ವಯಸ್ಸಿನಲ್ಲಿ ಆಗುವಂತ ಬದಲಾವಣೆ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಪ್ರತಿಯೊಂದು ಹಂತದಲ್ಲಿಯೂ ಆಗುವಂತ ಬದಲಾವಣೆಗಳನ್ನು ಸಂತಸದಿಂದ ಸ್ವೀಕರಿಸುತ್ತಾ ವಿದ್ಯಾರ್ಥಿ ದೆಸೆಯಲ್ಲಿ ನಿರ್ದಿಷ್ಟ ಗುರಿ ಉದ್ದೇಶಗಳನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನ ಪಡೆಯುತ್ತಾ ಉತ್ತಮ ಆಚಾರ-ವಿಚಾರ ಗುರಿ-ಉದ್ದೇಶ ಅಳವಡಿಸಿಕೊಂಡು ಮನಸ್ಸು ನಿಯಂತ್ರಿಸಿಕೊಂಡು ಅಧ್ಯಯನ ಮಾಡಿದರೆ ಉತ್ತಮ ಸಾಧಕರಾಗಬಹುದು. ಅದರೊಂದಿಗೆ ಉತ್ತಮ ಆರೋಗ್ಯ ಜೀವನ ಶೈಲಿ ನೆನಪಿನ ಶಕ್ತಿ ಏಕಾಗ್ರತೆ ಹೆಚ್ಚಿಸಿಕೊಳ್ಳಬೇಕು ಎಂದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನ ದೊಡ್ಡಮಗ್ಗೆಯ ಡಾ. ಬಿ. ಆರ್‌. ಅಂಬೇಡ್ಕರ್‌ ವಸತಿ ಶಾಲೆಯಲ್ಲಿ ಹದಿಹರೆಯದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆರೋಗ್ಯ ಅರಿವು ಕುರಿತು ಆಪ್ತಸಮಾಲೋಚನಾ ಕಾರ್ಯಕ್ರಮ ನಡೆಯಿತು.

ಪ್ರಸಕ್ತ ವರ್ಷ 2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆಂಷನ್ ಸೊಸೈಟಿ ಬೆಂಗಳೂರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ ಹಾಸನ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅರಕಲಗೂಡು ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಹದಿಹರೆಯದ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿನ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹರಿಹರೆಯದ ಆರೋಗ್ಯ ಶಿಕ್ಷಣವನ್ನು ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕರಾದ ಪರಶುರಾಮ ಶಿರೂರವರು ಹಮ್ಮಿಕೊಂಡಿದ್ದು, ಪ್ರತಿಯೊಂದು ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಅವರ ಹದಿಹರೆಯದ ವಯಸ್ಸಿನಲ್ಲಿ ಆಗುವಂತ ದೈಹಿಕ ಬದಲಾವಣೆ ಹಾಗೂ ಮಾನಸಿಕವಾಗಿ ಆಗುವಂತಹ ಹಲವಾರು ಅಡತಡೆಗಳು ಮನಸ್ಸು ಚಂಚಲವಾಗುವುದು ಬಾಹ್ಯ ಆಕರ್ಷಣೆಗಳಿಂದ ವಿರುದ್ಧ ಲಿಂಗಗಳ ಕಡೆಗೆ ಆಕರ್ಷಿತರಾಗುವುದು, ಪ್ರೀತಿ- ಪ್ರೇಮ ಅಂತ ಯುವ ಸಮುದಾಯ ಅಧ್ಯಯನ ಗುರಿಗಳತ್ತ ಗಮನಹರಿಸದೆ ಮೋಜು-ಮಸ್ತಿ ಮಾಡುವುದರ ಕಡೆಗೆ ಹೆಚ್ಚು ಒಲವು ತೋರುತ್ತಿರುವುದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಡಿಸಿದರು.

ಅಧ್ಯಯನದ ಕಡೆ ಗಮನ ಹರಿಸದೆ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಅಮೂಲ್ಯವಾದ ಸಮಯ ಮತ್ತು ಜೀವನವನ್ನು ಹಾಳು ಮಾಡಿಕೊಂಡಿರುವ ಸಾಕಷ್ಟು ಪ್ರಕರಣಗಳನ್ನು ಸಮಾಜದಲ್ಲಿ ನೋಡುತ್ತಿದ್ದೇವೆ. ಇದೇ ವೇಳೆ ಬೌದ್ಧಿಕ ಬೆಳವಣಿಗೆ ಕುರಿತು ಮಾತಾಡುವಾಗ ಸಮಾಜದಲ್ಲಿ ಸಾಕಷ್ಟು ಜನ ಸಾಧಕರ ಸಾಧನೆಯ ವಿಚಾರಗಳನ್ನ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಈ ಒಂದು ವಯಸ್ಸಿನಲ್ಲಿ ಆಗುವಂತ ಬದಲಾವಣೆ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಯಾವುದೇ ರೀತಿಯ ಆತಂಕಕ್ಕೆ ಒಳಗಾಗದೆ ಪ್ರತಿಯೊಂದು ಹಂತದಲ್ಲಿಯೂ ಆಗುವಂತ ಬದಲಾವಣೆಗಳನ್ನು ಸಂತಸದಿಂದ ಸ್ವೀಕರಿಸುತ್ತಾ ವಿದ್ಯಾರ್ಥಿ ದೆಸೆಯಲ್ಲಿ ನಿರ್ದಿಷ್ಟ ಗುರಿ ಉದ್ದೇಶಗಳನ್ನು ಇಟ್ಟುಕೊಂಡು ಗುರುಗಳ ಮಾರ್ಗದರ್ಶನ ಪಡೆಯುತ್ತಾ ಉತ್ತಮ ಆಚಾರ-ವಿಚಾರ ಗುರಿ-ಉದ್ದೇಶ ಅಳವಡಿಸಿಕೊಂಡು ಮನಸ್ಸು ನಿಯಂತ್ರಿಸಿಕೊಂಡು ಅಧ್ಯಯನ ಮಾಡಿದರೆ ಉತ್ತಮ ಸಾಧಕರಾಗಬಹುದು. ಅದರೊಂದಿಗೆ ಉತ್ತಮ ಆರೋಗ್ಯ ಜೀವನ ಶೈಲಿ ನೆನಪಿನ ಶಕ್ತಿ ಏಕಾಗ್ರತೆ ಹೆಚ್ಚಿಸಿಕೊಳ್ಳಬೇಕು ಎಂದರು.

ಹಲವಾರು ಬಾಹ್ಯ ಒತ್ತಡಗಳಿಂದ ದೂರವಿದ್ದು ತಮ್ಮ ಗುರಿಯತ್ತ ಮನಸ್ಸನ್ನು ಹೆಚ್ಚು ಕೇಂದ್ರೀಕರಿಸಿದಾಗ ಒಳ್ಳೆಯ ಸದ್ವಿಚಾರದ ಗುಣಗಳನ್ನು ಅಳವಡಿಸಿಕೊಂಡು ಒಳ್ಳೆಯ ಸ್ನೇಹಿತರ ಸಹವಾಸದಿಂದ ಅಧ್ಯಯನಕ್ಕೆ ಪೂರಕವಾದ ವಿಚಾರಗಳನ್ನು ಚರ್ಚಿಸುವುದರ ಮೂಲಕ ಉತ್ತಮ ಅಂಕಗಳನ್ನು ಪಡೆಯಬಹುದು ಹಾಗೂ ಸಾಕಷ್ಟು ಅಧ್ಯಯನ ಗ್ರಂಥಗಳಲ್ಲಿ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳುವ ವಿಧಾನಗಳನ್ನು ಕುರಿತ ಚರ್ಚೆ ಏಕಾಗ್ರತೆ ವಹಿಸಿದರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಉತ್ತಮವಾದ ಅಂಕಗಳನ್ನು ಪಡೆಯಬಹುದು. ಹದಿಹರೆಯದ ವಯಸ್ಸಿನಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮಾನಸಿಕವಾಗಿ ಸಾಕಷ್ಟು ಆಧುನಿಕ ಕಾಲದ ಆಕರ್ಷಣೆಯ ಮೂಲಗಳಾದ ಮೊಬೈಲ್ ದೂರದರ್ಶನ ಕಂಪ್ಯೂಟರ್‌ ವಿವಿಧ ರೀತಿಯ ಆನ್ಲೈನ್ ಮೂಲಕ ಆಡುವಂತ ಆಟಗಳು ಬೈಕ್ ವೀಲಿಂಗ್ ಮಾಡುವಂತ ಸಾಹಸಕ್ಕೆ ಕೈಹಾಕುವಂತ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲಿ ಯುವಕ ಯುವತಿಯರು ತೋರಿಕೆಯ ಸಲುವಾಗಿ ಹಚ್ಚೆ- ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದು, ಡ್ರಗ್ಸ್ ಚುಚ್ಚಿಸಿಕೊಳ್ಳುತ್ತಿರುವುದು, ಅವಿವಾಹಿತರು ಲೈಂಗಿಕ ಸಂಪರ್ಕದಲ್ಲಿ ಭಾಗಿಯಾಗುತ್ತಿರುವುದರಿಂದ ಎಚ್ಐವಿ ಖಚಿತ ಪ್ರಕರಣಗಳು ಕಂಡು ಬರುತ್ತಿರುವುದು ತುಂಬಾ ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಈ ರೀತಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳ ಜೀವಕ್ಕೆ ಮಾರಕವಾಗಿರೋದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಅವುಗಳನ್ನು ನಿಯಂತ್ರಿಸುವ ಸಲುವಾಗಿ ಸಾಕಷ್ಟು ಮಾರ್ಗೋಪಾಯಗಳನ್ನ ಧ್ಯಾನ ಯೋಗಾಸನ ಮಾಡುವುದು ಒಳ್ಳೆಯ ವಿಚಾರಗಳನ್ನು ಹೊಂದಿದ ಸಂಗೀತ ಆಲಿಸುವುದು. ಪುರಾಣ ಪ್ರವಚಗಳನ್ನು ಕೇಳುವುದು. ಈ ರೀತಿಯಲ್ಲಿ ಹಲವಾರು ವಿಚಾರಗಳನ್ನು ಕುರಿತು ಅದರಿಂದ ಹೊರಬರುವ ಮಾರ್ಗೋಪಾಯಗಳನ್ನು ವಿದ್ಯಾರ್ಥಿಗಳ ಜೊತೆಗೆ ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ವಸತಿ ಶಾಲೆಯ ಸುಮಲತಾ ಮತ್ತು ಹರೀಶಕುಮಾರ್‌ ಹಾಗೂ ಎಲ್ಲಾ ಬೋಧಕ - ಬೋಧಕೇತರ ಸಿಬ್ಬಂದಿ ಹಾಗೂ ಇತರರು ಇದ್ದರು.