ಸಾರಾಂಶ
ಶಿವಮೊಗ್ಗದ ಸಹ್ಯಾದಿ ಕಲಾ ಕಾಲೇಜಿನಲ್ಲಿ ಗುರುವಾರ ನಡೆದ ಸಂವಿಧಾನ ಓದು ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಯ ಪ್ರತಿಜ್ಞಾವಧಿ ಬೋಧಿಸಲಾಯಿತು.
ಸಂವಿಧಾನ ಓದು, ಓರಿಯಂಟೇಷನ್ ಕಾರ್ಯಕ್ರಮದಲ್ಲಿ ಸಯ್ಯದ್ ಸನಾವುಲ್ಲಾ ಸಲಹೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗವಿದ್ಯಾರ್ಥಿಗಳು ಓದನ್ನು ಹಿಂಬಾಲಿಸಬೇಕೇ ಹೊರತು ದುಶ್ಚಟ್ಟಗಳನಲ್ಲ. ಅಂಕಗಳನ್ನು ಗಳಿಸುವುದಷ್ಟೆ ಕಲಿಕೆಯ ಕ್ರಮವಲ್ಲ. ಕಲಿಕೆಯ ಜೊತೆಗೆ ಮಾನವೀಯ ಗುಣ ರೂಪಿಸಿಕೊಳ್ಳಬೇಕು ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಸಯ್ಯದ್ ಸನಾವುಲ್ಲಾ ಹೇಳಿದರು.ಇಲ್ಲಿನ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಿಧಾನ ಓದು ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಓರಿಯಂಟೇಷನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಿಮ್ಮ ಭವಿಷ್ಯದ ಶಿಲ್ಪಿಗಳು ನೀವೆ ಆಗಿರುವಿರಿ. ಸರಿಯಾದ ಮಾರ್ಗದಲ್ಲಿ ನಡೆದು ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪ್ರತಿಭೆಗಳ ನಡುವೆ ಪೈಪೋಟಿ ನಡೆಯುತ್ತಿದೆ. ಸಂವಿಧಾನ ಪ್ರಜಾಪ್ರಭುತ್ವದ ಆತ್ಮ. ಪ್ರತಿಯೊಬ್ಬರು ಅದನ್ನು ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಸಂವಿಧಾನ ಆಶಯಗಳನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಂವಿಧಾನ ಕಟ್ಟಕಡೆಯ ವ್ಯಕ್ತಿಗೂ ಗೌರವ ತಂದುಕೊಟ್ಟಿದೆ. ಸಾಮಾಜಿಕ ನ್ಯಾಯವೇ ಇಲ್ಲಿ ಮುಖ್ಯವಾಗಿದೆ. ಹಕ್ಕುಗಳ ಜೊತೆಗೆ ಕರ್ತವ್ಯವನ್ನು ಪಾಲಿಸಬೇಕು ಎಂದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ .ಎನ್.ಮಂಜುನಾಥ್ವಿ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯನ್ನು ಮನನ ಮಾಡಿಕೊಳ್ಳುವುದರ ಜೊತೆಗೆ ಓದಿನ ಕಡೆ ಗಮನ ಹರಿಸಬೇಕು. ಪ್ರಾಜಾಪ್ರಭುತ್ವದ ಆಶಯಗಳಿಗೆ ಬದ್ಧರಾಗಿರಬೇಕು ಎಂದು ಹೇಳಿದರು.
ಸಂವಿಧಾನ ಪೀಠಿಕೆಯ ಪತಿಜ್ಞಾವಧಿ ಬೋಧಿಸಿ ಮಾತನಾಡಿದ ರಾಜ್ಯಾಶಾಸ್ತ್ರದ ವಿಭಾಗದ ಪಾಧ್ಯಾಪಕ ಡಾ.ಚಂದ್ರಪ್ಪ ಕೆ. ಮಾತನಾಡಿ, ಭಾರತದ ಸಂವಿಧಾನವು ವಿಶ್ವದಲ್ಲಿಯೇ ಶೇಷ್ಠ ಸಂವಿಧಾನವಾಗಿದೆ. ನಮ್ಮ ರಾಜಕೀಯ ವ್ಯವಸ್ಥೆಯನ್ನು ರೂಪಿಸಲು ಮತ್ತು ಎಲ್ಲಾ ವರ್ಗಗಳಿಗೂ ಸಮಾನತೆ ನೀಡಲು ಸಹೋದರತೆ ಬೆಳೆಸಲು ಸಂವಿಧಾನವೇ ಅಡಿಗಲ್ಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಮುಖರಾದ ಪ್ರೊ.ಕೆ.ಷಫೀವುಲ್ಲಾ, ಡಾ.ಹಾಲಮ್ಮ, ಡಾ. ಶಂಭುಲಿಂಗಮೂರ್ತಿ ಡಾ.ಬಿ.ಎ.ಚಂದ್ರಶೇಖರ್, ಡಾ.ಎಚ್.ಪಿ. ಮಂಜುನಾಥ್,ಡಾ.ಶಶಿಧರ್, ಡಾ.ಶಿವಾನಂದ ಸ್ವಾಮಿ, ಮಹಾದೇವಸ್ವಾಮಿ ಸೇರಿದಂತೆ ಹಲವರಿದ್ದರು.