ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುವಿದ್ಯಾರ್ಥಿಗಳಿಗೆ ಕೇವಲ ಅಂಕಗಳ ಹಿಂದೆ ಓಡುವಂತೆ ಮಾಡಬೇಡಿ. ಗುಣಾತ್ಮಕ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಚಿಂತನೆ ಮಾಡಿ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಪ್ರಾಂಶುಪಾಲರಿಗೆ ಸಲಹೆ ಮಾಡಿದರು.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಶನಿವಾರ ನಗರದ ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಹೆಚ್ಚು ಅಂಕ ಪಡೆಯಬೇಕು ಎಂದು ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ದಿನವಿಡೀ ಡ್ರಿಲ್ ಮಾಡುತ್ತಾರೆ. ಬೆಳಿಗ್ಗೆ ಡ್ರಿಲ್ಲಿಂಗ್ ಮೆಷಿನ್ ಆನ್ ಮಾಡಿ ಸಂಜೆವರೆಗೂ ಕೊರೆಯುತ್ತಾರೆ. ಇದರ ಹೊರತಾಗಿ ವಿದ್ಯಾರ್ಥಿಗಳಿಗೆ ಮತ್ಯಾವ ಚಟುವಟಿಕೆಗಳಿಗೂ ಅವಕಾಶ ಮಾಡುಕೊಡುವುದಿಲ್ಲ. ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಹುಚ್ಚು ಹಿಡಿಸದೆ, ಅವರನ್ನು ಮನುಷ್ಯರನ್ನಾಗಿ ಮಾಡಿ ಎಂದರು. ಕಾಲೇಜಿನ ಆಡಳಿತ ನಿರ್ವಹಣೆ ಹೊಣೆ ಹೊತ್ತಿರುವ ಪ್ರಾಂಶುಪಾಲರು ಪಾಠಪ್ರವಚನ ಸೇರಿದಂತೆ ಪ್ರತಿಯೊಂದು ಚಟುವಟಿಕೆಗಳ ಮೇಲೂ ಗಮನಹರಿಸಿ ಸಮರ್ಪಕವಾಗಿ ನಿರ್ವಹಿಸಬೇಕು. ಇಲಾಖೆಯ ಬದಲಾವಣೆಯಾಗುತ್ತಿರುವ ನಿಯಮ, ನಿರ್ದೇಶನ, ಪಾಲಿಸಿಗಳನ್ನು ತಿಳಿದು ಪಾಲನೆ ಮಾಡಬೇಕು. ಈ ಬಾರಿ ಕಾಲೇಜಿಗೆ ಉತ್ತಮ ಫಲಿತಾಂಶ ತರಬೇಕು ಎಂದು ನೀವೆಲ್ಲರೂ ಶ್ರಮ ಪಡುತ್ತಿರುವಿರಿ. ಆ ಫಲಿತಾಂಶ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಮೂಲಕ ಬರಲಿ. ಕಾಲೇಜಿನ ಕಲಿಕೆ, ಬೋಧಕರ ಮಾರ್ಗದರ್ಶನ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗಿರಬೇಕು ಎಂದು ಹೇಳಿದರು.ಅಂಕ ಸ್ಪರ್ಧೆಯಲ್ಲಿರುವ ಕಾಲೇಜಿನವರು ವಿದ್ಯಾರ್ಥಿಗಳನ್ನು ಅಂಕದ ಸ್ಪರ್ಧೆಗಳಿಗೆ ಒಡ್ಡಿದ್ದಾರೆ. ಕ್ರೀಡಾ ಚಟುವಟಿಕೆ, ಇಲಾಖೆ ನೀಡುವ ಇತರೆ ಚಟುವಟಿಕೆಗಳ ಆಸಕ್ತಿ ತೋರುವುದಿಲ್ಲ. ಇಲ್ಲಿ ಆಂಕವೇ ನಿರ್ಣಾಯಕವಾಗಿರುವ ಕಾರಣ, ಅದರ ನಿರೀಕ್ಷೆಯೇ ಹೀಗೆ ಮಾಡಿದೆ.ಏನೇ ಆಗಲಿ ಉತ್ತಮ ಫಲಿತಾಂಶ ಬರಲಿ, ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ಕಾಳಜಿ ವಹಿಸಬೇಕು ಎಂದು ತಿಳಿಸಿದರು.ಶ್ರೀದೇವಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರೂ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಕಾರ್ಯಕ್ರಮ ಉದ್ಘಾಟಿಸಿ, ಪಿಯುಸಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರಮುಖಘಟ್ಟ, ಮಾನಸಿಕ, ದೈಹಿಕ ಪರಿವರ್ತನೆಯಾಗುವ ಕಾಲಘಟ್ಟ. ಇಂತಹ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡವ ಹೊಣೆಗಾರಿಗೆ ಪದವಿಪೂರ್ವಕಾಲೇಜುಉಪನ್ಯಾಸರು, ಪ್ರಾಂಶುಪಾಲರ ಮೇಲಿರುತ್ತದೆ.ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಮುಂದೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಈ ಮೂಲಕ ನೀವು ಉತ್ತಮ ಸಮಾಜ ನಿರ್ಮಾಣದ ಹೊಣೆಗಾರರಾಗಿದ್ದೀರಿ ಎಂದರು.ಈ ವೇಳೆ ನಿವೃತ್ತರಾದ ಪ್ರಾಂಶುಪಾಲರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಜಿಲ್ಲೆಯ ಎಲ್ಲಾ ತಾಲೂಕುಗಳ ತಾಲೂಕುವಾರು ವಿಜ್ಞಾನ, ಕಲಾ, ವಾಣಿಜ್ಯ ವಿಭಾಗದಲ್ಲಿಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಿಸಲಾಯಿತು.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷಕೆ.ಪ್ರಭಾಕರರೆಡ್ಡಿ ಅಧ್ಯಕ್ಷತೆ ವಹಿಸಿದ್ದರು ಶ್ರೀದೇವಿ ಟ್ರಸ್ಟ್ ಎಂ.ಎಸ್.ಪಾಟೀಲ್, ಶ್ರೀದೇವಿ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ನರೇಂದ್ರ ವಿಶ್ವನಾಥ್, ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ವಿ.ಚಂದ್ರಶೇಖರ ಆರಾಧ್ಯ, ಖಜಾಂಚಿ ಜಿ.ಕೃಷ್ಣಮೂರ್ತಿ, ರಾಜ್ಯ ಪ್ರತಿನಿಧಿ ಬಿ.ಜೈರಾಮ್, ಕಾರ್ಯಾಧ್ಯಕ್ಷ ಬಿ.ಪಿ.ತ್ರಿವೇಣಿ, ಚಂದ್ರಯ್ಯ ಬೆಳವಾಡಿ, ಎಸ್.ರಾಜಕುಮಾರ್, ಎಸ್.ರವಿಕುಮಾರ್, ಆರ್.ಪರಮೇಶ್ವರಪ್ಪ, ಉಪಾಧ್ಯಕ್ಷ ಎಂ.ಡಿ.ಶಿವಕುಮಾರ್, ಜಗದೀಶ್ ಪ್ರಸಾದ್, ನೇ.ರಂ.ನಾಗರಾಜು, ಶಿವಣ್ಣ, ಸೋಮಸುಂದರ್, ಪ್ರತಿಭಾ, ಸಂಘಟನಾ ಕಾರ್ಯದರ್ಶಿಗಳಾದ ಸಿ.ಜಿ.ಸತೀಶ್, ನಾಗರಾಜು, ಲಕ್ಷ್ಮೀಕಾಂತ್, ಪಿ .ಚಂದ್ರಶೇಖರ್, ಜಂಟಿ ಕಾರ್ಯದರ್ಶಿಗಳಾದ ಅಕ್ಕಮ್ಮ, ಕೆ.ಟಿ.ಮಂಜುನಾಥ್, ಎ.ಮಲ್ಲಿಕಾರ್ಜುನ್, ಸತ್ಯನಾರಾಯಣ ಭಾಗವಹಿಸಿದ್ದರು.ನಂತರ ಸಂಘದ ವಾರ್ಷಿಕ ಮಹಾಸಭೆ ನಡೆಯಿತು.