ಸಾರಾಂಶ
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಶಕ್ತಿಯಾಗಿದೆ. ಶಿಕ್ಷಕರು ಸರ್ಕಾರಿ ಶಾಲೆಗೆ ಮಕ್ಕಳು ದಾಖಲಾಗುವ ವಾತಾವರಣ ಕಲ್ಪಿಸಿ ಎಂದು ಕೆಪಿಎಸ್ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಹೇಳಿದರು.ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ಶುಕ್ರವಾರ ಮಕ್ಕಳಿಗೆ ಗುಲಾಬಿ, ಪುಸ್ತಕ ನೀಡಿ ಸ್ವಾಗತಿಸಿ ಮಾತನಾಡಿ, ಶಿಕ್ಷಕರು ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಬದಲು ಸರ್ಕಾರಿ ಶಾಲೆಗೆ ಸೇರಿಸಿ ಮಾದರಿಯಾಗಿ ಎಂದರು.
ಸರ್ಕಾರಿ ಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಆಯ್ಕೆಯಾಗಲಿದ್ದು, ಗುಣಾತ್ಮಕ ಶಿಕ್ಷಣಕ್ಕೆ ಕೊರತೆ ಇಲ್ಲ. ಮಕ್ಕಳ ಭೌತಿಕ, ಶೈಕ್ಷಣಿಕ ಪ್ರಗತಿಗೆ ಪೂರಕ ವಾತಾವರಣವಿದೆ. ಎಲ್ಲವೂ ಉಚಿತವಾಗಿ ಸಿಗಲಿದೆ. ಪೋಷಕರಲ್ಲಿಜಾಗೃತಿ ಮೂಡಿಸಲು ಮುಂದಾಗಿ ಎಂದರು.ಎಸ್ಸೆಸ್ಸೆಲ್ಸಿ ಪರೀಕ್ಷಾ ವಿಧಾನ ಬದಲಾವಣೆಯಾಗಿದ್ದು, ಆರಂಭದಿಂದಲೇ ಮಕ್ಕಳನ್ನು ಆತ್ಮಸೈರ್ಯದಿಂದ ಪರೀಕ್ಷೆ ಎದುರಿಸಲು ತಯಾರು ಮಾಡಬೇಕು ಎಂದರು.
ಈ ವೇಳೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ. ಪ್ರಭುಕುಮಾರ್, ಪ್ರಾಂಶುಪಾಲ ದೊರೆಸ್ವಾಮಿ, ಉಪಪ್ರಾಂಶುಪಾಲ ಎಚ್.ಎಂ.ಬಸವರಾಜಪ್ಪ, ಬಿ.ಎನ್. ಪರಶಿವಮೂರ್ತಿ, ಸುರೇಶ್, ವೆಂಕಟರಮಣೇಗೌಡ, ದೀಪಕ್, ದೇವರಾಜು, ಕೃಷ್ಣಪ್ಪ, ನಾಗೇಶ್, ಲೀಲಾವತಿ, ರಾಗಿಣಿ, ನಂದಿನಿ ಉಪಸ್ಥಿತರಿದ್ದರು.ವಿವಿಧೆಡೆ ಸಂಭ್ರಮ:
ಹೋಬಳಿಯ ಮಾದಾಪುರ ಮೊರಾರ್ಜಿ ವಸತಿ ಶಾಲೆ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಕರು ಪುಷ್ಪಗುಚ್ಛ ನೀಡಿ, ಸಿಹಿ ನೀಡಿ ಬರಮಾಡಿಕೊಂಡರು.ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕಾರಿ: ಡಾ.ಎಸ್.ಸಿದ್ದೇಗೌಡಮಳವಳ್ಳಿ:ಸ್ಪರ್ಧಾತ್ಮಕ ಜಗತ್ತಿನಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಎಸ್.ಸಿದ್ದೇಗೌಡ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾ, ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ತೃತೀಯ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತಾನಾಡಿದರು.ತೃತೀಯ ಪದವಿ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ಬದಲಾಯಿಸುವ ನಿರ್ಣಾಯಕ ಪಾತ್ರವನ್ನು ವಹಿಸುವ ಹಂತವಾಗಿರುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಬೇಕೆಂದು ಹೇಳಿದರು.ಪದವಿ ಮುಗಿದ ಬಳಿಕ ಉನ್ನತ ವ್ಯಾಸಂಗ ಮಾಡುವುದು ನಿಮ್ಮ ಮೊದಲ ಆಯ್ಕೆಯಾದರೆ ನಂತರದ್ದು. ವಿಷಯದ ಆಯ್ಕೆ ಅಥವಾ ಕಾರ್ಯ ವ್ಯಾಪಿ ಕ್ಷೇತ್ರದ ಸವಾಲುಗಳು ಅಥವಾ ಸಮಸ್ಯೆಗಳನ್ನು ಎದುರಿಸಲು ಸನ್ನದ್ದರಾಗ ಬೇಕು. ಪಠ್ಯ ಚಟುವಟಿಕಗಳು ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.ಈ ವೇಳೆ ಪ್ರಾಂಶುಪಾಲ ಡಾ.ಮಹೇಶ್, ಸಾಂಸ್ಕೃತಿಕ ಮತ್ತು ಕ್ರೀಡಾ ಸಂಚಾಲಕ ಕೆ.ಎಲ್. ಮಲ್ಲೇಶ್, ಎನ್‌ಎಸ್‌ಎಸ್ ಕಾರ್ಯಕ್ರಮಧಿಕಾರಿ ಪ್ರೊ.ನಾಗೇಶ್ ಬಿ, ಸಹಪ್ರಾಧ್ಯಾಪಕ ಕುಮಾರ್, ಅನುಪ್, ಅಧೀಕ್ಷಕ ನಂದೀಶ್ ಸೇರಿದಂತೆ ಇತರರು ಇದ್ದರು.