ಭವಿಷ್ಯದ ಕಡೆಗೆ ಯೋಚಿಸಿದರೆ ವಿದ್ಯಾರ್ಥಿಗಳು ಗುರಿ ಮುಟ್ಟಲು ಸಾಧ್ಯ

| Published : Feb 01 2024, 02:03 AM IST

ಭವಿಷ್ಯದ ಕಡೆಗೆ ಯೋಚಿಸಿದರೆ ವಿದ್ಯಾರ್ಥಿಗಳು ಗುರಿ ಮುಟ್ಟಲು ಸಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕಡೆಗೆ ಯೋಚಿಸಿ, ಶಿಕ್ಷಣದಲ್ಲಿ ಮೊದಲು ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕಡೆಗೆ ಯೋಚಿಸಿ, ಶಿಕ್ಷಣದಲ್ಲಿ ಮೊದಲು ಕೋರ್ಸ್‌ ಆಯ್ಕೆ ಮಾಡಿಕೊಂಡರೆ ಜೀವನದಲ್ಲಿ ಗುರಿ ಮುಟ್ಟಲು ಸಾಧ್ಯ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು.ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ೨೦೨೩-೨೪ ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿ ಇಂಥ ಕೋರ್ಸ್‌ ಓದಬೇಕು ಎನ್ನುವುದನ್ನು ಮೊದಲು ಆಯ್ಕೆ ಮಾಡಿಕೊಳ್ಳಿ ಎಂದರು. ಸರ್ಕಾರದ ಹಲವು ಇಲಾಖೆಗಳಲ್ಲಿ ಬಹುತೇಕ ಹುದ್ದೆಗಳು ಖಾಲಿಯಿವೆ ಆ ಹುದ್ದೆಗಳತ್ತ ವಿದ್ಯಾರ್ಥಿನಿಯರು ಗಮನ ಹರಿಸಿ ಪರೀಕ್ಷೆ ಬರೆದು ಹುದ್ದೆ ಗಿಟ್ಟಿಸಿಕೊಳ್ಳಲು ಆಸಕ್ತಿ ಹೊಂದಬೇಕು ಎಂದರು.ಸ್ಪಧ್ಮಾತ್ಮಕ ಕಾಲದಲಿ ನಾವು, ನೀವೆಲ್ಲ ಇದ್ದೇವೆ ಹಾಗಾಗಿ ಸ್ಪಧ್ಮಾತ್ಮಕ ಪರೀಕ್ಷೆಗಳನ್ನು ಬರೆಯಬೇಕು ಅದು ಬಿಟ್ಟು ಎಲ್ಲಾ ಕೋರ್ಸ್‌ಗಳಿಗೂ ಓದಿ, ಬರೆದರೆ ವಿದ್ಯಾರ್ಥಿಗಳು ಗುರಿ ಮುಟ್ಟಲು ಕಷ್ಟವಾಗಲಿದೆ ಎಂದರು. ಖಾಸಗಿ ಉದ್ಯೋಗ ಹುಡುಕುವ ಬದಲು ಸರ್ಕಾರಿ ಉದ್ಯೋಗ ಪಡೆಯಲು ಶ್ರಮ ಹಾಕಿದರೆ ಮುಂದೆ ಸುಖಕರ ಜೀವನ ನಡೆಸಲು ಸಾಧ್ಯವಾಗಲಿದೆ ಈ ನಿಟ್ಟಿನಲ್ಲಿ ಓದುವ ಕಡೆ ನಿಗಾ ವಹಿಸಿ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಶೈಲಕುಮಾರ್‌ (ಶೈಲೇಶ್) ಮುಖ್ಯ ಭಾಷಣ ಮಾಡಿದರೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮಿನ್ನಿ ಜಾರ್ಜ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಪುರಸಭೆ ಸದಸ್ಯ ಗೌಡ್ರ ಮಧು, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜಿ.ಎನ್.ಶ್ರೀಕಾಂತ್‌, ಸದಸ್ಯರಾದ ರಮೇಶ್‌, ಹೊಣಕಾರನಾಯಕ ಸೇರಿದಂತೆ ಉಪನ್ಯಾಸಕರಾದ ಸುರೇಶ್‌, ರವಿ ಹಾಗೂ ವಿದ್ಯಾರ್ಥಿನಿಯರು ಇದ್ದರು.ಸೋರಿಕೆ ತಡೆಗಟ್ಟಲು ಕ್ರಮ-ಗಣೇಶ್‌:ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೆಲ ಕಟ್ಟಡಗಳಲ್ಲಿ ಮಳೆಗಾಲದಲ್ಲಿ ಸೋರಿಕೆಯಾಗದಂತೆ ಕ್ರಮ ವಹಿಸುವೆ ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಹೇಳಿದರು. ಸಮಾರಂಭದಲ್ಲಿ ಕಾಲೇಜಿನ ಕಟ್ಟಡ ಸೋರುತ್ತಿದೆ. ಮೂರು ಕೊಠಡಿ ಬೇಕು ಎಂದು ಉಪನ್ಯಾಸಕ ಸುರೇಶ್‌ ಶಾಸಕರ ಗಮನಕ್ಕೆ ತಂದಾಗ ಶಾಸಕರು ಮಾತನಾಡಿ ಕಾಲೇಜಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವೆ ಎಂದರು.