ಫೆ.2ರಂದು ಗಾಣಿಗ ಸಮುದಾಯದಿಂದ ಹೋರಾಟ

| Published : Jan 30 2024, 02:02 AM IST

ಸಾರಾಂಶ

ಬಾಗಲಕೋಟೆ: ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯ ಅನುಷ್ಠಾನ, ನೊಂದಣಿ, ಅಧಿಕೃತ ಕಚೇರಿ ಹಾಗೂ ಹೆಚ್ಚಿನ ಅನುದಾನ ಬೇಡಿಕೆಗಾಗಿ ಫೆ.2ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಪ್ರೀಡಂ ಪಾರ್ಕ್‌ ನಲ್ಲಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಆನಂದ ಕೆ.ಮಂಡ್ಯ ಹೇಳಿದರು.ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಗಾಣಿಗ ಅಭಿವೃದ್ಧಿ ನಿಗಮ ಮಂಡಳಿಯ ಅನುಷ್ಠಾನ, ನೊಂದಣಿ, ಅಧಿಕೃತ ಕಚೇರಿ ಹಾಗೂ ಹೆಚ್ಚಿನ ಅನುದಾನ ಬೇಡಿಕೆಗಾಗಿ ಫೆ.2ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಪ್ರೀಡಂ ಪಾರ್ಕ್‌ ನಲ್ಲಿ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾದಿಂದ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಆನಂದ ಕೆ.ಮಂಡ್ಯ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಣಿಗ ಸಮುದಾಯ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ಸಮಾಜವಾಗಿದ್ದು, ರಾಜ್ಯದಲ್ಲಿ ಸುಮಾರು 60 ಲಕ್ಷ ಜನಸಂಖ್ಯೆ ಹೊಂದಿದ್ದು, ಸರ್ಕಾರದಿಂದ ಬರುವ ಸೌಲಭ್ಯದಿಂದ ವಂಚಿತರಾಗಿದ್ದು, ಗಾಣಿಗ ನಿಗಮ ಮಂಡಳಿಯ ಅನುಷ್ಠಾನ, ನೋಂದಣಿ, ಅಧಿಕೃತ ಕಚೇರಿ ಹಾಗೂ ಹೆಚ್ಚಿನ ಅನುದಾನ ನೀಡಬೇಕೆಂದು ಹೋರಾಟದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಒಂದು ದಿನದ ಶಾಂತಿ ಯುವ ಹೋರಾಟಕ್ಕೆ ಗಾಣಿಗ ಸಮುದಾಯ ಮಠಾಧಿಪತಿಗಳು, ಗುರುಗಳು, ರಾಜ್ಯ ಮಟ್ಟದ ಎಲ್ಲ ಗಾಣಿಗ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಂಘಟನೆಗಳು, ಸಮುದಾಯದ ಮುಖಂಡರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪರಶುರಾಮ ಗುಡದಿನ್ನಿ, ಮಲ್ಲಪ್ಪ ಹೊಸಕೇರಿ ಉಪಸ್ಥಿತರಿದ್ದರು.