ವಿದ್ಯಾರ್ಥಿಗಳು ಜೀವನದಲ್ಲಿ ಸಂತೃಪ್ತಿ ಮನೋಭಾವ ಬೆಳೆಸಿಕೊಳ್ಳಿ: ಎಚ್.ಮಾದೇಗೌಡ

| Published : Aug 04 2024, 01:16 AM IST / Updated: Aug 04 2024, 01:17 AM IST

ವಿದ್ಯಾರ್ಥಿಗಳು ಜೀವನದಲ್ಲಿ ಸಂತೃಪ್ತಿ ಮನೋಭಾವ ಬೆಳೆಸಿಕೊಳ್ಳಿ: ಎಚ್.ಮಾದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎನ್ನುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪ್ರತಿ ವಿದ್ಯಾರ್ಥಿಯ ಜೀವನ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು.

ಕನ್ನಡಪ್ರಭ ವಾರ್ತೆ ಮದ್ದೂರು

ವಿದ್ಯಾರ್ಥಿಗಳು ಜೀವನದಲ್ಲಿ ಸಂತೃಪ್ತಿ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅಡ್ವೊಕೇಟ್ ಅಲಯನ್ಸ್ ಕ್ಲಬ್‌ನ ಒಂದನೇ ಜಿಲ್ಲಾ ಉಪ ರಾಜ್ಯಪಾಲ ಎಚ್.ಮಾದೇಗೌಡ ಹೇಳಿದರು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಂಕೀರ್ಣದ ವಕೀಲರ ಭವನದಲ್ಲಿ ನಡೆದ ದ್ವಿತೀಯ ಪಿಯುಸಿ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಿ ತೇರ್ಗಡೆ ಹೊಂದಿರುವ ವಕೀಲರ ಮಕ್ಕಳಿಗೆ ಏರ್ಪಡಿಸಿದ್ದ ಅಭಿನಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ಶಿಕ್ಷಣದೊಂದಿಗೆ ಸೇವಾ ಮನೋಭಾವ ರೂಡಿಸಿಕೊಳ್ಳಬೇಕು. ಶಾಲಾ ಹಂತದಲ್ಲಿ ನ್ಯಾಯ, ನೀತಿ, ಧರ್ಮದ ಬಗ್ಗೆ ಅರಿವು ಪಡಿಸಿಕೊಳ್ಳಬೇಕು ಎಂದರು.

ಮದ್ದೂರು ಅಡ್ವೊಕೇಟ್ ಅಲೆಯನ್ಸ್ ಕ್ಲಬ್ ಅಧ್ಯಕ್ಷ ಟಿ .ನಾಗರಾಜು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎನ್ನುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಪ್ರತಿ ವಿದ್ಯಾರ್ಥಿಯ ಜೀವನ ಶಿಕ್ಷಣದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಯಾದ ಎಸ್.ಪರೀಕ್ಷಿತ್, ವಿ.ಎನ್.ದಿವಿಜ್ ಗೌಡ, ಎಂ.ಪಿ.ಮೌನವಿ, ಡಿ .ವೈ.ಬಿಂದು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಎಸ್.ಯುಕ್ತ, ಎಸ್.ವಿ.ರಮ್ಯಾ, ಎಚ್.ಎಸ್‌.ಕುಸುಮ, ಜಿ.ಎಸ್. ನಯನ, ಡಿ.ಪಿ.ಬೃಂದಾ, ಎನ್. ತೇಜಸ್ ಹಾಗೂ ಕೆ. ವಿ. ಚೇತನ ಅವರುಗಳಿಗೆ ಆರ್ಥಿಕ ಕೊಡುಗೆ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್ಲಬ್ ನ ಕಾರ್ಯದರ್ಶಿ ಎಂ.ಎನ್.ಚಂದ್ರಶೇಖರ್, ಖಜಾಂಚಿ ಎಂ.ಎಂ.ಪ್ರಶಾಂತ್, ಒಂದನೇ ಉಪಾಧ್ಯಕ್ಷ ವಿ. ಎಸ್. ನಾಗರಾಜು, ವಕೀಲರ ಸಂಘದ ಅಧ್ಯಕ್ಷ ಎಂ.ಎನ್.ಶಿವಣ್ಮ, ಉಪಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ಎಂ.ಜೆ.ಸುಮಂತ್, ಖಜಾಂಚಿ ಪ್ರಸನ್ನ, ವಕೀಲರಾದ ಎ.ಶಿವಣ್ಣ, ಮಧುಸೂದನ್ , ಕೆ.ಶಿವಣ್ಣ, ಮಹೇಶ್ ಮತ್ತಿತರರು ಇದ್ದರು.