ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್. ಎಸ್. ಮಂಜುಶೆಟ್ಟಿಗೌಡ ಆಹಾರಮೇಳ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ವ್ಯಾಪಾರ ಕೌಶಲ್ಯ ಕಲಿತು ಮುಂದಿನ ದಿನಗಳಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಇಂತಹ ಕಾರ್ಯಕ್ರಮಗಳು ನೆರವಾಗಲಿದೆ ಎಂದರು. ಹನ್ನೆರಡು ತಂಡಗಳು ಚರುಮುರಿ, ಪಾನಿಪೂರಿ, ಗೋಬಿಮಂಚೂರಿ, ಚಿಕನ್ ಕಬಾಬ್, ಚಿಕನ್ ಬಿರಿಯಾನಿ, ಹಣ್ಣುಗಳ ಜ್ಯೂಸ್, ಸಿಹಿ ಖಾದ್ಯಗಳನ್ನು ತಯಾರಿಸಿ ಮಾರಾಟ ನಡೆಸಿದರು. ಎಲ್ಲ ತಂಡಗಳು ತಾವು ಹೂಡಿದ ಬಂಡವಾಳಕ್ಕಿಂತ ಹೆಚ್ಚಿನ ಲಾಭಗಳಿಕೆ ಮಾಡಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆಹಾರಮೇಳ ಆಯೋಜಿಸಿದ್ದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಎಚ್. ಎಸ್. ಮಂಜುಶೆಟ್ಟಿಗೌಡ ಕಾರ್ಯಕ್ರಮ ಉದ್ಘಾಟಿಸಿ, ವಿದ್ಯಾರ್ಥಿಗಳು ವ್ಯಾಪಾರ ಕೌಶಲ್ಯ ಕಲಿತು ಮುಂದಿನ ದಿನಗಳಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಇಂತಹ ಕಾರ್ಯಕ್ರಮಗಳು ನೆರವಾಗಲಿದೆ ಎಂದರು. ಹನ್ನೆರಡು ತಂಡಗಳು ಚರುಮುರಿ, ಪಾನಿಪೂರಿ, ಗೋಬಿಮಂಚೂರಿ, ಚಿಕನ್ ಕಬಾಬ್, ಚಿಕನ್ ಬಿರಿಯಾನಿ, ಹಣ್ಣುಗಳ ಜ್ಯೂಸ್, ಸಿಹಿ ಖಾದ್ಯಗಳನ್ನು ತಯಾರಿಸಿ ಮಾರಾಟ ನಡೆಸಿದರು. ಎಲ್ಲ ತಂಡಗಳು ತಾವು ಹೂಡಿದ ಬಂಡವಾಳಕ್ಕಿಂತ ಹೆಚ್ಚಿನ ಲಾಭಗಳಿಕೆ ಮಾಡಿದರು. ಕೆನರಾ ಬ್ಯಾಂಕಿನಿಂದ ಕೊಡುಗೆಯಾಗಿ ನೀಡಿದ್ದ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಸಿಡಿಸಿ ಸದಸ್ಯರಾದ ಮಂಜುಮೋಹನ್, ಗಾಯಿತ್ರಿ, ಮಹೇಶ್ವರಿ, ಪ್ರಾಂಶುಪಾಲ ಕೆ.ಬಿ. ಅನಂತರಾಜ್, ಹಿರಿಯ ಉಪನ್ಯಾಸಕ ಬಿ.ಪಿ. ಬಸವರಾಜ್, ಉಪ ಪ್ರಾಂಶುಪಾಲ ಬೊರಣ್ಣಗೌಡ ಉಪಸ್ಥಿತರಿದ್ದರು.