ಸುಗಮ ತರಗತಿ ನಡೆಸಲು ವಿದ್ಯಾರ್ಥಿಗಳ ಆಗ್ರಹ

| Published : Dec 16 2023, 02:00 AM IST

ಸಾರಾಂಶ

ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವ ಮೂಲಕ ತರಗತಿ ಸುಗಮವಾಗಿ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದ ಸ.ಪ್ರ.ದ.ಕಾಲೇಜಿನ ವಿದ್ಯಾರ್ಥಿಗಳು ತಹಶೀಲ್ ಕಚೇರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಕನಕಗಿರಿ

ನ.೨೩ರಿಂದ ತರಗತಿ ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿರುವ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವ ಮೂಲಕ ತರಗತಿ ಸುಗಮವಾಗಿ ನಡೆಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಟ್ಟಣದ ಸ.ಪ್ರ.ದ.ಕಾಲೇಜಿನ ವಿದ್ಯಾರ್ಥಿಗಳು ತಹಶೀಲ್ ಕಚೇರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ವಿದ್ಯಾರ್ಥಿ ಬಸವರಾಜ ಕೊರೆಡ್ಡಿ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಯಥೇಚ್ಛವಾಗಿ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನ.೨೩ರಿಂದ ತರಗತಿಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಅದಕ್ಕಾಗಿ ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದಿಸಿ ತರಗತಿಗಳು ಎಂದಿನಂತೆ ನಡೆಯಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.ಗ್ರೇಡ್-೨ ತಹಶೀಲ್ದಾರ ವಿ.ಎಸ್ ಹೊರಪೇಟೆ ಮನವಿ ಸ್ವೀಕರಿಸಿದರು.ವಿದ್ಯಾರ್ಥಿಗಳಾದ ಹೊನ್ನೂರುಹುಸೇನ, ಶಿವಕುಮಾರ, ವಿಶ್ವನಾಥ ತಿಪ್ಪನಾಳ, ಯೊಗೇಶ, ಅಭಿಷೇಕ, ರಿಯಾಜ್ ಎಲಿಗಾರ, ವೀಣಾ ಮಾದಿನಾಳ, ಅಶ್ವಿನಿ ಸಮಗಂಡಿ, ದೀಪಿಕಾ, ಶ್ರೀಲಕ್ಷ್ಮೀ, ಅನ್ನಪೂರ್ಣ ಸೇರಿದಂತೆ ಇತರರು ಇದ್ದರು.