ಸಾರಾಂಶ
ಯಗಟಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 55 ಲಕ್ಷ ರು. ವೆಚ್ಚದ ನೂತನ ಕೊಠಡಿ ಉದ್ಘಾಟನೆಯಲ್ಲಿ
ಕನ್ನಡಪ್ರಭ ವಾರ್ತೆ, ಕಡೂರುನಮ್ಮ ಹಕ್ಕುಗಳನ್ನು ಪಡೆಯಲು ವೇಗವಾಗಿ ಬೆಳೆಯುತ್ತಿರುವ ಕಡೂರನ್ನು ಹಿಂದಿನಂತೆ ಜಿಲ್ಲಾ ಕೇಂದ್ರ ಮಾಡುವ ಸಮಯ ಬಂದಿದ್ದು ಹೋರಾಟಕ್ಕೆ ಸಜ್ಜಾಗುವ ಅಗತ್ಯವಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು. ಬುಧವಾರ ಕಡೂರು ವಿಧಾನಸಭಾ ಕ್ಷೇತ್ರದ ಯಗಟಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 55 ಲಕ್ಷ ರು. ವೆಚ್ಚದ ನೂತನ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಡೂರು ಜಿಲ್ಲಾ ಕೇಂದ್ರ ವಾಗಿದ್ದು ಇತಿಹಾಸ. ಅದೇಕೋ ನಮ್ಮ ಬಯಲು ಪ್ರದೇಶವನ್ನು ಸೇರಿಸಿಕೊಂಡು ಚಿಕ್ಕಮಗಳೂರು ಜಿಲ್ಲೆಯಾಗಿ ಘೋಷಣೆ ಮಾಡಿದರೂ ನಮಗೆ ಯಾವುದೇ ಲಾಭವಿಲ್ಲ. ಸಾಕಷ್ಟು ಸವಲತ್ತು ಪಡೆಯುವಲ್ಲೂ ವಂಚಿತರಾಗುತ್ತಿದ್ದೇವೆ. ಕಡೂರನ್ನು ಹಿಂದಿನಂತೆ ಜಿಲ್ಲಾ ಕೇಂದ್ರ ಮಾಡುವ ಹೋರಾಟಕ್ಕೆ ಈಗ ಸಮಯ ಬಂದಿದೆ ಎಂದರು.
ಆರ್ಥಿಕವಾಗಿ ಹಿಂದುಳಿದಿರುವ ಬಡವರಿಗೆ ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ, ಯುವನಿಧಿ ಪ್ರತಿಯೊಂದು ಕುಟುಂಬಕ್ಕೂ ತಲುಪಿದೆ ಇದರಿಂದ ಕುಟುಂಬಗಳ ಆರ್ಥಿಕ ಶಕ್ತಿ ಹೆಚ್ಚಾಗಲಿದೆ ಎಂದರು. ಯಗಟಿಯಲ್ಲಿ 2 ಕೋಟಿ ರು.ಗಳ ವೆಚ್ಚದಲ್ಲಿ ರೈತ ಸಂಪರ್ಕ ಕೇಂದ್ರ, 20 ಲಕ್ಷ ರು.ಗಳ ಅಂಬೇಡ್ಕರ್ ಭವನ ನಿರ್ಮಿಸಲು ಅನುದಾನ ನೀಡಿದ್ದೇನೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುವುದು ಜನ ಪ್ರತಿನಿಧಿಗಳ ಕರ್ತವ್ಯ. ಯಗಟಿ ಗ್ರಾಮದ ಆಸ್ಪತ್ರೆ ಈ ಹಿಂದೆ ಸಮುದಾಯ ಆರೋಗ್ಯಕೇಂದ್ರವಾಗಿ ಮೇಲ್ದರ್ಜೆಗೇರಿದ್ದು, ಕೊರತೆ ಇರುವ ವೈದ್ಯರು, ಸಿಬ್ಬಂದಿ ಭರ್ತಿಗೆ ಈಗಾಗಲೇ ಆರೋಗ್ಯ ಸಚಿವರಿಗೆ ಮನವಿ ಮಾಡಿದ್ದೇನೆ ಎಂದರು.ಇಂಗ್ಲೀಷ್ ಮಾಧ್ಯಮದ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ನೀಡಲು ಈಗಾಗಲೇ ಸಚಿವರೊಂದಿಗೆ ಚರ್ಚಿಸಿದ್ದು. ಯಗಟಿ ಶಾಲೆಯಲ್ಲಿ 4 ನೇ ತರಗತಿವರೆಗೆ ಇರುವ ಆಂಗ್ಲ ಮಾಧ್ಯಮವನ್ನು 10ನೇ ತರಗತಿವರೆಗೆ ವಿಸ್ತರಿಸಲು ಗಮನ ಹರಿಸುತ್ತೇನೆ ಎಂದರು.
ಯಗಟಿಯ ಪದವಿ ಪೂರ್ವ ಕಾಲೇಜಿಗೆ ಅಗತ್ಯವಿರುವ 2 ಹೆಚ್ಚುವರಿ ಕೊಠಡಿಗಳ ಜೊತೆಗೆ ಕಾಂಪೌಂಡ್ ನಿರ್ಮಾಣ, ಪ್ರೌಢ ಶಾಲೆ ಕಟ್ಟಡಗಳ ದುರಸ್ತಿಗೆ ಒತ್ತು ನೀಡಲಾಗುವುದು. ಪ್ರಥಮ ದರ್ಜೆ ಕಾಲೇಜಿಗೆ ಮೂಲಭೂತ ಸೌಕರ್ಯ ಕಲ್ಪಿಸ ಲಾಗು ವುದು ಎಂದು ತಿಳಿಸಿದರು.ಯಗಟಿ ಗ್ರಾಪಂ ಮಾಜಿ ಅಧ್ಯಕ್ಷ ವೈ.ಎಸ್. ರವಿಪ್ರಕಾಶ್ ಮಾತನಾಡಿ, ಶಾಸಕ ಆನಂದ್ ಅವರು ಹೋರಾಟ ಮತ್ತು ರಾಜಕೀಯ ಬದ್ಧತೆಯಿಂದ ಶಾಸಕರಾದವರು, ಕೆ.ಎಂ.ಕೃಷ್ಣಮೂರ್ತಿ, ವೈಎಸ್ ವಿ ದತ್ತ ಸೇರಿದಂತೆ ಆಯಾ ಕಾಲ ಘಟ್ಟದಲ್ಲಿ ಶಾಸಕರಾದವರು ಯಗಟಿ ಹೋಬಳಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅದರಂತೆ ನೂತನ ಶಾಸಕರು, ಕಾಲೇಜಿಗೆ ವಾಣಿಜ್ಯ ವಿಭಾಗ ತೆರೆಯುವಿಕೆ, ಗ್ರಾಮ ಪಂಚಾಯ್ತಿ ಮಾದರಿ ಶಾಲೆಗೆ ಒತ್ತು ನೀಡಲಿ. ಕಡೂರು ಜಿಲ್ಲೆಯನ್ನು ಮರಳಿ ಪಡೆಯಲು ಶಾಸಕರು ಪ್ರಯತ್ನ ನಡೆಸುತ್ತಿದ್ದು ಇದಕ್ಕೆ ನಮ್ಮೆಲ್ಲರ ಬೆಂಬಲವಿದೆ ಎಂದರು.
ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿಕ್ಷಕರು ಶಾಲಾ ಮಕ್ಕಳನ್ನು ಬೇರೆ ಶಾಲೆಗಳಿಗೆ ಆಟೋದಲ್ಲಿ ಕರೆದುಕೊಂಡು ಹೋಗುತ್ತಿರುವುದಕ್ಕೆ ಕಾರಣ. ಮಕ್ಕಳು ಕಡಿಮೆ ಇರುವುದು. ಹಾಗೂ ಹೆಚ್ಚುವರಿ ಶಿಕ್ಷಕರನ್ನು ಬೇರೆಡೆಗೆ ವರ್ಗಾವಣೆ ಮಾಡುತ್ತಾರೆ ಎಂಬ ಭಯದಿಂದ ಎಂದು ತಿಳಿದು ಬಂದಿತು. ಆನಂದ್ ರವರು 15 ದಿನಕ್ಕೆ ಯಗಟಿ ಆಸ್ಪತ್ರೆಗೆ ಭೇಟಿ ನೀಡಿದಾಗ ಆ್ಯಂಬುಲೆನ್ಸನ್ನು ದುರಸ್ತಿಪಡಿಸಿ ಉಪಯೋಗಿಸು ವಂತೆ ಸೂಚನೆ ನೀಡಿದ್ದು ಅವರ ಕಾಳಜಿಗೆ ಸಾಕ್ಷಿ ಎಂದರುಕಾಲೇಜು ಪ್ರಾಚಾರ್ಯ ಜಿ.ರೇವಣ್ಣ ಮಾತನಾಡಿ, ಇನ್ನು 2 ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಕಾಲೇಜಿಗೆ ಇದೆ. ಕಾಂಪೌಂಡ್ ಅವಶ್ಯವಾಗಿ ಬೇಕಾಗಿದ್ದು ಶಾಸಕರು ಕ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಯರದಕೆರೆ ಎಂ.ರಾಜಪ್ಪ, ಶರತ್ ಕೃಷ್ಣಮೂರ್ತಿ, ಡಿ.ಎಸ್. ಉಮೇಶ್,ಗೋವಿಂದಪ್ಪ,ಕಡೂರು ಕಾಲೇಜು ಪ್ರಾಂಶುಪಾಲ ರಾಜಪ್ಪ,ಯಗಟಿ ಗ್ರಾ.ಪಂ. ಅಧ್ಯಕ್ಷೆ ಕಲಾವತಿ ವೆಂಕಟೇಶ್, ಜ್ಯೋತಿ, ಜಿಪಂ ಮಾಜಿ ಸದಸ್ಯ ಷಣ್ಮುಖ ಭೋವಿ, ಯಗಟಿ ಪದವಿ ಕಾಲೇಜು ಪ್ರಾಂಶುಪಾಲ ಡಾ.ಶರತ್, ನಿವೃತ್ತ ಶಿಕ್ಷಕ ರಂಗಪ್ಪ ಹಾಜರಿದ್ದರು. --ಬಾಕ್ಸ್ ಸುದ್ದಿ---ರಾಜ್ಯ ಸರ್ಕಾರದ 5 ಗ್ಯಾರಂಟಿಗಳ ಹೆಸರನ್ನು ಯಾರು ಹೇಳುತ್ತಿರಿ ಕೈ ಎತ್ತಿ ಹೇಳಿ ಎಂದು ಶಾಸಕರು ಪ್ರಶ್ನಿಸಿದಾಗ ಯಾರೊಬ್ಬ ವಿದ್ಯಾರ್ಥಿಯು 5 ಗ್ಯಾರಂಟಿಗಳ ಹೆಸರನ್ನು ಹೇಳಲಿಲ್ಲ. ಬದಲಾಗಿ ತಕ್ಷಣವೇ ಶಾಸಕರು ಮುಖ್ಯಮಂತ್ರಿ ಹೆಸರನ್ನು ಹೇಳಿ ಎಂದಾಗ ಮಕ್ಕಳೆಲ್ಲಾ ಸಿದ್ದರಾಮಯ್ಯ ಎಂದು ಪದೇಪದೇ ಕೂಗಿದರು..
24ಕೆಕೆಡಿಯೆು1.ಕಡೂರು ಕ್ಷೇತ್ರದ ಯಗಟಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ನೂತನ ಹೆಚ್ಚುವರಿ ಕೊಠಡಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು.