ವಿದ್ಯಾರ್ಥಿಗಳು ಅಧ್ಯಯನಕ್ಕೆ ಸಮಯ ಮೀಸಲಿಡಿ: ಡಾ.ಎಂ.ಎಸ್.ಮಹದೇವಸ್ವಾಮಿ

| Published : Jan 26 2025, 01:34 AM IST

ಸಾರಾಂಶ

ಐಚ್ಚಿಕ ಕನ್ನಡ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಡ್ಡಾಯ. ಕನ್ನಡ ಪತ್ರಿಕೆಯಲ್ಲಿ 90ರಷ್ಟು ಸರಳವಾಗಿ ನಿರಾಳವಾಗಿ ಉತ್ತರಿಸುತ್ತಾರೆ. ಅಲ್ಲದೇ, ಸರ್ಕಾರಿ ನೌಕರಿಯಲ್ಲಿ ಅತಿ ಹೆಚ್ಚು ಆಯ್ಕೆಯಾಗಿರುವ ಅಭ್ಯರ್ಥಿಗಳು ಕನ್ನಡ ವಿದ್ಯಾರ್ಥಿಗಳೇ ಆಗಿದ್ದಾರೆ. ಕನ್ನಡ ಅಧ್ಯಯನ ಮಾಡಿದರೆ ಹಲವು ಕ್ಷೇತ್ರದಲ್ಲಿ ಉದ್ಯೋಗ ದೊರೆಯಲಿದೆ.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ವಿದ್ಯಾರ್ಥಿಗಳು ತಮ್ಮ ಹೆಚ್ಚಿನ ಸಮಯವನ್ನು ಅಧ್ಯಯನಕ್ಕೆ ಮೀಸಲಿಡಬೇಕು ಎಂದು ಭಾರತಿ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ತಿಳಿಸಿದರು.

ಭಾರತೀ ಕಾಲೇಜಿನ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದಲ್ಲಿ ದ್ವಿತೀಯ ಎಂ.ಎ.ವಿದ್ಯಾರ್ಥಿಗಳಿಂದ ಪ್ರಥಮ ಎಂ.ಎ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭಕ್ಕೆ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿ, ಅಧ್ಯಯನಕ್ಕೆ ಸಂಖ್ಯೆ ಮುಖ್ಯವಲ್ಲ. ವಿದ್ಯಾರ್ಥಿಗಳು ಪಠ್ಯ ಜತೆಗೆ ಹೆಚ್ಚಿನ ವಿಷಯವನ್ನು ತಿಳಿಯಲು ಗ್ರಂಥಾಲಯದಲ್ಲಿ ಅಧ್ಯಯನ ಮಾಡಬೇಕು ಎಂದರು.

ಮಂಡ್ಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಎಂ.ನಂದೀಶ್ ಮಾತನಾಡಿ, ವಿದ್ಯಾರ್ಥಿಗಳು ಸಾಹಿತ್ಯ ದಿಗ್ಗಜರಂತೆ ಆಗಬೇಕಾದರೆ ಗರಡಿ ಮನೆಯಲ್ಲಿ ಪೈಲ್ವಾನ್ ತಾಲೀಮ್ ಮಾಡುವಂತೆ ವಿದ್ಯಾರ್ಥಿಗಳು ಗುರಿಯೊಂದಿಗೆ ಗ್ರಂಥಾಲಯದಲ್ಲಿ ತಲ್ಲಿನ ಆಗಬೇಕು ಎಂದರು.

ಹಲಗೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರೊ.ಎಚ್.ಎಂ.ಮೂರ್ತಿ ಮಾತನಾಡಿ, ಐಚ್ಚಿಕ ಕನ್ನಡ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕಡ್ಡಾಯ. ಕನ್ನಡ ಪತ್ರಿಕೆಯಲ್ಲಿ 90ರಷ್ಟು ಸರಳವಾಗಿ ನಿರಾಳವಾಗಿ ಉತ್ತರಿಸುತ್ತಾರೆ. ಅಲ್ಲದೇ, ಸರ್ಕಾರಿ ನೌಕರಿಯಲ್ಲಿ ಅತಿ ಹೆಚ್ಚು ಆಯ್ಕೆಯಾಗಿರುವ ಅಭ್ಯರ್ಥಿಗಳು ಕನ್ನಡ ವಿದ್ಯಾರ್ಥಿಗಳೇ ಆಗಿದ್ದಾರೆ. ಕನ್ನಡ ಅಧ್ಯಯನ ಮಾಡಿದರೆ ಹಲವು ಕ್ಷೇತ್ರದಲ್ಲಿ ಉದ್ಯೋಗ ದೊರೆಯಲಿದೆ. ಬದುಕು ಹಸನಾಗಬೇಕಾದರೆ ಹೆಚ್ಚು ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಮಾತ ಭಾರತಿ ಕಾಲೇಜು ಸ್ನಾತಕೋತ್ತರ ಕೇಂದ್ರ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನಾಗರಾಜು ಮಾತನಾಡಿ, ಯಾವುದೇ ವಿದ್ಯೆ ಸಂಸ್ಥೆಗಳಾಗಲಿ, ಶಾಲಾ ಕಾಲೇಜಿಗಳಲ್ಲಿ ಕನ್ನಡ ಹುದ್ದೆ ಅವಶ್ಯಕತೆ ಇದೆ. ಒಂದು ಸಂಸ್ಥೆ ಕಟ್ಟಲು ಸುಲಭವಲ್ಲ 1962ರಲ್ಲಿ ಒಂದು ಬಾಡಿಗೆ ಮನೆಯಲ್ಲಿ ಸ್ಥಾಪಿತವಾದ ಭಾರತಿ ಶಿಕ್ಷಣ ಸಂಸ್ಥೆ ಇಂದು ಬೃಹತ್ ಸಂಸ್ಥೆಯಾಗಿ ರೂಪಿತಗೊಂಡಿದೆ ಎಂದರು.

ಅಧ್ಯಾಪಕರು ತಮ್ಮ ಅನುಭವದ ಮೂಲಕ ನಿಮ್ಮನ್ನು ಮಾರ್ಗದರ್ಶನ ಮಾಡುತ್ತಾರೆ. ಕನ್ನಡದ ಜತೆಗೆ ಕಂಪ್ಯೂಟರ್ ಇಂಗ್ಲಿಷ್ ಜ್ಞಾನ ಅವಶ್ಯಕತೆ ಇದೆ. ನೀವು ಆ ನಿಟ್ಟಿನಲ್ಲಿ ಅಧ್ಯಯನ ಮಾಡಿ ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪ್ರಾಧ್ಯಾಪಕ ಡಾ.ಎಚ್ ನಾಗೇಶ್, ಸಹಾಯಕ ಪ್ರಾಧ್ಯಾಪಕ ಡಾ.ಸಿ.ಮರಯ್ಯ, ಡಾ.ಜಿ.ಎಂ.ಲಕ್ಷ್ಮಿ, ಬಿ.ಡಿ.ಮಹೇಶ್, ಡಿ.ಎಲ್.ಸರಿತಾ, ಸಂಶೋಧನಾ ವಿದ್ಯಾರ್ಥಿಗಳಾದ ಗುರುಪ್ರಸಾದ್, ಹರೀಶ್ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.