ಒಳಮೀಸಲು ವರದಿ ಅಂಗೀಕರಿಸಿದರೆ ಪ್ರಬಲ ಹೋರಾಟ: ಮುಖಂಡರ ಎಚ್ಚರಿಕೆ

| Published : Aug 13 2025, 02:31 AM IST

ಸಾರಾಂಶ

ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಒಪ್ಪಿಕೊಂಡು ಜಾರಿಗೆ ತಂದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಹಲವು ಮುಖಂಡರು ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ,ನಾಗಮೋಹನದಾಸ್‌ ಆಯೋಗ ನೀಡಿರುವ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಬಾರದು. ಒಂದೊಮ್ಮೆ ಅಂಗೀಕರಿಸಿದರೆ ಪ್ರಬಲ ಹೋರಾಟ ನಡೆಸಲಾಗುವುದು ಎಂದು ಹಲವು ಮುಖಂಡರು ಎಚ್ಚರಿಸಿದ್ದಾರೆ.

ವರದಿ ಕುರಿತು ಚರ್ಚಿಸಲು ಗಾಂಧಿ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಚಿಂತನಾ ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಮನೆ-ಮನೆಗೆ ತೆರಳಿ ಸರಿಯಾಗಿ ಸರ್ವೇ ನಡೆಸಿಲ್ಲ. ಬಂಜಾರ, ಭೋವಿ, ಕೊರಮ, ಕೊರಚರು ಸೇರಿದಂತೆ ಹಲವು ಸಮುದಾಯಗಳನ್ನು ಸರಿಯಾಗಿ ಗುರುತಿಸಿಲ್ಲ. ಆದ್ದರಿಂದ ವರದಿ ತಿರಸ್ಕರಿಸಬೇಕು. ಇಲ್ಲದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಚಂದ್ರಶೇಖರಯ್ಯ, ಮುಖಂಡ ಮಾವಳ್ಳಿ ಶಂಕರ್‌ ಮಾತನಾಡಿದರು. ಮಾಜಿ ಸಚಿವೆ ಡಾ.ಬಿ.ಟಿ.ಲಲಿತಾನಾಯ್ಕ, ಮಾಜಿ ಶಾಸಕರಾದ ಜಿ.ಚಂದ್ರಪ್ಪ, ಪ್ರಕಾಶ್ ರಾಠೋಡ್, ಮುಖಂಡರಾದ ನಾಗ ಸಿದ್ದಾರ್ಥ ಹೊಲೆಯರ್, ಆದರ್ಶ ಯಲ್ಲಪ್ಪ, ಶಿವಾನಂದ ಭಜಂತ್ರಿ, ಜಯದೇವನಾಯ್ಕ, ರವಿಕುಮಾರ್, ಅನಂತನಾಯ್ಕ, ಅನಿಲ್ ರಾಥೋಡ್, ನಂಜಾ ನಾಯ್ಕ್ ಮತ್ತಿತರರು ಹಾಜರಿದ್ದರು.