ಸಾರಾಂಶ
ಉಪನ್ಯಾಸಕನ ಅಮಾನತಿಗೆ ಆಗ್ರಹಿಸಿ ವಿದ್ಯಾರ್ಥಿಗಳು, ಪೋಷಕರಿಂದ ಆಕ್ರೋಶಕನ್ನಡಪ್ರಭ ವಾರ್ತೆ ಅಂಕೋಲಾ
ತಾಲೂಕಿನ ಪೂಜಗೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರೊಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ವಿದ್ಯಾರ್ಥಿಗಳು, ಪೋಷಕರು, ಪೋಷಕ ಸಮಿತಿ ಸದಸ್ಯರು ಮತ್ತು ವಿವಿಧ ಸಂಘಟನೆಗಳು ಮಂಗಳವಾರ ಕಾಲೇಜಿನ ಹೊರ ಆವರಣದಲ್ಲಿ ಪ್ರತಿಭಟನೆ ನಡೆಸಿ, ದೌರ್ಜನ್ಯ ಎಸೆಗಿದ ಉಪನ್ಯಾಸಕನನ್ನು ತಕ್ಷಣವೇ ಅಮಾನತು ಮಾಡುವಂತೆ ಆಗ್ರಹಿಸಿದರು.ಆರೋಪವೇನು?:ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾಮಚಂದ್ರ ಅಂಕೋಲೇಕರ್ ಕೆಲವು ವಿದ್ಯಾರ್ಥಿನಿಯರಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದಾರಂತೆ. ಇವರಲ್ಲಿ ಓರ್ವ ವಿದ್ಯಾರ್ಥಿನಿ ತನಗೆ ಉಪನ್ಯಾಸಕ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಮತ್ತು ಆಡಳಿತ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಿಗೆ ಪತ್ರ ಬರೆದು ದೂರು ಸಲ್ಲಿಸಿದ್ದಳು.
ಈ ಪತ್ರಕ್ಕೆ ಪ್ರಾಂಶುಪಾಲರು ಉತ್ತರ ನೀಡಬೇಕು ಎಂದು ಕಾಲೇಜು ಜಂಟಿ ನಿರ್ದೇಶಕರಿಂದ ಪತ್ರ ಬಂದ ಕಾರಣ, ಪ್ರಾಂಶುಪಾಲರಾದ ಡಾ. ವಿಜಯಾ ಪಾಟೀಲ್ ಸೋಮವಾರ ಕಾಲೇಜು ಅವಧಿ ಮುಗಿದ ನಂತರವೂ ಈ ಪತ್ರ ಬರೆದ ವಿದ್ಯಾರ್ಥಿನಿಯನ್ನು ಕಾಲೇಜಿನಲ್ಲಿ ಉಳಿಸಿಕೊಂಡು, ತಾನು ಹೇಳಿದಂತೆ ನೀನು ಬರೆದು ಕೊಡಬೇಕು ಎಂದು ತಾಕೀತು ಮಾಡಿದ್ದರು ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು.ಈ ಹಿನ್ನೆಲೆ ವಿದ್ಯಾರ್ಥಿಗಳು ಆಕ್ರೋಶಗೊಂಡರು ಮತ್ತು ಈ ವಿಷಯವನ್ನು ಕುಟುಂಬದವರಿಗೂ ಹಾಗೂ ಆಡಳಿತ ಮಂಡಳಿಯವರಿಗೂ ತಿಳಿಸಿದಾಗ ಸಾರ್ವಜನಿಕರು ಪ್ರಾಂಶುಪಾಲರು ಮಾಡಿರುವ ತಪ್ಪನ್ನು ಪ್ರಶ್ನಿಸಿ ಪ್ರತಿಭಟನೆಗೆ ಇಳಿದರು.
ಸಿಪಿಐ ಚಂದ್ರಶೇಖರ ಮಠಪತಿ ಮಾತನಾಡಿ, ಕಾಲೇಜಿನಲ್ಲಿ ಇಂತಹ ಸಮಸ್ಯೆಗಳು ನಡೆಯುತ್ತಿದ್ದು, ಪ್ರಾಂಶುಪಾಲರು ಈ ಬಗ್ಗೆ ಕಾಳಜಿ ವಹಿಸದೆ, ತಪ್ಪು ಮಾಡಿದ ಉಪನ್ಯಾಸಕನ ಪರವಾಗಿ ಮಾತನಾಡುತ್ತಿದ್ದಾರೆಂದು ವಿದ್ಯಾರ್ಥಿಗಳು ತಿಳಿಸಿದ ಪರಿಣಾಮವಾಗಿ ಸೋಮವಾರವೇ ಉಪನ್ಯಾಸಕ ಮತ್ತು ಪ್ರಾಚಾರ್ಯರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮಂಜೇಶ್ವರ ನಾಯ್ಕ, ಸದಸ್ಯರಾದ ಮಾಬಲೇಶ್ವರ ನಾಯ್ಕ, ಮಧುಕೇಶ್ವರ ದೇವರಬಾವಿ, ನಾರಾಯಣ ನಾಯ್ಕ ಸೂರ್ವೆ, ಶಾಂತಿ ಆಗೇರ, ರಾಜೇಶ್ ತಾಂಡೇಲ್ ಪ್ರತಿಭಟನೆ ನಡೆಯುವ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಅಹವಾಲನ್ನು ಆಲಿಸಿದರು.
ಈ ಸಂದರ್ಭ ಉಪಾಧ್ಯಕ್ಷ ಮಂಜೇಶ್ವರ ನಾಯ್ಕ ಮಾತನಾಡಿ, ನಮ್ಮ ಆಡಳಿತ ಮಂಡಳಿಯ ಗಮನಕ್ಕೆ ಯಾವುದೇ ವಿಷಯವನ್ನು ತರದೆ ನೀವು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದು ತಪ್ಪು ಎಂದು ಪ್ರಾಂಶುಪಾಲರನ್ನು ತರಾಟೆಗೆ ತೆಗೆದುಕೊಂಡರು.ಪ್ರತಿಭಟನಾಕಾರರಾದ ಸಂಜಯ್ ಬಲೇಗಾರ, ಪ್ರಮೋದ ಬಾನಾವಳಿಕರ, ರಾಜು ಹರಿಕಾಂತ, ಸುಂದರ ಖಾರ್ವಿ, ಸಚಿನ್ ಅಸ್ನೋಟಿಕರ, ಧೀರಜ್ ಬಾನಾವಳಿಕರ, ಸೂರಜ್ ಹರಿಕಾಂತ, ವಿಕಾಶ್ ಖಾರ್ವಿ, ಪುಂಡಲೀಕ ಬಾನಾವಳಿಕರ, ನೀಲೇಶ್ ಹರಿಕಾಂತ, ಜ್ಞಾನೇಶ್ವರ ಹರಿಕಾಂತ, ಮಾದೇವ ಗೌಡ, ಸಹನಾ ನಾಯ್ಕ, ಸಂತೋಷ ನಾಯ್ಕ, ಗುರುನಾಥ ಬಾನಾವಳಿಕರ, ಬೋಳಾ ಕುಡ್ತಾಳಕರ, ಮಂಜುಳಾ ನಾಯ್ಕ, ಶಕುಂತಲಾ ಬಾನಾವಳಿಕರ ಸೇರಿದಂತೆ ಇತರರಿದ್ದರು.ಮನವಿ
ಜೈ ಹಿಂದ್ ಮೈದಾನದಲ್ಲಿ ಸಭೆ ಸೇರಿ ಅಲ್ಲಿಂದ ಕಾಲೇಜಿಗೆ ತೆರಳಿ ಪ್ರತಿಭಟನೆ ನಡೆಸಿ, ಅಲ್ಲಿಂದ ಪುನಃ ತಹಸೀಲ್ದಾರ್ ಕಚೇರಿಗೆ ಬಂದ ಪ್ರತಿಭಟನಾಕಾರರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಉಪನ್ಯಾಸಕ ರಾಮಚಂದ್ರ ಅಂಕೋಲೇಕರ ಅವರನ್ನು ತಕ್ಷಣ ಅಮಾನತುಗೊಳಿಸಲು ಮತ್ತು ಪ್ರಾಂಶುಪಾಲರನ್ನು ವರ್ಗಾವಣೆ ಮಾಡಲು ಒತ್ತಾಯಿಸಿದರು.;Resize=(128,128))
;Resize=(128,128))