ಸ್ಫೂರ್ತಿಯುತ ಬೋಧನೆಯಿಂದ ವಿದ್ಯಾರ್ಥಿಗಳ ಬದುಕು ಹಸನು: ಹನುಮಂತಗೌಡ ಗೊಲ್ಲರ

| Published : May 13 2025, 01:19 AM IST

ಸ್ಫೂರ್ತಿಯುತ ಬೋಧನೆಯಿಂದ ವಿದ್ಯಾರ್ಥಿಗಳ ಬದುಕು ಹಸನು: ಹನುಮಂತಗೌಡ ಗೊಲ್ಲರ
Share this Article
  • FB
  • TW
  • Linkdin
  • Email

ಸಾರಾಂಶ

ಅರ್ಜಿ ಸಲ್ಲಿಸಿ ಪಡೆಯುವ ಯಾವುದೇ ಪ್ರಶಸ್ತಿಗಿಂತ ವಿದ್ಯಾರ್ಥಿಗಳು ನೀಡಿದ ಗೌರವ ವಂದನೆ ಹೆಚ್ಚಿನದು. ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಸಾಂಸ್ಕೃತಿಕ ವರ್ಗಾವಣೆಯ ನೇತಾರರು.

ಹಾವೇರಿ: ತಮ್ಮ ಬೋಧನೆ ಹಾಗೂ ಜೀವನದಿಂದ ವಿದ್ಯಾರ್ಥಿಗಳನ್ನು ತಿದ್ದಿ, ತೀಡಿ ಅವರನ್ನು ಕಲಾತ್ಮಕ ಕೌಶಲ್ಯ ಎಂಬಂತೆ ರೂಪಿಸಿ ಮನುಷ್ಯರನ್ನಾಗಿ ಮಾಡಿದ, ಮಾಡುತ್ತಿರುವ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಶಿಕ್ಷಕ ವೃತ್ತಿಯ ಸಾರ್ಥಕತೆ ಅಡಗಿದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ತಿಳಿಸಿದರು.ತಾಲೂಕಿನ ದೇವಗಿರಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯ ಸಭಾಭವನದಲ್ಲಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ 1994- 95ನೇ ಸಾಲಿನಲ್ಲಿ ವ್ಯಾಸಂಗ ಮಾಡಿದ ಹಿರಿಯ ವಿದ್ಯಾರ್ಥಿಗಳು ಸಂಘಟಿಸಿದ್ದ ಗುರುವಂದನೆ ಹಾಗೂ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.ಅರ್ಜಿ ಸಲ್ಲಿಸಿ ಪಡೆಯುವ ಯಾವುದೇ ಪ್ರಶಸ್ತಿಗಿಂತ ವಿದ್ಯಾರ್ಥಿಗಳು ನೀಡಿದ ಗೌರವ ವಂದನೆ ಹೆಚ್ಚಿನದು. ಶಿಕ್ಷಕರು ತಮ್ಮಲ್ಲಿರುವ ಪ್ರತಿಭೆಗಳನ್ನು ವಿದ್ಯಾರ್ಥಿಗಳಿಗೆ ದಾಟಿಸುವ ಸಾಂಸ್ಕೃತಿಕ ವರ್ಗಾವಣೆಯ ನೇತಾರರು. ಶಿಕ್ಷಕರ ಒಂದೊಂದು ಮಾತು, ಕೃತಿ ಮಗುವನ್ನು ಪ್ರೋತ್ಸಾಹಿಸಬಲ್ಲವು. ಅಂತೆಯೇ ಕುಗ್ಗಿಸಿ ಬಿಡಬಲ್ಲವು. ಜೀವನದಲ್ಲಿ ಬದಲಾವಣೆ ತರಬಲ್ಲ ಮಾತುಗಳು ಮನದಾಳದ ಚಿಂತನೆಯಿಂದ ಬಂದರೆ ವಿದ್ಯಾರ್ಥಿಗಳ ಬಾಳು ಹಸನಾಗಬಹುದು. ಕರುಣೆ, ಪ್ರೀತಿಯಿಂದ ಮಗುವನ್ನು ಗಮನಿಸಿದರೆ ಅಸಾಧ್ಯ ಬದಲಾವಣೆ ಸಾಧ್ಯ ಎಂದರು.ನಿವೃತ್ತ ಶಿಕ್ಷಕ ಎಸ್.ವಿ. ಮಾಹೂರ ಮಾತನಾಡಿ, ಇದೊಂದು ಸ್ಮರಣೀಯ ಕಾರ್ಯಕ್ರಮ. ಕಲಿಸಿದ ಗುರುಗಳು, ಕಲಿತ ಶಾಲೆ ಎಂದು ಮರೆಯಬಾರದು ಎಂದರು.ನಿವೃತ್ತ ಮುಖ್ಯೋಪಾಧ್ಯಾಪಕ ಎಸ್.ಜಿ. ಸಿದ್ದಮ್ಮನವರ ಕಾರ್ಯಕ್ರಮ ಉದ್ಘಾಟಿಸಿದರು. ಪಿ.ಬಿ. ಮುದ್ದಿ, ಸುಧಾ ಕುಲಕರ್ಣಿ, ಡಿ.ಎಸ್. ಪರಡ್ಡಿ, ಬಿ.ಎಚ್. ಬಾರ್ಕಿ, ಸಾವಿತ್ರಮ್ಮ ಬಡ್ನಿ, ಬಿ.ಎಸ್. ಮುಗದೂರ, ಪಿ.ಎಸ್. ತಿರುಕಣ್ಣನವರ ಅವರನ್ನು ಹಿರಿಯ ವಿದ್ಯಾರ್ಥಿಗಳು ಗೌರವಿಸಿ ಗುರುವಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿಜಯಕುಮಾರ್ ಬೋಳಶೆಟ್ಟಿ ಅವರಿಗೆ ಕಲಾ ರತ್ನ ಪ್ರಶಸ್ತಿ ನೀಡಿ ಗೌರವಿಸಿಸಲಾಯಿತು. ಹಿರಿಯ ವಿದ್ಯಾರ್ಥಿಗಳ ಪರವಾಗಿ ಮಾರುತಿ ಗೊರವಾರ ಕಟ್ಟಡ ನಿರ್ಮಾಣಕ್ಕೆ ಒಂದು ಲಕ್ಷ ರು. ನೀಡುವುದಾಗಿ ಘೋಷಿಸಿದರು. ಸಂಗಮೇಶ ಹೊರಡಿ, ಚೆನ್ನಮ್ಮ ಗುರುಮಠ, ಅನಿಸಿಕೆಗಳನ್ನು ಹಂಚಿಕೊಂಡರು. ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಅಶೋಕ ಕಲ್ಲೇದೇವರ, ಗಂಗಾಧರ್ ಪಾಟೀಲ್, ಬಸವರಾಜ್ ಮೈದೂರ, ಮಲ್ಲಿಕಾರ್ಜುನ ಮತ್ತಿತರರು ವೇದಿಕೆಯಲ್ಲಿದ್ದರು.ನರಸಿಂಹ ಜಯಂತಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ

ಸವಣೂರು: ಪಟ್ಟಣದ ಸತ್ಯಬೋಧ ಸ್ವಾಮೀಜಿ ಮೂಲ ವೃಂದಾವನ ಮಠದಲ್ಲಿ ನರಸಿಂಹ ಜಯಂತಿ ಅಂಗವಾಗಿ ಶನಿವಾರ ವಿಶೇಷ ಧಾರ್ಮಿಕ ಕಾರ್ಯಕ್ರಮ ಕೈಗೊಳ್ಳಲಾಯಿತು.

ಶ್ರೀಮಠದಲ್ಲಿರುವ ಅಹೋಬಲ ಲಕ್ಷ್ಮೀನರಸಿಂಹ ದೇವರ ಸನ್ನಿಧಿಗೆ ವಿಶೇಷ ಫಲ ಪಂಚಾಮೃತವನ್ನು ಕೈಗೊಳ್ಳಲಾಯಿತು. ವಾಯುಸ್ತುತಿ ಪಠಣ ಪೂರ್ವಕ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಅಲಂಕಾರ, ನೈವೇದ್ಯ ಸಮರ್ಪಣೆ ನೆರವೇರಿಸಲಾಯಿತು. ಪ್ರಮೋದಾಚಾರ ರಾಯಚೂರ ಉಪನ್ಯಾಸ ನೀಡಿ, ನರಸಿಂಹ ಜಯಂತಿಯ ಮಹತ್ವ ಹಾಗೂ ಗುರುಗಳ ಮಹಿಮೆಯ ಬಗ್ಗೆ ವಿವರಿಸಿದರು.ಶ್ರೀಮಠದ ಪೂಜಾ ಪರ್ಯಾಯಸ್ಥ ಅವಿನಾಶ ಆಚಾರ್ಯ ರಾಯಚೂರ ಹಾಗೂ ಅಭಿಷೇಕ ಆಚಾರ್ಯ ರಾಯಚೂರ ನೇತೃತ್ವ ವಹಿಸಿದ್ದರು.ಅರ್ಚಕ ರಂಗಾಚಾರ್ಯ ರಾಯಚೂರ ನರಸಿಂಹ ಜಯಂತಿಯ ವಿಧಿ ವಿಧಾನಗಳನ್ನು ಕೈಗೊಂಡರು. ತೀರ್ಥ ಪ್ರಸಾದ ವಿತರಣೆ ಕೈಗೊಳ್ಳಲಾಯಿತು. ಪ್ರಮುಖರಾದ ವೆಂಕಟೇಶ ನಾಯಕ, ಪ್ರಮೋದ ರಾಯಚೂರ, ಪ್ರವೀಣ ಆಚಾರ್ಯ ಆಯಿ, ಪವಮಾನ ಆಚಾರ್ಯ ನಾಮಾವಳಿ, ನಾಗೇಶ ಪಾಟೀಲ, ಪಾಂಡುರಂಗ ರಿತ್ತಿ, ಕೇಶವ ಪಡಸಲಗಿ, ಪ್ರವೀಣ ಕುಲಕರ್ಣಿ ಹಾಗೂ ಇತರರು ಪಾಲ್ಗೊಂಡಿದ್ದರು.