ಮಾದರಿಗಳು ಆಹಾರ ಸರಪಳಿ, ಚಲನೆ ಮತ್ತು ವಿಧಗಳು, ಜಲಚಕ್ರ, ಹಗಲು ರಾತ್ರಿ, ರಸ್ತೆ ನಿಯಮ, ಜ್ವಾಲಾಮುಖಿ ಗಮನ ಸೆಳೆದವು.
ಕುರುಗೋಡು: ಪಟ್ಟಣದ ಪಾಲಕ ಪೋಷಕರಿಗೆ ವಿದ್ಯಾರ್ಥಿಗಳು ಸೌರಮಂಡಲದ ಕೌತುಕಗಳನ್ನು ವಿವರಿಸಿದರು. ಗ್ರಹಗಳ ಚಲನೆ ಕುರಿತು ಭೋದಿಸಿದರು.
ಮಾನವ ಶರೀರದ ರಚನೆ, ಅಂಗಾಂಗಗಳ ಕಾರ್ಯಚಟುವಟಿಕೆ ಕುರಿತು ತಾವು ತಯಾರಿಸಿದ ಮಾದರಿಗಳನ್ನು ಪ್ರದರ್ಶಿಸಿ ತಿಳಿಸಿದರು. ಹೆಚ್ಚು ಸಾಂಧ್ರತೆಯಿಂದ ಕೂಡಿದ ಉಪ್ಪಿನ ನೀರಿನಲ್ಲಿ ವಸ್ತು ಮುಳುಗುವುದಿಲ್ಲ ಎನ್ನುವ ಸತ್ಯವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ನೋಡುಗರಲ್ಲಿ ಅಚ್ಚರಿ ಮೂಡಿಸಿದರು. ಜಾಗತಿಕ ತಾಪಮಾನ, ಸಸ್ಯ ಜೀವಕೋಶ ಮತ್ತು ಪ್ರಾಣಿ ಜೀವಕೋಶ ಮಾದರಿ ತೋರಿಸಿ ವಿವರಣೆ ನೀಡಿದರು.ಮಾದರಿಗಳು ಆಹಾರ ಸರಪಳಿ, ಚಲನೆ ಮತ್ತು ವಿಧಗಳು, ಜಲಚಕ್ರ, ಹಗಲು ರಾತ್ರಿ, ರಸ್ತೆ ನಿಯಮ, ಜ್ವಾಲಾಮುಖಿ ಗಮನ ಸೆಳೆದವು.
ಈ ಚಿತ್ರಣ ಕಂಡುಬಂದಿದ್ದು ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ. ಶುಕ್ರವಾರ ಶಾಲೆಯಲ್ಲಿ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ವಸ್ತುಪ್ರದರ್ಶನ ಏರ್ಪಡಿಸಿದ್ದರು. ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಆಕರ್ಷಕ ಮಾದರಿಗಳು ಬೇಟಿನೀಡಿದ ಪೋಷಕರು, ನೆರೆಯ ಶಾಲೆಗಳ ವಿದ್ಯಾರ್ಥಿಗಳ ನಮಸೂರೆಗೊಂಡವು.ವಿಷಯ ಶಿಕ್ಷಕರಂತೆ ಆಕರ್ಷಕವಾಗಿ ವಿಷಯ ವಿವರಿಸುತ್ತಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.ಎಸ್.ಡಿ.ಎಂ.ಸಿ. ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ, ಚಟುವಟಿಕೆ ಧಾರಿತ ಶಿಕ್ಷಣ ಮಾತ್ರ ಪರಿಣಾಮಕಾರಿಯಾಗಲು ಸಾಧ್ಯ ಎನ್ನುವುದುಕ್ಕೆ ವಿಜ್ಞಾನ ಸ್ತು ಪ್ರದರ್ಶನ ಉತ್ತಮ ನಿದರ್ಶನ ಎಂದರು.
ಶಾಲೆಯ ಆವರಣದಲ್ಲಿ ಪ್ರದರ್ಶನದಲ್ಲಿ ೧೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ೨೨ ತಂಡಗಳಾಗಿ ಅಧಿಕ ಮಾದರಿಗಳನ್ನು ಪ್ರದರ್ಶಿಸಲಾಯಿತು.ಶಿಕ್ಷಕರು ಕೆ.ಎಂ.ರಾಜಶೇಖರ ಸ್ವಾಮಿ, ಎಸ್.ಡಿ.ಎಂ.ಸಿ. ಸದಸ್ಯರಾದ ಸೌಭಾಗ್ಯ, ಸಿದ್ದಿಸಾಬ್, ಸೋಮಪ್ಪ, ದಾದಾಪೀರ್, ಕೆ.ಬಸವರಾಜ, ಗಾಳಿಪ್ಪ, ಶ್ರೀದೇವಿ, ಶಾಂತಮ್ಮ ಮತ್ತು ಜೋಗಿ ಸುರೇಶ್, ಪ್ರಬಾರೆ ,ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಇದ್ದರು.
ಕುರುಗೋಡು ಪಟ್ಟಣದ ಪಿಎಂಶ್ರೀ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ವಸ್ತು ಪ್ರರ್ದಶನದಲ್ಲಿ ವಿದ್ಯಾರ್ಥಿಗಳು ಭೂಮಿ ಚಟುವಟಿಕೆ ಬಗ್ಗೆ ವಿವರಿಸಿದರು.