ಬಾದಾಮಿ: ಐತಿಹಾಸಿಕ ತಾಣ ಬಾದಾಮಿ ಅಭಿವೃದ್ಧಿ ಸಲುವಾಗಿ ವಿವಿಧ ಬೇಡಿಕೆಗಳ್ನು ಈಡೇರಿಸಬೇಕು ಎಂದು ಬಾದಾಮಿ ಹೋರಾಟ ಸಮಿತಿ ಆಗ್ರಹಿಸಿದೆ. ನಗರದ ಕಾನಿಪ ಭವನದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಎಸ್.ಹಿರೇಹಾಳ ಹಾಗೂ ಕಾರ್ಯದರ್ಶಿ ಇಷ್ಟಲಿಂಗ ಮಾತನಾಡಿ, ಬಾದಾಮಿ ಹೊಸ ಬಸ್ ನಿಲ್ದಾಣದ ಜೊತೆಗೆ ಬಸ್ ಡಿಪೋ ಸ್ಥಳಾಂತರ ಮಾಡಬೇಕು ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು.

ಬಾದಾಮಿ: ಐತಿಹಾಸಿಕ ತಾಣ ಬಾದಾಮಿ ಅಭಿವೃದ್ಧಿ ಸಲುವಾಗಿ ವಿವಿಧ ಬೇಡಿಕೆಗಳ್ನು ಈಡೇರಿಸಬೇಕು ಎಂದು ಬಾದಾಮಿ ಹೋರಾಟ ಸಮಿತಿ ಆಗ್ರಹಿಸಿದೆ.

ನಗರದ ಕಾನಿಪ ಭವನದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಎಂ.ಎಸ್.ಹಿರೇಹಾಳ ಹಾಗೂ ಕಾರ್ಯದರ್ಶಿ ಇಷ್ಟಲಿಂಗ ಮಾತನಾಡಿ, ಬಾದಾಮಿ ಹೊಸ ಬಸ್ ನಿಲ್ದಾಣದ ಜೊತೆಗೆ ಬಸ್ ಡಿಪೋ ಸ್ಥಳಾಂತರ ಮಾಡಬೇಕು ಹಾಗೂ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ತಾಲೂಕಾ ಕ್ರೀಡಾಂಗಣ ನಿರ್ಮಾಣ ಮಾಡಬೇಕು, ತರಕಾರಿ ಮಾರುಕಟ್ಟೆ ಸ್ಥಳಾಂತರ ಮಾಡಬೇಕು ಹಾಗು ಹೊಸ ಮಾರುಕಟ್ಟೆ ನಿರ್ಮಾಣ, ಪಾರ್ಕಿಂಗ್‌, ಪ್ಲಾಜಾ ನಿರ್ಮಾಣ, ಹೊಂಡದ ಕಟ್ಟೆ ಹತ್ತಿರದ 90 ಮನೆಗಳನ್ನು ಸ್ಥಳಾಂತರ ಮಾಡಿ ಬೇರೆ ಕಡೆಗೆ ನಿರ್ಮಾಣ ಮಾಡಬೇಕು. 9 ಎಕರೆ ಪ್ರವಾಸೋದ್ಯಮಕ್ಕೆ ಸ್ಥಳಾಂತರ, ಎಸಿ ಅವರಿಗೆ ಕ್ರಿಯಾ ಯೋಜನೆ ನೀಡಿದರೂ ಪ್ರಯೋಜನ ಆಗಿಲ್ಲ. ಬೈಪಾಸ್‌ ರಸ್ತೆ ನಿರ್ಮಾಣ ಮಾಡಬೇಕು. ಸುಸಜ್ಜಿತ ಪಾರಂಪರಿಕ ರಸ್ತೆಗಳನ್ನು ನಿರ್ಮಾಣ ಮಾಡಬೇಕು, ಪಾದಚಾರಿ ರಸ್ತೆ ಒತ್ತುವರಿ ತೆರುವುಗೊಳಿಸಬೇಕು ಎಂದರು.ನಗರದ ಬೀದಿ ದೀಪಗಳನ್ನು ನಿರ್ವಹಣೆ ಮಾಡಬೇಕು, ಮಹಿಳಾ ಮತ್ತು ಪುರುಷ ಶೌಚಾಲಯಗಳನ್ನು ನಿರ್ಮಾಣ ಮಾಡುವುದು ಸೇರಿ ಎಲ್ಲ ಬೇಡಿಕೆಗಳನ್ನು ಸಂಬಂಧಿಸಿದ ಶಾಸಕರು, ಸಂಸದರು, ಸ್ಥಳೀಯ ಪುರಸಭೆಯ ಹಾಗೂ ಅಧಿಕಾರಿಗಳು ತುರ್ತು ಗಮನಹರಿಸಿ ಈಡೇರಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಸದಸ್ಯರಾದ ಚಂದ್ರು ಸೂಡಿ, ರಮೇಶ ನಾಲತವಾಡ, ಹನಮಂತ ತಳವಾರ, ಬಸವರಾಜ ಗೊರಕೊಪ್ಪನವರ, ಯಮನೂರ ಹುಳಿಪಲ್ಲೆ, ಬಸವರಾಜ ಹುಲ್ಲೂರ ಹಾಗೂ ರುದ್ರೇಶ್ ಹುಣಶಿಗಿಡದ ಹಾಜರಿದ್ದರು.