ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ ಪಠ್ಯದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಕ್ರೀಡೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗಿಯಾಗುವ ಉತ್ಸಾಹ ರೂಢಿಸಿಕೊಳ್ಳಬೇಕು. ಕ್ರೀಡೆ ಮಾನಸಿಕ, ದೈಹಿಕ ಚೇತನಕ್ಕೆ ಕಾರಣವಾಗುತ್ತದೆ ಎಂದು ಬಿಇಒ ಸಯೀದಾ ಅನೀಸ್ ಮುಜಾವರ ಹೇಳಿದರು.
ಕನ್ನಡಪ್ರಭ ವಾರ್ತೆ ಇಂಡಿ
ಪಠ್ಯದ ಜೊತೆಗೆ ಕ್ರೀಡೆಗೂ ಮಹತ್ವ ನೀಡಬೇಕು. ಕ್ರೀಡೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಭಾಗಿಯಾಗುವ ಉತ್ಸಾಹ ರೂಢಿಸಿಕೊಳ್ಳಬೇಕು. ಕ್ರೀಡೆ ಮಾನಸಿಕ, ದೈಹಿಕ ಚೇತನಕ್ಕೆ ಕಾರಣವಾಗುತ್ತದೆ ಎಂದು ಬಿಇಒ ಸಯೀದಾ ಅನೀಸ್ ಮುಜಾವರ ಹೇಳಿದರು.ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವ ಭಾರತಿ ವಿದ್ಯಾ ಕೇಂದ್ರ ಪ್ರಾಥಮಿಕ ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಕ್ರೀಡಾಕೂಟದಲ್ಲಿ ಆಟಗಳಲ್ಲಿ ಗೆದ್ದ ತಂಡಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು. ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಮನಸ್ಸು ಸದೃಢವಾಗುತ್ತದೆ. ಗೆಲುವು ಸೋಲಿನ ಬಗ್ಗೆ ಚಿಂತಿಸದೆ ಆಟಗಳನ್ನು ಮನಪೂರ್ವಕವಾಗಿ ಆಡಬೇಕು ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೈ.ಟಿ.ಪಾಟೀಲ್ ಮಾತನಾಡಿ, ಕ್ರೀಡೆಗಳು ಜೀವನದ ಅವಿಭಾಜ್ಯ ಅಂಗವಾಗಿದ್ದು, ಕ್ರೀಡೆಗಳಲ್ಲಿ ಸಾಧನೆ ಮಾಡಲು ದೈಹಿಕ ಶಿಕ್ಷಕರು ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ನಿರ್ಣಾಯಕರು ಉತ್ತಮ ಕ್ರೀಡಾಪಟುಗಳನ್ನು ಗುರುತಿಸುವಲ್ಲಿ ಸಫಲರಾಗಬೇಕು ಎಂದು ಹೇಳಿದರು.
ಕ್ರೀಡಾ ಜ್ಯೋತಿಯನ್ನು ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರಿ ಸಂಘದ ಅಧ್ಯಕ್ಷ ಎಸ್.ವಿ.ಹರಳಯ್ಯ, ಉಪಾಧ್ಯಕ್ಷ ಪಿ.ಜಿ.ಕಲ್ಮನಿ ಸ್ವೀಕರಿಸಿದರು, ಇಂಡಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನಿರ್ಮಲಾ ತಳಕೇರಿ ಕ್ರೀಡಾಕೂಟ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಶೈಲಜಾ ಜಾದವ ಅಧ್ಯಕ್ಷತೆ ವಹಿಸಿದ್ದರು. ಸದಾನಂದ ಹಿರೇಮಠ ಸಾನಿಧ್ಯ ವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಉಪಾಧ್ಯಕ್ಷ ಭೀಮರಾಯ ಮೇತ್ರಿ ಧ್ವಜಾರೋಹಣ ನೆರವೇರಿಸಿದರು. ಇಸಿಒ ಪ್ರಕಾಶ್ ನಾಯಕ, ಆನಂದ ಹುಣಸಿಗಿ, ಬಿಆರ್‌ಪಿಗಳಾದ, ರಂಗರಾಜ ಕುಲಕರ್ಣಿ, ಅಲ್ಲಾಭಕ್ಷ ಚೌದರಿ, ಸಿಆರ್‌ಪಿ ರಮೇಶ್ ಬಗಲೂರ, ಸಂಸ್ಥೆಯ ಅಧ್ಯಕ್ಷ ವಿ.ಜಿ.ಕಲ್ಮನಿ, ಬಿಜೆಪಿ ಮುಖಂಡ ಸೋಮನಾಥ್ ಕುಂಬಾರ ಇತರರು ಇದ್ದರು. ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಆರ್.ಡಿ.ಇಂಡಿಕರ್‌ರನ್ನು ಸನ್ಮಾನಿಸಲಾಯಿತು. ಶಿಕ್ಷಕ ಶಿವಾನಂದ ನಿರೂಪಿಸಿ, ವಂದಿಸಿದರು.