ವಿದ್ಯಾರ್ಥಿಗಳು ತಾಳ್ಮೆಯಿಂದ ಪರೀಕ್ಷೆ ಎದುರಿಸಿ: ಸೌಭಾಗ್ಯ ರಾಮರಾಜ್

| Published : Feb 19 2024, 01:30 AM IST

ವಿದ್ಯಾರ್ಥಿಗಳು ತಾಳ್ಮೆಯಿಂದ ಪರೀಕ್ಷೆ ಎದುರಿಸಿ: ಸೌಭಾಗ್ಯ ರಾಮರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಸತತ ಅಧ್ಯಯನ ನಡೆಸಿದರೆ ಯಾವುದೇ ವಿಷಯವೂ ಸರಳವಾಗುತ್ತದೆ. ಕಠಿಣ ವಿಷಯಗಳ ಬಗ್ಗೆ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಂಡು, ಪರೀಕ್ಷಾ ಕೊಠಡಿಯಲ್ಲಿ ಗೊಂದಲಕ್ಕೊಳಗಾಗದೇ, ಆತ್ಮವಿಶ್ವಾಸದಿಂದ ಪ್ರಶ್ನೆಪತ್ರಿಕೆಯನ್ನು ತಾಳ್ಮೆಯಿಂದ ಗಮನಿಸಿ ಸ್ಪಷ್ಟವಾಗಿ ಉತ್ತರಿಸಬೇಕು ಎಂದು ಶಿಕ್ಷಕಿ ಸೌಭಾಗ್ಯ ರಾಮರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ರಂಗನಾಥನಗರದ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ತಮಟೆ ಸಂಸ್ಥೆ ಹಾಗೂ ನವೋದಯ ಯುವ ವೇದಿಕೆ ಸಹಯೋಗದಲ್ಲಿ ಏರ್ಪಡಿಸಿದ್ದ ಮೊರಾರ್ಜಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರವೇಶ ಪರೀಕ್ಷೆ ಬರೆಯುತ್ತಿರುವ ಪೌರ ಕಾರ್ಮಿಕರ ಮತ್ತು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಒಂದು ದಿನದ ಉಚಿತ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಶಿಕ್ಷಣ ಎಲ್ಲರಿಗೂ ಬಹಳ ಮುಖ್ಯ. ಹಿಂದೆ ಕೆಲವರಿಗೆ ಮಾತ್ರ ಶಿಕ್ಷಣ ಸಿಗುತ್ತಿತ್ತು. ಆದರೆ, ಸಂವಿಧಾನ ಬಂದ ಬಳಿಕ ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತಾಯಿತು. ಪ್ರಸ್ತುತ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂದಿದ್ದು ಗಂಡು ಮಕ್ಕಳು ಆ ದಿಸೆಯಲ್ಲಿ ಸಾಗಬೇಕು. ದೇಶದ ಪ್ರಗತಿಯಾಗಲು ಪ್ರತಿಯೊಬ್ಬರು ಶಿಕ್ಷಿತರಾಗಬೇಕು. ಪೌರಕಾರ್ಮಿಕರ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.

ತರಬೇತಿ ಕಾರ್ಯಾಗಾರದಲ್ಲಿ ತಾಲ್ಲೂಕಿನಾದ್ಯಂತ ಸುಮಾರು ಮೂವತ್ತುಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕಿ ಗೀತಾ ಸುರೇಶ್, ತಮಟೆ ಸಂಸ್ಥೆಯ ಗಂಗರಾಜು, ತಮಟೆ ಶಾಲೆಯ ಶಿಕ್ಷಕಿ ಸಾವಿತ್ರಮ್ಮ, ಸಣ್ಣರಂಗಮ್ಮ, ನವೋದಯ ಯುವ ವೇದಿಕೆಯ ಅಧ್ಯಕ್ಷ ಜಯರಾಮಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.