ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ರಸ್ತೆತಡೆದು ಪ್ರತಿಭಟನೆ

| Published : Apr 21 2024, 02:18 AM IST

ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ ರಸ್ತೆತಡೆದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಖಂಡಿಸಿ ಕಲಬುರಗಿಯಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆ ಹಾಗೂ ಹಿಂದು ಪರ ಸಂಘಟನೆಗಳ ಅಡಿಯಲ್ಲಿ ಶನಿವಾರ ಭಾರಿ ಪ್ರತಿಭಟನೆ ನಡೆಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಖಂಡಿಸಿ ಕಲಬುರಗಿಯಲ್ಲಿ ನಾಗರಿಕ ಹಿತ ರಕ್ಷಣಾ ವೇದಿಕೆ ಹಾಗೂ ಹಿಂದು ಪರ ಸಂಘಟನೆಗಳ ಅಡಿಯಲ್ಲಿ ಶನಿವಾರ ಭಾರಿ ಪ್ರತಿಭಟನೆ ನಡೆಯಿತು.

ಸರ್ದಾರ್‌ ಪಟಲ್‌ ವೃತ್ತದಲ್ಲಿ ಸೇರಿದ ಯುವಕರು, ಯುವತಿಯರು, ಕಾಲೇಜು ವಿದ್ಯಾರ್ಥಿಗಳು ಎಲ್ಲರೂ ಮಾನವ ಸರಪಳಿ ರಚಿಸಿ ಘಟನೆ ಖಂಡಿಸಿದರಲ್ಲದೆ ಹಂತಕನಿಗೆ ಗಲ್ಲುಶಿಕ್ಷೆಯಾಗಲಿ ಎಂದರು. ಕಲಬುರಗಿ ನಗರದ ಈ ಮುಖ್ಯ ವೃತ್ತದಲ್ಲಿ 2 ಗಂಟೆಗೂ ಹೆಚ್ಚುಕಾಲ ಮಾನವ ಸರಪಣಿ ರಚಿಸಿ ಪ್ರತಿಭಟಿಸಿದರು.

ಪ್ರತಿಭಟನೆಯಲ್ಲಿ ಲೋಕಸಭೆ ಬಿಜೆಪಿ ಹುರಿಯಾಳು ಡಾ. ಉಮೇಶ ಜಾಧವ್‌, ಶಾಸಕ ಬಸವರಾಜ ಮತ್ತಿಮಡು ಪಾಲ್ಗೊಂಡು ನೇಹಾ ಭಾವಚಿತ್ರವಿರುವ ಪೋಸ್ಟರ್‌ ಹಿಡಿದುಕೊಂಡು ಘಟನೆ ಖಂಡಿಸಿದರು. ಹಿಂದೂ ಜಾಗರಣ ವೇದಿಕೆಯ ಪ್ರಮುಖರೂ ಪ್ರತಿಭಟನೆಯಲ್ಲಿ ಪಾಲ್ಗೊಂಡು ಘಟನೆಯನ್ನು ಉಗ್ರವಾಗಿ ಖಂಡಿಸಿದರು.

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ನೇಹಾ ಫೋಟೋ ಹಿಡಿದು ಡಾ. ಜಾಧವ್‌ ಪ್ರತಿಭಟನೆ ಮಾಡಿ ಗಮನ ಸೆಳೆದರು. ಘಟನೆಗೆ ಖಂಡನೆಯ ಹೇಳಿಕೆ ನೀಡಿದ ಬಿಜೆಪಿ ಲೋಕಸಭೆ ಅಭ್ಯರ್ಥಿ ಡಾ. ಜಾಧವ್‌, ಲವ್‌ ಜಿಹಾದಜ್‌ ಪೋಷಿಸುತ್ತಿರೋ ಕಾಂಗ್ರೆಸ್‌ ಎಂದು ನೇರ ಆರೋಪ ಮಾಡಿದರು.

ವಿವಿಧ ಸಂಘಟನೆಗಳ ಸದಸ್ಯರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಟೈರ್‌ಗಳನ್ನು ಸುಟ್ಟು ಆಕರ್ರೋಶ ಹೊರಹಾಕಲಾಯ್ತು. ಇದರಿಂದಾಗಿ ಮುಖ್ಯ ರಸ್ತೆ, ವೃತ್ತಗಳ ಸಂಚಾರದಲ್ಲಿ ಭಾರಿ ಅಡಚಣೆ ಕಂಡಿತ್ತು. ಪಟೇಲ್‌ ವೃತ್ತ ಬಂದ್‌ ಆಗಿದ್ದರಿಂದ ಜಿಲ್ಲಾ ಕೋರ್ಟ್‌ ರಸ್ತೆ, ಡಿಸಿ ಕಚೇರಿ ಸುತ್ತಮುತ್ತ ಸಂಚಾರ ದಟ್ಟಣೆ ಕಾಡಿತ್ತು.