ವಿದ್ಯಾರ್ಥಿಗಳು ನಾಯಕತ್ವ ವಹಿಸಿಕೊಳ್ಳಲು ಮುಂದೆ ಬನ್ನಿ

| Published : Sep 27 2025, 01:00 AM IST

ವಿದ್ಯಾರ್ಥಿಗಳು ನಾಯಕತ್ವ ವಹಿಸಿಕೊಳ್ಳಲು ಮುಂದೆ ಬನ್ನಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವ ವಿದ್ಯಾರ್ಥಿ ನಾಯಕತ್ವ ತೆಗೆದುಕೊಳ್ಳಲು ಮುಂದೆ ಬರುತ್ತಾನೋ ಆ ವಿದ್ಯಾರ್ಥಿ ದೊಡ್ಡ ಅಧಿಕಾರಿಯಾಗಿ ಬೆಳೆಯಲು ಸಮರ್ಥನಾಗುತ್ತಾನೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದ ಶಾಂತಿನಿಕೇತನ ಸಿಬಿಎಸ್ಇ ಶಾಲೆಯಲ್ಲಿ ರವೀಂದ್ರನಾಥ ಟ್ಯಾಗೋರ್ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸಂಸ್ಥೆಯ 24ನೇ ಸಂಸ್ಥಾಪನಾ ದಿನ ಆಚರಿಸಲಾಯಿತು.

ಸಂಸ್ಥೆ ಅಧ್ಯಕ್ಷೆ ಶೀಲಾ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವ ವಿದ್ಯಾರ್ಥಿ ನಾಯಕತ್ವ ತೆಗೆದುಕೊಳ್ಳಲು ಮುಂದೆ ಬರುತ್ತಾನೋ ಆ ವಿದ್ಯಾರ್ಥಿ ದೊಡ್ಡ ಅಧಿಕಾರಿಯಾಗಿ ಬೆಳೆಯಲು ಸಮರ್ಥನಾಗುತ್ತಾನೆ. ಒಂದು ಸಣ್ಣ ಕೋಣೆಯಲ್ಲಿ ದಾಖಲಾತಿ ಪ್ರಾರಂಭಿಸಿ 27 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಸಂಸ್ಥೆಯಲ್ಲಿ ಇದೀಗ 3000ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇದಕ್ಕೆ ಶಿಕ್ಷಕರೇ ಮುಖ್ಯ ಕಾರಣ ಎಂದು ತಿಳಿಸಿದರು. ಇಲ್ಲಿ ಜ್ಞಾನಾರ್ಜನೆ ಮಾಡಿದ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಕ್ಕೆ ಬೆಳೆದಿದ್ದಾರೆ. ನಾಯಕ ಎಂದರೆ ದಾರಿ ತಿಳಿದಿರುವವನು ಅಥವಾ ದಾರಿ ತೋರಿಸುವವನು. ಒಳ್ಳೆಯ ನಾಯಕನು ಜನರಿಗೆ ವಿಶ್ವಾಸ, ನಿಷ್ಠೆ, ನಂಬಿಕೆ, ಶ್ರದ್ಧೆ ಹೊಂದಲು ಪ್ರೆರೇಪಿಸುತ್ತಾನೆ. ಅಂತಹ ಒಬ್ಬ ಮಹಾನ್ ನಾಯಕನಾಗಿ ವಿದ್ಯಾರ್ಥಿಗಳೆಲ್ಲರೂ ಬೆಳೆಯಬೇಕೆಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ಭರತ ಬಿರಾದಾರ ಮಾತನಾಡಿ, ಭಾವನಾತ್ಮಕ ಮತ್ತು ಹೆಮ್ಮೆಯಿಂದ ಬೆಳೆದ ಸಂಸ್ಥೆಯಲ್ಲಿ ನಾನು ಒಬ್ಬ ವಿದ್ಯಾರ್ಥಿಯಾಗಿ ಬೆಳೆದಿದ್ದೇನೆ. ಅಧ್ಯಕ್ಷರಾದ ಡಾ.ಸುರೇಶ ಬಿರಾದಾರ ರವರ ಒಂದು ಶ್ರಮದ ಫಲವಾಗಿ ಇಂದು ಈ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ ಎಂದರು. ಶಿಕ್ಷಕರಾದ ರಾಕೇಶ, ಪೂಜಾ, ವರ್ಷಾ, ರವಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ರಿಯಾ ಮತ್ತು ಸುಹಾಸ ನಿರೂಪಿಸಿದರು. ಸುದರ್ಶನ ವಂದಿಸಿದರು.