ಪ್ರಪಂಚದ ಆಗು ಹೋಗುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವಿರಬೇಕು: ಪ್ರೊ.ಬಿ.ಜಯಲಕ್ಷ್ಮಿ

| Published : Oct 21 2024, 12:30 AM IST

ಪ್ರಪಂಚದ ಆಗು ಹೋಗುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವಿರಬೇಕು: ಪ್ರೊ.ಬಿ.ಜಯಲಕ್ಷ್ಮಿ
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲ ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ವತಿಯಿಂದ ಲಿಂಗಸೂಕ್ಷ್ಮತಾ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ವತಿಯಿಂದ ಲಿಂಗಸೂಕ್ಷ್ಮತಾ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮೊದಲಿಗೆ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಪ್ರತ್ಯೇಕ ಕಡೆ ಕೂರಿಸಿ "ನನ್ನ ದೇಹ ನನ್ನ ಹಕ್ಕು " ಎಂದು ಅವರ ದೇಹದ ಬಗ್ಗೆ, ಸಂತಾನೋತ್ಪತ್ತಿಯ ಅಂಗಗಳ ಬಗ್ಗೆ ಅರಿವನ್ನು ಮೂಡಿಸಲಾಯಿತು. ಹೆಣ್ಮು ಮಕ್ಕಳಿಗೆ ಡಾ.ರತಿರಾವ್, ಡಾ.ಸ್ವರ್ಣಮಾಲಾ, ಪ್ರೊ.ಶ್ರೀದೇವಿ ಮತ್ತು ಮಾಳವಿಕ ಅರಿವು ಮೂಡಿಸಿದರೆ, ಗಂಡುಮಕ್ಕಳಿಗೆ ದಿವಾಕರ್, ಸುಶೀಲ, ಅನುಪಮಾ ಮಾಹಿತಿ ಒದಗಿಸಿದರು.ಎರಡನೆಯ ಸೆಷನ್‌ನಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಒಟ್ಟಿಗೆ ಕೂರಿಸಿ ಎರಡೂ ಕೊಠಡಿಗಳಲ್ಲಿ ಲಿಂಗಸೂಕ್ಷ್ಮತೆಯ ಬಗ್ಗೆ, ಲಿಂಗತ್ವದ ಸಿದ್ಧಮಾದರಿಗಳ ಬಗ್ಗೆ, ಅದನ್ನು ಮೀರಬೇಕಾದ ಅವಶ್ಯಕತೆಯ ಬಗ್ಗೆ ತಿಳಿ ಹೇಳಲಾಯಿತು. ವಿವಿಧ ಚಟುವಟಿಗೆಗಳ ಮೂಲಕ, ಆಟಗಳ ಮೂಲಕವು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಯಿತು.

ಈ ಉಪನ್ಯಾಸವನ್ನು ಆಸಕ್ತಿಯಿಂದ ವಿದ್ಯಾರ್ಥಿಗಳು ಆಲಿಸಿ ಅನೇಕ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರೊ.ಬಿ ಜಯಲಕ್ಷ್ಮಿ ಮಾತನಾಡಿ, ಇಂತಹ ಉಪನ್ಯಾಸದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹೆಚ್ಚಿನ ಅರಿವು ಹೊಂದಿ ನಿಮ್ಮ ಜೀವನ ಉತ್ತಮ ರೀತಿ ರೂಪಿಸಿಕೊಳ್ಳಬೇಕಿದೆ, ಅಧ್ಯಯನದ ಜೊತೆ ಹೊರ ಪ್ರಪಚಂದ ಆಗು, ಹೋಗುಗಳ ಬಗ್ಗೆಯೂ ತಿಳಿವಳಿಕೆ ಹೊಂದಬೇಕು ಎಂದರು. ಸಮಿತಿಯ ಸಂಚಾಲಕ ಡಾ.ಸುಧಾ, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಪ್ರೇಮಲತಾ, ಭೂಗೋಳಶಾಸ್ತ್ರದ ಮುಖ್ಯಸ್ಥ ಪ್ರೊ.ಸುಂದರಮೂರ್ತಿ, ಇಂಗ್ಲೀಷ್ ವಿಭಾಗದ ಪ್ರೊ.ಸಫೀನಾ ಬಾನು, ಕನ್ನಡ ವಿಭಾಗದ ಡಾ. ಮಾನಸ ಪ್ರಿಯದರ್ಶಿನಿ ಇನ್ನಿತರರಿದ್ದರು.