ಸಾಮಾಜಿಕ ತಳಹದಿ ಮೇಲೆ ದೇಶ ಮುನ್ನಡೆಯಲು ಶ್ರಮಿಸಿ

| Published : Jan 27 2024, 01:15 AM IST

ಸಾರಾಂಶ

ಇಂಡಿ ತಾಲೂಕಿನ ಅಹಿರಸಂಗ ಗ್ರಾಮದ ಪಿಕೆಪಿಎಸ್‌ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಗಣರಾಜ್ಯೊತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪಿಕೆಪಿಎಸ್‌ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಇಂಡಿ

ಭಾರತ ಸ್ವತಂತ್ರಗೊಂಡು ಆಡಳಿತ ನಡೆಸಬೇಕು ಎಂದುಕೊಂಡಾಗ ಅನೇಕ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿತು. ಆಗ ಇದಕ್ಕೊಂದು ಆಡಳಿತಾತ್ಮಕ ವ್ಯವಸ್ಥೆ ಅಥವಾ ಕೈಗನ್ನಡಿ ಬೇಕು ಎಂಬ ಸದಾಶಯದಿಂದ ಡಾ.ಬಾಬು ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ಕರಡು ಸಮಿತಿಯ ಅಧ್ಯಕ್ಷತೆಯಲ್ಲಿ ದೇಶಕ್ಕೆ ಶ್ರೇಷ್ಠ ಸಂವಿಧಾನ ರಚಿಸಿ ನೀಡಿದ್ದಾರೆ ಎಂದು ಪಿಕೆಪಿಎಸ್‌ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ಹೇಳಿದರು.

ಶುಕ್ರವಾರ ತಾಲೂಕಿನ ಅಹಿರಸಂಗ ಗ್ರಾಮದ ಪಿಕೆಪಿಎಸ್‌ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಗಣರಾಜ್ಯೊತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾತ್ಮ ಗಾಂಧಿಜೀಯವರ ರಾಮರಾಜ್ಯದ ಕನಸು, ಅಂಬೇಡ್ಕರ ಅವರ ಸಾಮಾಜಿಕ ಸಮಾನತೆಯ ತಳಹದಿಯ ಮೇಲೆ ದೇಶ ಮುನ್ನಡೆಯಲು ಪ್ರತಿಯೊಬ್ಬರು ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಗಣರಾಜ್ಯೋತ್ಸವ, ಸ್ವಾತತ್ರ್ಯ ದಿನಾಚರಣೆ ರಾಷ್ಟ್ರೀಯ ಹಬ್ಬಗಳು ನಮ್ಮ ದೇಶದ ನಾಯಕರ ತ್ಯಾಗ, ಬಲಿದಾನದವನ್ನು ಸ್ಮರಿಸುವ ಹಬ್ಬಗಳಾಗಿವೆ. ತ್ಯಾಗ, ಬಲಿದಾನದಿಂದ ದೊರಕಿಸಿದ ಸ್ವಾತಂತ್ರ್ಯ, ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನ ರಚಿಸಿ ನೀಡಿದ ಸಂವಿಧಾನ ಅಭಿಮಾನದಿಂದ ನಾವೆಲ್ಲ ಉಳಿಸಬೇಕಿದೆ ಎಂದರು. ಪಿಕೆಪಿಎಸ್‌ ನಿರ್ದೇಶಕ ಶೇಖರ ಶಿವಶರಣ ಧ್ವಜಾರೋಃಣ ನೇರವೇರಿಸಿದರು.

ಭೂದೇವಿ ಕಬ್ಬು ಬೆಳೆಗಾರರ ಸಹಕಾರಿ ಸಂಘದ ಅಧ್ಯಕ್ಷ ಎಸ್‌.ಬಿ.ಬೂದಿಹಾಳ, ಕಾರ್ಯನಿರ್ವಹಣಾಧಿಕಾರಿ ಹೂವಣ್ಣ ಡೆಂಗಿ, ಗ್ರಾಪಂ ಅಧ್ಯಕ್ಷ ಹಸನಸಾಬ ಕಳಾವಂತ ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.