ವಿದ್ಯಾರ್ಥಿಗಳು ಸರಿಯಾಗಿ ಓದಿ ಗುರಿ ಮುಟ್ಟಿ

| Published : Nov 22 2025, 03:15 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ವಿದ್ಯಾರ್ಥಿ ಜೀವನದಲ್ಲಿ ವೇಳೆಯನ್ನು ಹಾಳು ಮಾಡದೇ ಸರಿಯಾಗಿ ಓದುವುದರೊಂದಿಗೆ ಗುರಿ ಮುಟ್ಟಬೇಕು ಎಂದು ಹುಕ್ಕೇರಿ ತಾಲೂಕಿನ ಎಸಿ ಅಭಿನವ ಜೈನ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ವಿದ್ಯಾರ್ಥಿ ಜೀವನದಲ್ಲಿ ವೇಳೆಯನ್ನು ಹಾಳು ಮಾಡದೇ ಸರಿಯಾಗಿ ಓದುವುದರೊಂದಿಗೆ ಗುರಿ ಮುಟ್ಟಬೇಕು ಎಂದು ಹುಕ್ಕೇರಿ ತಾಲೂಕಿನ ಎಸಿ ಅಭಿನವ ಜೈನ ಹೇಳಿದರು.

ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮದ ಪಿ.ಎಂ ಶ್ರೀ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಚಿಕ್ಕೋಡಿಯ ಕ್ರೆಡಿಟ್‌ ಆಕ್ಸಸ್‌ ಗ್ರಾಮೀಣ ಲಿಮಿಟೆಡ್‌ನಿಂದ 2025-26ನೇ ಸಾಲಿನ ಶೈಕ್ಷಣಿಕ ಸಾಮಗ್ರಿಗಳ ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಶೈಕ್ಷಣಿಕ ಸಾಧನೆಯಲ್ಲಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುತ್ತಿವೆ. ದಾನಿಗಳ ಸಹಕಾರ ಹಾಗೂ ಸಹಾಯದಿಂದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿರುವ ಸಕಲ ಸೌಲಭ್ಯಗಳನ್ನು ಸರ್ಕಾರಿ ಶಾಲೆಯಲ್ಲಿ ಕಾಣಬಹುದಾಗಿದೆ ಎಂದರು.

ಚಿಕ್ಕೋಡಿ ಎಎಸೈ ಎ.ಎಸ್‌.ಮುಲ್ತಾನಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಮೊಬೈಲ್‌ ಬಳಕೆ ಮಾಡದೇ ಅದರಿಂದ ದೂರವಿರಿ. ಅಗತ್ಯವಿದ್ದರೇ ಮಾತ್ರ ಮೊಬೈಲ್‌ ಬಳಕೆ ಮಾಡಬೇಕು. ಓದು, ಬರಹ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿದರೇ ಭವಿಷ್ಯದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.

ಕ್ರೆಡಿಟ್‌ ಆಕ್ಸಸ್‌ ಗ್ರಾಮೀಣ ಲಿಮಿಟೆಡ್‌ನ ಜನರಲ್‌ ಮ್ಯಾನೇಜರ್‌ ಎಸ್‌.ಎನ್‌.ರವಿ ಮಾತನಾಡಿ, ಸುಮಾರು 26 ವರ್ಷಗಳಿಂದ ಸಾಮಾಜಿಕ ಕಾಳಜಿ ಸೇರಿ ವೈದ್ಯಕೀಯ ಹಾಗೂ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ನಮ್ಮ ಸಂಸ್ಥೆ ಸಹಾಯ, ಸಹಕಾರ ನೀಡುವ ಮೂಲಕ ಅಭಿವೃದ್ಧಿಗೆ ಕೈ ಜೋಡಿಸಿದ್ದೇವೆ ಎಂದು ತಿಳಿಸಿದರು.

ಕ್ರೆಡಿಟ್‌ ಆಕ್ಷಸ್‌ ಗ್ರಾಮೀಣ ಲಿಮಿಟೆಡ್‌ನಿಂದ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳಿಗೆ 40 ಡೆಸ್ಕ್‌ ಹಸ್ತಾಂತರಿಸಲಾಯಿತು. ಈ ವೇಳೆ ಚಿಕ್ಕೋಡಿ ಬಿಇಒ ಎಂ.ಐ.ಜಿನಗೌಡರ, ಕ್ರೆಡಿಟ್‌ ಆಕ್ಸಸ್‌ ಗ್ರಾಮೀಣ ಲಿಮಿಟೆಡ್‌ನ ಬೆಳಗಾವಿ ರಿಜನಲ್‌ ಮ್ಯಾನೇಜರ್‌ ಮಾದೇಗೌಡ.ಸಿ, ಚಿಕ್ಕೋಡಿ ಪೊಲೀಸ್‌ ಠಾಣೆ ಹವಾಲ್ದಾರ್‌ ಪರಶುರಾಮ ಕಾಂಬಳೆ, ಗ್ರಾಮೀಣ ಕೂಟ ಚಿಕ್ಕೋಡಿ ಏರಿಯಾ ಮ್ಯಾನೇಜರ್‌ ಮರಾಪ್ಪ ನಡುವಿನಮನಿ, ಎಸ್‌ಡಿಎಂಸಿ ಸದಸ್ಯರಾದ ಬಸವನಗೌಡ ಪಾಟೀಲ, ಯಲ್ಲಪ್ಪ ದುಗ್ಗಾಣಿ, ಗ್ರಾಪಂ ಸದಸ್ಯರಾದ ವಿಠ್ಠಲ ಹರಕೆ, ಭರಮಾ ಕಾಂಬಳೆ, ಚಿಕ್ಕೋಡಿ ಗ್ರಾಮೀಣ ಕೂಟ ಮ್ಯಾನೇಜರ್‌ ಸುಭಾಷ ಬಡಿಗೇರ, ಮುಖ್ಯೋಪಾಧ್ಯಪಕಿ ಎಸ್.ವೈ.ಕಾಂಬಳೆ ಸೇರಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಕೂಟದ ಸದಸ್ಯರು ಉಪಸ್ಥಿತರಿದ್ದರು.ಕೋಟ್...

ಸರ್ಕಾರಿ ಶಾಲೆಗಳ ಅಭಿವೃದ್ಧಿಯನ್ನು ಸರ್ಕಾರವೇ ಮಾಡಬೇಕು ಎನ್ನವುದಕಿಂತ ಸಾರ್ವಜನಿಕರ ಹಾಗೂ ಸಂಸ್ಥೆಗಳ ಸಹಕಾರದಿಂದ ಶಾಲೆಗಳನ್ನು ಉನ್ನತೀಕರಿಸಬಹುದು ಎನ್ನುವುದನ್ನು ಚಿಕ್ಕೋಡಿ ಕ್ರೆಡಿಟ್‌ ಆಕ್ಸ್‌ಸ್‌ ಗ್ರಾಮೀಣ ಲಿಮಿಟೆಡ್‌ ಮಾಡಿ ತೋರಿಸಿದೆ. ಜಿಲ್ಲಾ ಆಡಳಿತದ ಪರವಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಇದೇ ರೀತಿ ಕೆಲಸಗಳು ಕ್ರೆಡಿಟ್‌ ಆಕ್ಸಸ್‌ ವತಿಯಿಂದ ಹೀಗೆ ಮುಂದುವರೆಯಲಿ.

-ಅಭಿನವ ಜೈನ, ಹುಕ್ಕೇರಿ ತಾಲೂಕಿನ ಎಸಿ.ಶೈಕ್ಷಣಿಕ, ವೈದ್ಯಕೀಯ ಕ್ಷೇತ್ರಗಳಿಗೆ ಸೇರಿದಂತೆ ಸಾಮಾಜಿಕ ಕಾಳಜಿಗೆ ಪೂರಕವಾದ ಕೆಲಸ ಕಾರ್ಯಗಳನ್ನು ಕ್ರೆಡಿಟ್‌ ಆಕ್ಸಸ್‌ ಗ್ರಾಮೀಣ ಲಿಮಿಟೆಡ್‌ ಮಾಡುತ್ತಿದೆ. ಈ ಮೂಲಕ ಇತರ ಸಂಘ-ಸಂಸ್ಥೆಗಳಿಗೆ ಮಾದರಿಯಾಗುವಂತೆ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇದು ಹೀಗೆ ಮುಂದುವರಿಯಲಿ.

-ಎ.ಎಸ್‌.ಮುಲ್ತಾನಿ, ಚಿಕ್ಕೋಡಿ ಎಎಸೈಗ್ರಾಮೀಣ ಕ್ರೆಡಿಟ್‌ ಇದು ಆರ್‌ಬಿಐನಿಂದ ನೋಂದಣಿಯಾಗಿರುವ ಮೈಕ್ರೋ ಫೈನಾನ್ಸ್‌. ಇದು ಕಳೆದ 26 ವರ್ಷಗಳಿಂದ ಬಡ ಕುಟುಂಬಗಳಿಗೆ ಸೌಲಭ್ಯಗ ಒದಗಿಸುತ್ತ ಬಂದಿದ್ದು, 16 ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. 20 ಸಾವಿರಕ್ಕೂ ಅಧಿಕ ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸಿದೆ. ಜೊತೆಗೆ ಅಂಗನವಾಡಿ ಮಕ್ಕಳಿಗೆ ಸಣ್ಣ ಖುರ್ಚಿ, ಜಮಖಾನ, ದೊಡ್ಡ ಖುರ್ಚಿ, ಪೊಲೀಸ್‌ ಸ್ಷೇಷನ್‌ಗಳಿಗೆ ಬ್ಯಾರಿಕೇಡ್‌, ಬಡ ಪ್ರತಿಭಾವಂತ ಹೆಣ್ಮಕ್ಕಳಿಗೆ ಸ್ಕಾಲರ್‌ಶಿಪ್‌ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಿಗೆ ಪಿಠೋಪಕರಣಗಳನ್ನು ಒದಗಿಸಿದ್ದೇವೆ.-ಎಸ್‌.ಎನ್‌.ರವಿ, ಕ್ರೆಡಿಟ್‌ ಆಕ್ಸಸ್‌ ಗ್ರಾಮೀಣ ಲಿಮಿಟೆಡ್‌ನ ಜನರಲ್‌ ಮ್ಯಾನೇಜರ್‌