ವಿದ್ಯಾಥಿFಗಳೇ ಸತತ ಪರಿಶ್ರಮದಿಂದ ಮಾತ್ರ ಗುರಿಮಟ್ಟಲು ಸಾಧ್ಯ: ದರ್ಶನ್

| Published : Jan 25 2025, 01:00 AM IST

ವಿದ್ಯಾಥಿFಗಳೇ ಸತತ ಪರಿಶ್ರಮದಿಂದ ಮಾತ್ರ ಗುರಿಮಟ್ಟಲು ಸಾಧ್ಯ: ದರ್ಶನ್
Share this Article
  • FB
  • TW
  • Linkdin
  • Email

ಸಾರಾಂಶ

ರೋಟರಿ ಸಂಸ್ಥೆಯು ನಮ್ಮ ಶಾಲೆಯ ಮೇಲೆ ಹೆಚ್ಚಿನ ಅಭಿಮಾನವನ್ನು ಇಟ್ಟಿದೆ. ಅವರು ಇಂದು ನೀಡಿರುವ ಕೊಡುಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ. ದೊರೆತ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಭವಿಷ್ಯವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕೆಂದು ನಗರಸಭಾ ಸದಸ್ಯ ಹಾಗೂ ರೋಟರಿ ಅಧ್ಯಕ್ಷ ದರ್ಶನ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಸಂಸ್ಥೆಯ ವತಿಯಿಂದ ಬ್ಲೂಟೂತ್ ಸ್ಪೀಕರ್ ಅನ್ನು ನೀಡಿ ಮಾತನಾಡಿದ ಅವರು, ಈ ಶಾಲೆಯು ತನ್ನದೇ ಆದ ಇತಿಹಾಸವನ್ನು ಹೊಂದಿದೆ ಉತ್ತಮ ಬೋಧಕ ವರ್ಗವಿದೆ. ಇಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಒಳ್ಳೆಯ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಶಿಕ್ಷಣದ ಸಾಧನೆಗೆ ಯಾವುದೇ ಸುಲಭ ದಾರಿ ಇಲ್ಲ ಪರಿಶ್ರಮದಿಂದ ಮಾತ್ರ ಗುರಿಮಟ್ಟಲು ಸಾಧ್ಯ ಎಂದರು.

ಕೊಡುಗೆ ಸ್ವೀಕರಿಸಿ ಮಾತನಾಡಿದ ಶಾಲೆಯ ಉಪ ಪ್ರಾಂಶುಪಾಲ ಜಗದೀಶ್ ಹಿರೇಮಠ್, ರೋಟರಿ ಸಂಸ್ಥೆಯು ನಮ್ಮ ಶಾಲೆಯ ಮೇಲೆ ಹೆಚ್ಚಿನ ಅಭಿಮಾನವನ್ನು ಇಟ್ಟಿದೆ. ಅವರು ಇಂದು ನೀಡಿರುವ ಕೊಡುಗೆ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ. ಸರ್ಕಾರ ಇಲಾಖೆಗಳು ಏನೇ ಸೌಲಭ್ಯ ಕೊಟ್ಟರೂ ಸಮುದಾಯದ ಸ್ಪಂದನೆ ಬಹಳ ಅಗತ್ಯ. ಸಂಸ್ಥೆಯು ಇದೇ ಅಭಿಮಾನವನ್ನು ನಮ್ಮ ಶಾಲೆಯ ಮೇಲೆ ಸದಾ ಇರಿಸಲಿ ಎಂದು ಅವರು ಆಶಿಸಿ ಮುಂಬರಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಇಲಾಖಾ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಜ್ಜುಗೊಳಿಸುತ್ತಿದ್ದೇವೆ. ಪ್ರತಿ ಬಾರಿಯೂ ಉತ್ತಮ ಫಲಿತಾಂಶವನ್ನು ಶಾಲೆ ನೀಡುತ್ತಿದೆ. ನಮ್ಮಲ್ಲಿ ಶಿಕ್ಷಕ ವರ್ಗವು ವಿಶೇಷ ಕಾಳಜಿ ವಹಿಸಿದೆ, ಪೋಷಕರು ಸಹಕರಿಸುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ದಿವಾಕರ್, ಚಂದ್ರಶೇಖರ್, ದೈಹಿಕ ಶಿಕ್ಷಣ ಶಿಕ್ಷಕ ಶಶಿಧರ್ ಹಾಗೂ ಬೋಧಕ ವರ್ಗ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.