ಪಟ್ಟಣ ಸಮೀಪದ ಮಾಕಾಪೂರ ಗ್ರಾಮದಲ್ಲಿ ಕಳೆದ 14 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಬೇಸತ್ತಮಾಕಾಪೂರ ಗ್ರಾಮಸ್ಥರು ಹುನೂರು ಗ್ರಾಮ ಪಂಚಾಯಿತಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮುದಗಲ್: ಪಟ್ಟಣ ಸಮೀಪದ ಮಾಕಾಪೂರ ಗ್ರಾಮದಲ್ಲಿ ಕಳೆದ 14 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಬೇಸತ್ತ
ಮಾಕಾಪೂರ ಗ್ರಾಮಸ್ಥರು ಹುನೂರು ಗ್ರಾಮ ಪಂಚಾಯಿತಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ನೀರಿನ ಸಮಸ್ಯೆ ದಿನೇ ದಿನೇ ಹೆಚ್ಚಾಗಿದ್ದು, ಗ್ರಾಪಂ ಅಧಿಕಾರಿಗಳು ಮೌನಕ್ಕೆ ಜಾರಿದ್ದಾರೆ. ಈಗಾಗಲೇ ಗ್ರಾಮದ ಜನತೆ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಕೂಡ ಅಧಿಕಾರಿಗಳು ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯತನದಿಂದ ಮಾಕಾಪೂರ ಗ್ರಾಮದ ಜನತೆಗೆ ನೀರಿನ ತೊಂದರೆ ಎದುರಾಗಿದ್ದು, ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಪಂ ಮುಂದೆ ಧರಣಿ ನಡೆಸಿದರು.
ಸಮಸ್ಯೆ ಬಗೆಹರಿಸುವವರೆಗೂ ಕೂಡ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಗ್ರಾಪಂ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.ನಂತರ ತಾಪಂ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ದೂರವಾಣಿ ಮೂಲಕ ಮಾತನಾಡಿ, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ
ಬೆನ್ನಲ್ಲೇ ಪ್ರತಿಭಟನೆ ಕೈಬಿಡಲಾಯಿತು.ಪ್ರತಿಭಟನೆಯಲ್ಲಿ ಮಾಕಾಪೂರ ಗ್ರಾಮದ ರಂಗನಗೌಡರು, ಬಸವರಾಜ ಹೊನ್ನಳ್ಳಿ, ವೀರಣ್ಣ ಸುಂಕದ, ಶಿವಪ್ಪ ಬಯ್ಯಾಪೂರ, ಬಂಡೆಪ್ಪ ತಳವಾರ, ದೊಡ್ಡಪ್ಪ ಕೊಳಬಾಳ, ದೇವಮ್ಮ ಬಯ್ಯಾಪೂರ, ಶೇಕಮ್ಮ ಮುದ್ದಲಗುಂದಿ, ರತ್ನಮ್ಮ ಮುದ್ದಲಗುಂದಿ, ಯಂಕಮ್ಮ ಹೊನ್ನಳ್ಳಿ, ದುರುಗವ್ವ ಕುರುಬರ ಸೇರಿದಂತೆ ಇನ್ನಿತರರು ಇದ್ದರು.