ಸಾರಾಂಶ
ಜೀವನದಲ್ಲಿ ಕೇವಲ ಅಂಕಗಳೇ ನಿರ್ಣಾಯಕವಲ್ಲ. ಎಷ್ಟೇ ಅಂಕ ಪಡೆದರೂ ಜೀವನದಲ್ಲಿ ಗುರಿ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಯಶಸ್ಸು ಸಾಧಿಸಲು ಮುಂದಾಗುವಂತೆ ಲಯನ್ಸ್ ಶಿಕ್ಷಣ ಸಂಸ್ಥೆ ಚೇರಮನ್ ಹಾಗೂ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ನರಗುಂದ: ಜೀವನದಲ್ಲಿ ಕೇವಲ ಅಂಕಗಳೇ ನಿರ್ಣಾಯಕವಲ್ಲ. ಎಷ್ಟೇ ಅಂಕ ಪಡೆದರೂ ಜೀವನದಲ್ಲಿ ಗುರಿ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಉನ್ನತ ಗುರಿಯೊಂದಿಗೆ ಯಶಸ್ಸು ಸಾಧಿಸಲು ಮುಂದಾಗುವಂತೆ ಲಯನ್ಸ್ ಶಿಕ್ಷಣ ಸಂಸ್ಥೆ ಚೇರಮನ್ ಹಾಗೂ ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಅವರು ಸೋಮವಾರ ಪಟ್ಟಣದ ಲಯನ್ಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಎಸ್ಎಸ್ಎಲ್‌ಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಲಯನ್ಸ್ ಇಂಗ್ಲಿಷ್ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಶೇ. 90 ಅಂಕಗಳಿಗಷ್ಟೇ ಮೀಸಲಾಗದೇ ಮುಂದಿನ ವ್ಯಾಸಂಗದಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯಬೇಕು. ಗುರಿಗೆ ಅನುಗುಣವಾಗಿ ನಿರಂತರ ಅಭ್ಯಾಸ ಮಾಡಬೇಕು. ಕಲಿತ ಸಂಸ್ಥೆಗೆ, ತಂದೆ ತಾಯಿಗಳಿಗೆ, ಕಲಿಸಿದ ಗುರುಗಳಿಗೆ ಕೀರ್ತಿ ತರಬೇಕು. ಲಯನ್ಸ್ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡಿ ಗುಣಾತ್ಮಕ ಶಿಕ್ಷಣ ನೀಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕು. ಸಂಸ್ಕಾರ, ಸಂಸ್ಕೃತಿಯೊಂದಿಗೆ ಪಡೆದ ಶಿಕ್ಷಣದೊಂದಿಗೆ ಉನ್ನತ ಗುರಿ ಶೋಧಿಸಿ ಸಮಾಜಮುಖಿ ಕೆಲಸ ಮಾಡುವಂತೆ ಕರೆ ನೀಡಿದರು. ಶಾಲೆಗೆ ಪ್ರಥಮ ಬಂದ ಸಂಜನಾ ಬೆಲ್ಲದರವರ ಪಾಲಕ ಜೆ.ಆರ್. ಬೆಲ್ಲದ ಮಾತನಾಡಿ, ಲಯನ್ಸ್ ಶಿಕ್ಷಣ ಸಂಸ್ಥೆ ರಾಜ್ಯದಲ್ಲೇ ಉನ್ನತ ಶಿಕ್ಷಣ ಸಂಸ್ಥೆಯಾಗಿದೆ. ನನ್ನ ಪುತ್ರಿ 1ನೇ ತರಗತಿಯಿಂದ 10ನೇ ತರಗತಿಯವರೆಗೆ ಶಿಕ್ಷಣ ಪಡೆದು ಇಂದು ಉನ್ನತ ಶ್ರೇಣಿಯೊಂದಿಗೆ ಪ್ರಥಮ ಪಡೆದಿರುವದು ಸಂತಸ ತಂದಿದೆ. ಹಿಂದೆ ನನ್ನ ಪುತ್ರ ಇಲ್ಲಿಯೇ ಕಲಿತು ಉನ್ನತ ಶ್ರೇಣಿ ಹೊಂದಿದ್ಜನು. ಈ ಸಂಸ್ಥೆ ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕೃತಿ ಕಲಿಸುತ್ತಿರುವುದು ಶ್ಲಾಘನೀಯ ಎಂದರು.ಸಮಾರಂಭದಲ್ಲಿ ಲಯನ್ಸ್ ಇಂಗ್ಲಿಷ್ ಮಾಧ್ಯಮ ಶಾಲೆಯ ಸಂಜನಾ ಬೆಲ್ಲದ, ಶ್ರದ್ಧಾ ಕೋರಿ, ಸೌಮ್ಯಾ ಬಿ. ಪಾಟೀಲ, ಆಕಾಶ ಬಡಿಗೇರ, ಗಾಯತ್ರಿ ವಿಶ್ವಕರ್ಮ, ವೈಷ್ಣವಿ ಪಾಟೀಲ, ಶ್ರದ್ಧಾ ತಿಪ್ಪನೂರ, ಸಾಕ್ಷಿ ಗುಜಮಾಗಡಿ, , ವೈಷ್ಣವಿ ಮೇಟಿ, ಕೇದಾರನಾಥ ಮುಧೋಳೆ , ಕಾವ್ಯಾ ಕವಲೂರ, ಸುಹಾಸಗೌಡ ಪಾಟೀಲ ,
ಶ್ರೀನಿಕಾ ಕುದರಿ , ನಂದಿತಾ ತೋಟರ , ಸೃಷ್ಟಿ ತೀರ್ಥಗೌಡ್ರ , ಸಿದ್ದಾರೂಢ ಗುಡಗೊಪ್ಪ ,ಸುಪ್ರೀತಾ ಉಳ್ಳೇಗಡ್ಡಿ ಹಾಗೂ ಕನ್ನಡ ಮಾಧ್ಯಮ ಶಾಲೆಯ ಮೋಹನ ಅಣ್ಣಿಗೇರಿ, ಸ್ಪಂದನಾ ಹೊನ್ನಬಿಂದಗಿ, ನೇತ್ರಾವತಿ ಮಾದರ ಅವರನ್ನು ಸಂಸ್ಥೆಯಿಂದ ಸನ್ಮಾನಿಸಲಾಯಿತು.ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ, ನಿರ್ದೇಶಕರಾದ ಡಾ.ಬಿ.ಎಂ. ಜಾಬಣ್ಣವರ, ಸಿ.ಎಸ್. ಸಾಲೂಟಗಿಮಠ, ವಿಜಯಕುಮಾರ್ ಬೇಲೇರಿ, ಲಯನ್ಸ್ ಕನ್ನಡ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯ ಎಸ್.ಜಿ. ಜಕ್ಕಲಿ ಇದ್ದರು.
ಮುಖ್ಯೋಪಾಧ್ಯಾಯರಾದ ಜಿ.ಬಿ. ಹಿರೇಮಠ ಸ್ವಾಗತಿಸಿದರು. ಕೋ-ಆರ್ಡಿನೇಟರ್ ಪ್ರೇರಣಾ ಪಾತ್ರಾ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.