ಸಾರಾಂಶ
ವಿದ್ಯಾರ್ಥಿನಿಯರಲ್ಲಿ ಸದಾಕಾಲ ಕಲಿಯುವ ತುಡಿತ, ಸಾಧಿಸಬೇಕೆಂಬ ಹಂಬಲವಿರಬೇಕು. ಅಂದಾಗ ಮಾತ್ರ ಸಾಧನೆ ಸಾಧ್ಯ ಎಂದು ಚಿತ್ರನಟಿ ಬೇಬಿ ರೇಖಾ ಹೇಳಿದರು.
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ವಿದ್ಯಾರ್ಥಿನಿಯರಲ್ಲಿ ಸದಾಕಾಲ ಕಲಿಯುವ ತುಡಿತ, ಸಾಧಿಸಬೇಕೆಂಬ ಹಂಬಲವಿರಬೇಕು. ಅಂದಾಗ ಮಾತ್ರ ಸಾಧನೆ ಸಾಧ್ಯ ಎಂದು ಚಿತ್ರನಟಿ ಬೇಬಿ ರೇಖಾ ಹೇಳಿದರು.ಇಲ್ಲಿನ ಜೆ ಎಸ್ ಎಸ್ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಾಧನೆಯ ಯಶಸ್ಸಿಗೆ ಪರಿಶ್ರಮ ಅತ್ಯಂತ ಅಗತ್ಯ. ಹೆಚ್ಚು ಸಾಧನೆ ಮಾಡುವ ಕನಸು ಕಾಣಬೇಕು. ಪಠ್ಯದಷ್ಠೇ ಪಠೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣಾ ಪ್ರಗತಿಗೆ ಪೂರಕವಾಗಲಿದೆ. ಆತ್ಮವಿಶ್ವಾಸದಿಂದ ಸತತ ಪ್ರಯತ್ನ ಮಾಡಿದರೆ ಸಾಧನೆ ಸಾಧ್ಯವಾಗುತ್ತದೆ. ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿನ ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಲಿದೆ ಎಂದರು.ಅಂತಾರಾಷ್ಟ್ರೀಯ ಕ್ರೀಡಾಪಟು ಚೈತ್ರಾ ಮಾತನಾಡಿ, ಸಾಧನೆಗೆ ಶಿಕ್ಷಕರ ಸಹಕಾರ ಅಗತ್ಯ, ನನ್ನ ಸಾಧನೆಗೆ ಹಿಂದೆ ಗುರುಗಳ ಸಹಕಾರವಿದೆ. ಅವರೇ ನನ್ನ ಕ್ರೀಡೆಯಲ್ಲಿ ಸಾಧನೆಗೆ ಪ್ರೇರಣೆ. ಬಾಲ್ಯದಿಂದಲೂ ಕಷ್ಟದಿಂದಲೇ ಬಂದ ನನಗೆ ತಂದೆ, ತಾಯಿಗಳ ಮಾರ್ಗದರ್ಶನ, ಶಿಕ್ಷಕರ ಪ್ರೋತ್ಸಾಹದಿಂದ ಕಲಿಕೆ ಜೊತೆ ಕ್ರೀಡೆಯಲ್ಲೂ ಸಾಧನೆ ಮಾಡುವಂತಾಯಿತು, ನನ್ನ ಸಹೋದ್ಯೋಗಿಗಳು ಸಹಾ ಛಲವಿದ್ದಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಮುಂದಾಗಿ ವಿದ್ಯೆ ಕಲಿಸಿದ ಗುರುಗಳಿಗೆ ವಿಧೇಯರಾಗಿ ಎಂದರು.
ಈ ವೇಳೆ ಪ್ರಾಂಶುಪಾಲ ಮಹದೇವಸ್ವಾಮಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ, ರಂಗಕರ್ಮಿ ಸಿ.ಎಂ. ನರಸಿಂಹಮೂರ್ತಿ ಇನ್ನಿತರಿದ್ದರು.