ಸಾರಾಂಶ
ಕವಿತಾಳ ಸಮೀಪದ ಪಾತಾಪುರ ಗ್ರಾಮದ ಸಕಿಪ್ರಾ ಶಾಲೆಗೆ ಬಿಇಒ ಜೀವನ್ ಸಾಬ್ ಭೇಟಿ ನೀಡಿ ಪರಿಶೀಲಿಸಿದರು.
ಕವಿತಾಳ: ಶಾಲೆ ಮೇಲ್ಛಾವಣಿ ಕುಸಿದು ವಿದ್ಯಾರ್ಥಿ ತಲೆಗೆ ಪೆಟ್ಟಾದ ಹಿನ್ನೆಲೆ ಸಮೀಪದ ಪಾತಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಜೀವನ್ ಸಾಬ್ ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ಶಾಲೆ ಮೂರು ಕೊಠಡಿ ಸತತ ಮಳೆಯಿಂದ ಸೋರುತ್ತಿದ್ದು, ಮಂಗಳವಾರ ಮೇಲ್ಛಾವಣಿ ಸಿಮೆಂಟ್ ಬಿದ್ದು ಚಂದನ ಎನ್ನುವ ವಿದಸ್ಯಾರ್ಥಿ ತಲೆಗೆ ಸಣ್ಣ ಗಾಯವಾಗಿದೆ. ಹೀಗಾಗಿ ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದರು.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಿಇಒ ಮಕ್ಕಳನ್ನು ಗ್ರಾಮದ ಕರಿಲಿಂಗೇಶ್ವರ ದೇವಸ್ಥಾನಕ್ಕೆ ಸ್ಥಳಾಂತರಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿದರು.
ಮೂರು ಕೊಠಡಿ ಸೋರುತ್ತಿವೆ, ಮಂಗಳವಾರ ಛಾವಣಿ ಸಿಮೆಂಟ್ ಉದುರಿ ಬಿದ್ದದ್ದಿ ಮಗುವಿನ ತಲೆಗೆ ಬಡಿದಿದೆ ಆದರೆ ಯಾವುದೇ ಗಾಯವಾಗಿಲ್ಲ ಎಂದು ಪಾಲಕರು ತಿಳಿಸಿದರು. ಹೀಗಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು ಪಾಲಕರು ಆತಂಕ ವ್ಯಕ್ತಪಡಿಸಿದ ಕಾರಣ ಅಧಿಕಾರಿಗಳ ಸೂಚನೆಯಂತೆ ದೇವಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಶಿಕ್ಷಕ ಮೋಹನ ಕುಮಾರ ತಿಳಿಸಿದರು.