ಪದ್ಮಾ ಕಬಾಡಿ ಮಾತನಾಡಿ, ವಚನಕಾರರ ವಚನಗಳು ಹಾಡಲು ಸುಲಭವಾಗಿದ್ದು, ಅತ್ಯಂತ ಅರ್ಥಗರ್ಭಿತವಾಗಿವೆ. ಮಕ್ಕಳು ವಚನಗಳ ಅರ್ಥವನ್ನು ತಿಳಿದುಕೊಂಡು ಹಾಡುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.
ಗದಗ: ವಿದ್ಯಾರ್ಥಿ ಜೀವನವು ವ್ಯಕ್ತಿಯ ಉತ್ತಮ ಭವಿಷ್ಯವನ್ನು ರೂಪಿಸುವ ಅತ್ಯಂತ ಮಹತ್ವದ ಹಂತವಾಗಿದ್ದು, ಸತ್ಯ, ಪ್ರಾಮಾಣಿಕತೆ, ಶಿಸ್ತು, ದಯೆ, ಸಹಕಾರ ಹಾಗೂ ಗೌರವದಂಥ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಬೇಕು ಎಂದು ಭಾರತೀಯ ಶ್ರಮಿಕ ಕಾರ್ಮಿಕ ಕರ್ಮಚಾರಿ ಮಹಾಸಂಘದ ಜಿಲ್ಲಾಧ್ಯಕ್ಷ ನಿಂಗಪ್ಪ ಕಟ್ಟಿಮನಿ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ. 2ರಲ್ಲಿ ಜಿಲ್ಲಾ ಶರಣ ಸಂಕುಲದ ಶರಣೆ ಅಕ್ಕಮಹಾದೇವಿಯ ಕದಳಿಶ್ರೀ ವೇದಿಕೆ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಅಮೃತ ಭೋಜನ- ಜ್ಞಾನ ಸಿಂಚನ ಕಾರ್ಯಕ್ರಮದಲ್ಲಿ ಮಾತನಾಡಿದರು.ಪದ್ಮಾ ಕಬಾಡಿ ಮಾತನಾಡಿ, ವಚನಕಾರರ ವಚನಗಳು ಹಾಡಲು ಸುಲಭವಾಗಿದ್ದು, ಅತ್ಯಂತ ಅರ್ಥಗರ್ಭಿತವಾಗಿವೆ. ಮಕ್ಕಳು ವಚನಗಳ ಅರ್ಥವನ್ನು ತಿಳಿದುಕೊಂಡು ಹಾಡುವ ರೂಢಿ ಬೆಳೆಸಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರಾವಣ ಮಾಸದಲ್ಲಿ ಕದಳಿಶ್ರೀ ವೇದಿಕೆಯು ಸರ್ಕಾರಿ ಶಾಲೆಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಆಹ್ವಾನಿಸಿ, ಮಕ್ಕಳಿಗೆ ಸಿಹಿಭೋಜನ ಉಣಬಡಿಸುವುದು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯರಾದ ಕಮಲಾಕ್ಷಿ ರೇಶ್ಮಿ ಮಾತನಾಡಿ, ಕದಳಿಶ್ರೀ ವೇದಿಕೆ ವತಿಯಿಂದ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶಿಕ್ಷಣಪ್ರೇಮಿಗಳು ಸಿಹಿಭೋಜನ ಹಾಗೂ ಕಲಿಕಾ ಸಾಮಗ್ರಿಗಳೊಂದಿಗೆ ಸರ್ಕಾರಿ ಶಾಲೆಗೆ ಆಗಮಿಸಿ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಈ ವೇಳೆ ಕಲ್ಪನಾ ಅರ್ಕಸಾಲಿ, ಹೊನ್ನಮ್ಮ ಹರಿಜನ, ಶಿಲ್ಪಾ ಕಮ್ಮಾರ, ಸಂಗೀತಾ ಬದಿ, ಗೀತಾ ಮಂಗಳೂರ, ದೀಪಾ ಬೆಟಗೇರಿ, ಲಕ್ಷ್ಮೀ ಜಡಿ ಸೇರಿದಂತೆ ಇತರರು ಇದ್ದರು. ವಿದ್ಯಾರ್ಥಿಗಳಾದ ಅಮೃತಾ ಮರಾಠಿ, ಕವನಾ ಬರಡಿ ಹಾಗೂ ಸಿಂಧೂ ಹರ್ತಿ ವಚನ ಪ್ರಾರ್ಥನೆ ಸಲ್ಲಿಸಿದರು. ರೇಣುಕಾ ಪಾಟೀಲ, ಸ್ನೇಹಾ ಜಡಿ ವಚನಗಳನ್ನು ಹಾಡಿದರು. ಎಸ್.ವಿ. ಇಂದಿರಾಬಾಯಿ ಸ್ವಾಗತಿಸಿದರು. ಪಿ.ಎಫ್. ನಾಗನೂರ ಪರಿಚಯಿಸಿದರು. ಗೌರಮ್ಮ ಕಮತರ ನಿರೂಪಿಸಿದರು. ಸಂಗಮ್ಮ ಅಲಗೂರ ವಂದಿಸಿದರು.