಭಾವನೆ ಬೆಳೆಸುವುದು ಅಗತ್ಯ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಹುಬ್ಬಳ್ಳಿ:

ಈಚೆಗೆ ಅನ್ಯ ಕೋಮಿನ ಯುವಕನಿಂದ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ನಿವಾಸಕ್ಕೆ ಮಂಗಳವಾರ ಸಂಸದ ಜಗದೀಶ ಶೆಟ್ಟರ್ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಈ ವೇಳೆ ಮಾತನಾಡಿದ ಅವರು, ಹಿಂದೂ ಸಮಾಜದ ಗೌರವಕ್ಕೆ ದಕ್ಕೆ ತರುವಂತಹ ಇಂತಹ ಕಾರ್ಯಗಳು ಮತ್ತೊಮ್ಮೆ ಆಗದಂತೆ ತಡೆಯಲು ನಾವು ನಮ್ಮ ಧರ್ಮದ ಕುರಿತು ಯುವಜನತೆಯಲ್ಲಿ ಭಕ್ತಿ, ಭಾವನೆ ಬೆಳೆಸುವುದು ಅಗತ್ಯ, ರಾಜ್ಯದಲ್ಲಿ ಜಿಮ್‌ಗಳಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ತರಬೇತುದಾರರ ನಡವಳಿಕೆಯ ಕುರಿತು ನಿಗಾವಹಿಸಿ, ಜಿಮ್ ತೆರೆಯಲು ಪರವಾನಗಿ ನೀಡಲು ಕೆಲವು ಕಠಿಣ ಷರತ್ತು ಹಾಕಬೇಕು ಎಂದರು.

ಕಾಂಗ್ರೆಸ್‌ ಸರ್ಕಾರದ ಅಲ್ಪಸಂಖ್ಯಾತರ ಓಲೈಕೆಯಿಂದಲೇ ರಾಜ್ಯದಲ್ಲಿ ಹಿಂದೂ ಹೆಣ್ಣು ಮಕ್ಕಳ ಸುರಕ್ಷತೆಗೆ ಧಕ್ಕೆಯಾಗುವಂತೆ ಮಾಡಿ, ಲವ್ ಜಿಹಾದ್ ನಂತಹ ಪ್ರಕರಣಗಳು ಹೆಚ್ಚಾಗಲು ನೇರ ಕಾರಣವಾಗಿದೆ. ಹೆಣ್ಣು ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಂತಹ ಪ್ರಕರಣಗಳಲ್ಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಿ, ರಾಜ್ಯದಲ್ಲಿ ಇಂತಹ ಪ್ರಕರಣಗಳು ಮತ್ತೆ ತಲೆಯೆತ್ತದಂತೆ ಎಚ್ಚರ ವಹಿಸುವಂತೆ ಆಗ್ರಹಿಸಿದರು.

ಈ ವೇಳೆ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ಯುವ ಮುಖಂಡ ಸಂಕಲ್ಪ ಶೆಟ್ಟರ್, ಗೊವಿಂದ ಮಿಸ್ಕಿನ, ರಾಜೇಶ್ ಮಗಜಿಕೊಂಡಿ, ವಿಠ್ಠಲ್ ಲದವಾ, ಭಾಸ್ಕರ್ ಜಿತೂರಿ, ಪಾಲಿಕೆ ಸದಸ್ಯೆ ಸರಸ್ವತಿ ದೋಂಗಡಿ, ರಾಜು ಜರತಾರಘರ, ಮಂಜುನಾಥ ದಲಬಂಜನ, ಸದು ಕಬಾಡೆ, ರಾಘು ಹಬೀಬ್, ಪ್ರಶಾಂತ್ ಸಿಂಗ್ರಿ, ಅಕ್ಷಯ ಬದ್ದಿ, ದೀಪಕ ಮೇಹರವಾಡೆ, ಶ್ರೀ ಕುಶಾಲ ಪವಾರ್ ಇದ್ದರು.