ಕರ್ನಾಟಕ ಪಬ್ಲಿಕ್ ಶಾಲೆಯ ಬ್ಯಾಡ್ಮಿಂಟನ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆ

| Published : Oct 23 2024, 12:54 AM IST

ಸಾರಾಂಶ

ಈ ಬಾರಿ ಬ್ಯಾಡ್ಮಿಂಟನ್ ತಂಡದ ನಾಯಕನಾದ ಮನೋಜ್ , ವಿನಯ್, ಯಶಸ್, ಶರತ್ ,ಯಶ್ವಂತ್ ಅವರ ಸತತ ಪ್ರಯತ್ನದಿಂದಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವುದು ತಾಲೂಕಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಹೆಮ್ಮೆಯ ಕ್ರೀಡಾಪಟು

ಕನ್ನಡಪ್ರಭ ವಾರ್ತೆ ರಾವಂದೂರುಟಿ. ನರಸೀಪುರ ತಾಲೂಕು ಬನ್ನೂರು ಸಮೀಪದ ತರಗನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಬ್ಯಾಡ್ಮಿಂಟನ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಬಾರಿ ಬ್ಯಾಡ್ಮಿಂಟನ್ ತಂಡದ ನಾಯಕನಾದ ಮನೋಜ್ , ವಿನಯ್, ಯಶಸ್, ಶರತ್ ,ಯಶ್ವಂತ್ ಅವರ ಸತತ ಪ್ರಯತ್ನದಿಂದಾಗಿ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುವುದು ತಾಲೂಕಿಗೆ ಮತ್ತು ಜಿಲ್ಲೆಗೆ ಕೀರ್ತಿ ತಂದ ಹೆಮ್ಮೆಯ ಕ್ರೀಡಾಪಟುಗಳಾಗಿದ್ದಾರೆ. ಇವರಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಕ ವಿಜಯ್ ಅವರು ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.ಈ ವಿದ್ಯಾರ್ಥಿಗಳನ್ನು ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಆರ್.ವಿ. ವಿಶ್ವನಾಥ್, ಪ್ರಾಂಶುಪಾಲ ಲಕ್ಷ್ಮಿಕಾಂತ್, ಉಪ ಪ್ರಾಂಶುಪಾಲ ಸುರೇಶ್, ಮುಖ್ಯೋಪಾಧ್ಯಾಯರಾದ ಲಿಲ್ಲಿ ಮೇರಿ ,ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಜಿಲೇಂದ್ರ ,ಶಿಕ್ಷಕ ಧನರಾಜ್, ವರದೇಶ್, ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಅಭಿನಂದಿಸಿದ್ದಾರೆ.