ಸಾರಾಂಶ
Struggle against Congress government in Bidar today
ಬೀದರ್: ರೈತರ ಫಲವತ್ತಾದ ಭೂಮಿ, ಮಠ ಮಂದಿರ, ಚರ್ಚ, ಮಸೀದಿ ಎಲ್ಲಾ ಸಮಾಜದ ಪ್ರಾರ್ಥನಾ ಸ್ಥಳ, ಬಡ ಜನರ ಆಸ್ತಿ ಹಾಗೂ ಸರ್ಕಾರಿ ಬೆಲೆ ಬಾಳುವ ಗೋಮಾಳ ಮತ್ತು ವಾಣಿಜ್ಯ ಉದ್ಯಮಕ್ಕೆ ಮೀಸಲಿಟ್ಟ ಭೂಮಿಯನ್ನು ಕಾನೂನು ಬಾಹಿರವಾಗಿ ಪಹಣಿಯಲ್ಲಿ ವಕ್ಫ್ ಮಂಡಳಿ ಹೆಸರನ್ನು ಸೇರಿಸಿ ರಾಜ್ಯದಲ್ಲಿ ತೊಗಲಕ್ ದರ್ಬಾರ್ ಆಡಳಿತವನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದು ಆರೋಪಿಸಿ, ಇದೇ ನ.4ರಂದು ಬಿಜೆಪಿಯು ಹೋರಾಟ ಹಮ್ಮಿಕೊಂಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಆದೇಶದ ಮೇರೆಗೆ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ರಾಜ್ಯ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಅವರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ನಗರದ ಗಣೇಶ ಮೈದಾನದಿಂದ ಬೃಹಕ್ ಪ್ರತಿಭಟನೆ ನಡೆಸುವ ಮೂಲಕ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲಾಗುವದು.ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರು, ರೈತರು, ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಎಲ್ಲಾ ಸಂಘಟನೆ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಗುರುನಾಥ ರಾಜಗೀರಾ, ಚಂದ್ರಯ್ಯ ಸ್ವಾಮಿ, ಸಂಜೀವಕುಮಾರ ಕೋಳಿ ಕೋರಿದ್ದಾರೆ.
----ಫೈಲ್ 3ಬಿಡಿ3