ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ, ಶ್ರದ್ಧೆ ಅಗತ್ಯ: ರಾಮ ಮೊಗೇರ

| Published : Jun 01 2024, 12:46 AM IST

ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ, ಶ್ರದ್ಧೆ ಅಗತ್ಯ: ರಾಮ ಮೊಗೇರ
Share this Article
  • FB
  • TW
  • Linkdin
  • Email

ಸಾರಾಂಶ

ಅಂಕೋಲಾ ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮೀನುಗಾರ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಶಿಬಿರ ನಡೆಸಿದ್ದು ಸುವರ್ಣ ಗಳಿಗೆಯಾಗಿದೆ. ಮೀನುಗಾರ ಮಕ್ಕಳು ಮೀನುಗಾರಿಕೆಯನ್ನಷ್ಟೇ ಅಲ್ಲದೆ ಶೈಕ್ಷಣಿಕವಾಗಿಯೂ ಪ್ರಬಲವಾಗಬೇಕು.

ಅಂಕೋಲಾ: ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಯಶಸ್ಸು ಕಾಣಲು ಕಠಿಣ ಪರಿಶ್ರಮ ಮತ್ತು ಶ್ರದ್ಧೆ ಹೊಂದಿರಬೇಕು ಎಂದು ಮೀನುಗಾರ ಮುಖಂಡ ರಾಮ ಮೊಗೇರ ಅಭಿಪ್ರಾಯಪಟ್ಟರು.

ಅಂಕೋಲಾದ ಕಲ್ಪವೃಕ್ಷ ಅಕಾಡೆಮಿ ಸಭಾಭವನದಲ್ಲಿ ಮೀನುಗಾರರ ರಕ್ಷಣಾ ವೇದಿಕೆ, ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಾಗರಿಕ ವೇದಿಕೆಯ ಆಶ್ರಯದಲ್ಲಿ ಮೀನುಗಾರರ ಮಕ್ಕಳಿಗೆ ಒಂದು ದಿನದ ನಾವಿಕ ಶೈಕ್ಷಣಿಕ ಮಾರ್ಗದರ್ಶನ ತರಬೇತಿ ಶಿಬಿರ ಹಾಗೂ ಪ್ರತಿಭಾವಂತರಿಗೆ ಸನ್ಮಾನ ಕಾರ್ಯಕ್ರಮದ ಸಮಾರೋಪ ಸಭಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲೂಕಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮೀನುಗಾರ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಶಿಬಿರ ನಡೆಸಿದ್ದು ಸುವರ್ಣ ಗಳಿಗೆಯಾಗಿದೆ. ಮೀನುಗಾರ ಮಕ್ಕಳು ಮೀನುಗಾರಿಕೆಯನ್ನಷ್ಟೇ ಅಲ್ಲದೆ ಶೈಕ್ಷಣಿಕವಾಗಿಯೂ ಪ್ರಬಲವಾಗಬೇಕು ಎಂದರು.

ಮೀನುಗಾರ ಮುಖಂಡ ಚಿದಾನಂದ ಲಕ್ಕುಮನೆ ಮಾತನಾಡಿ, ಶೈಕ್ಷಣಿಕ ಸೇವಾ ಮನೋಭಾವನೆಯಿಂದ ಇಂತಹ ಕಾರ್ಯಕ್ರಮಗಳ ಆಯೋಜನೆಯಾಗುತ್ತಿರುವುದು ಶ್ಲಾಘನೀಯ. ಸಮಾಜದ ಉನ್ನತಿಯ ದೃಷ್ಟಿಯಿಂದ ಈ ರೀತಿಯ ಮಾರ್ಗದರ್ಶಿ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಸಮಾಜದ ಪ್ರತಿಭಾವಂತರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ನಿರಂತರವಾಗಿ ದೊರಕಬೇಕು ಎಂದರು.

ಪಿಯುಸಿ, ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ಮೀನುಗಾರ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಮೀನುಗಾರ ಮುಖಂಡರಾದ ರಾಮ ಮೊಗೇರ ಮತ್ತು ಚಿದಾನಂದ ಲಕ್ಕುಮನೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು. ಮೀನುಗಾರ ಮುಖಂಡ ಹರಿಹರ ಹರಿಕಂತ್ರ ಸ್ವಾಗತಿಸಿದರು. ಶಿಕ್ಷಕ ಜಿ.ಆರ್. ತಾಂಡೇಲ ಮತ್ತು ಸೌಜನ್ಯ ಖಾರ್ವಿ ನಿರೂಪಿಸಿದರು. ಉಪನ್ಯಾಸಕ ಧರ್ಮೇಶ ಬಲೆಗಾರ ವಂದಿಸಿದರು. ಶಿಬಿರದ ಕುರಿತು ಪೋಷಕರಾದ ಶೋಭಾ ದುರ್ಗೇಕರ, ಶಿಬಿರಾರ್ಥಿಗಳಾದ ಬಿ.ಎಲ್. ಸೃಜನ್, ಸೌಜನ್ಯ ಖಾರ್ವಿ ಅನಿಸಿಕೆ ವ್ಯಕ್ತಪಡಿಸಿದರು. ಭಾಸ್ಕರ ಮೊಗೇರ ವೇದಿಕೆಯಲ್ಲಿದ್ದರು.

ಉಪನ್ಯಾಸಕ ಮಾರುತಿ ಹರಿಕಂತ್ರ, ಸಂಘಟನೆಯ ನಾಗಪ್ಪ ಹರಿಕಾಂತ, ಜಗದೀಶ ಖಾರ್ವಿ, ಸುಜಾತ ಹರಿಕಾಂತ, ಸಂದೀಪ ಹರಿಕಾಂತ, ಸಂಜಯ ಬೊಬ್ರುಕರ, ತೇಲು ಹರಿಕಾಂತ, ಮಂಜು ಬಲೇಗಾರ, ಪ್ರದೀಪ ಸಾದಿಯೇ, ದಯಾನಂದ ಏರಾಗಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.