ಸಾರಾಂಶ
- ಶೃಂಗೇರಿ ಸರ್ಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಕನ್ನಡ ಪ್ರಭ - ಏಷಿಯಾನೆಟ್ ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆ
ಕನ್ನಡಪ್ರಭ ವಾರ್ತೆ. ಶೃಂಗೇರಿಮೊಬೈಲ್ ಬಳಕೆಯಿಂದ ಎಷ್ಟು ಉಪಯೋಗವೂ ಅಷ್ಚೇ ದುಷ್ಪರಿಣಾಮವೂ ಇದೆ. ವಿದ್ಯಾರ್ಥಿಗಳು ಮೊಬೈಲ್ ಗೀಳು ಬಿಟ್ಟು ಸೃಜನಶೀಲತೆ ಬೆಳೆಸಿಕೊಳ್ಳಬೇಕು ಎಂದು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ.ಕೆ.ಸಿ.ಅಣ್ಣಾದೊರೆ ಹೇಳಿದರು.
ಶೃಂಗೇರಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಡಶಾಲಾ ವಿಭಾಗದಲ್ಲಿ ಕನ್ನಡ ಪ್ರಭ ಹಾಗೂ ಏಷಿಯಾನೆಟ್ ಕರ್ನಾಟಕ ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆ- 2025ರ ಶೃಂಗೇರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಲೆ, ಸಾಹಿತ್ಯ, ವಿಜ್ಞಾನ, ಪರಿಸರ ಇತಿಹಾಸ , ಸಾಮಾನ್ಯ ಜ್ಞಾನ ವಿಷಯಗಳ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು. ಶಿಕ್ಷಣವೆಂದರೆ ಕೇವಲ ಅಂಕಗಳಿಕೆ, ಪಲಿತಾಂಶಕ್ಕೆ ಮಾತ್ರ ಸೀಮಿತವಾಗಿರದೇ ಮುಂದಿನ ಭವಿಷ್ಯಕ್ಕೆ ಭದ್ರ ಬುನಾದಿಯಾಗ ಬೇಕು. ಉತ್ತಮ ಚಾರಿತ್ರ್ಯನಿರ್ಮಾಣ ಶಿಕ್ಷಣದ ಮುಖ್ಯ ಗುರಿಯಾಗಬೇಕು. ಶಿಕ್ಷಣ ಬದುಕಿಗೆ ಪೂರಕವಾಗಿರುವಂತಿರಬೇಕು ಎಂದು ಹೇಳಿದರು.
ಒಳ್ಳೆ ಸಾಹಿತ್ಯ, ಪುಸ್ತಕ ಓದುವ ಸಂಸ್ಕೃತಿ ಮತ್ತು ಪರಿಸರ ಕಾಳಜಿ ಬೆಳೆಸಿಕೊಳ್ಳಬೇಕು. ಕನ್ನಡ ಪ್ರಭವತಿಯಿಂದ ಅರಣ್ಯ ಹಾಗೂ ವನ್ಯಜೀವಿಗಳ ಬಗ್ಗೆ ಚಿತ್ರಕಲಾ ಸ್ಪರ್ಧೆ ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ಅರಣ್ಯ ನಾಶ, ಪರಿಸರ ಮಾಲಿನ್ಯ, ವನ್ಯಜೀವಿಗಳ ಬಗ್ಗೆ ಮಕ್ಕಳಲ್ಲಿ ಒಳ್ಳೆಯ ಅರಿವು ಮೂಡಿಸುತ್ತದೆ. ಕಾಡು, ಮರ, ಪ್ರಾಣಿಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಹುಟ್ಟಿಸುತ್ತದೆ ಎಂದರು.ರೋಟರಿ ಸಂಸ್ಥೆ ಮಾಜಿ ಅಧ್ಯಕ್ಷ ನಾಗೇಶ್ ಕಾಮತ್ ಮಾತನಾಡಿ ಅರಣ್ಯ ನಾಶ, ಪರಿಸರ ನಾಶ ಸಾಧ್ಯವಾದಷ್ಟು ತಡೆಗಟ್ಟಬೇಕು. ಪ್ಲಾಸ್ಟಿಕ್ ,ತ್ಯಾಜ್ಯಗಳನ್ನು ನದಿಗಳಲ್ಲಿ ಹಾಕಬಾರದು.ನದಿ ನೀರನ್ನು ಮಲೀನ ಗೊಳಿಸಬಾರದು.ಎಲ್ಲೆಂದರಲ್ಲಿ ಕಸ ಪ್ಲಾಸ್ಟಿಕ್ ಹಾಕಬಾರದು. ವಿನಾಶದಲ್ಲಿರುವ ಮರಗಳನ್ನು ವನ್ಯ ಜೀವಿಗಳನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರತಿಯಬ್ಬರಲ್ಲಿಯೂ ಪರಿಸರ ಕಾಳಜಿ ಭಾವನೆ ಮೂಡಬೇಕು. ವಿಪರೀತ ಅರಣ್ಯ ನಾಶ ಪರಿಣಾಮ ಅಂತರ್ಜಲ ಕೊರತೆಯಾಗುತ್ತದೆ. ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ.
ಪ್ರಕೃತಿ ಮುನಿದರೆ ಮನುಕುಲದ ನಾಶ ಖಚಿತ. ಅರಣ್ಯ ನಾಶ, ಪರಿಸರ ಮಾಲಿನ್ಯವೇ ಇವತ್ತು ನಡೆಯುತ್ತಿರುವ ಪ್ರಕೃತಿ ವಿಕೋಪ, ನೆರೆ ಪ್ರವಾಹ, ಅತಿವೃಷ್ಠಿಗೆ ಮೂಲ ಕಾರಣ. ವಿದ್ಯಾರ್ಥಿಗಳು ಪರಿಸರ ರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕು ಎಂದರು.ಇದೇ ಸಂದರ್ಭದಲ್ಲಿ ಚಿತ್ರಕಲಾ ಸ್ಪರ್ಧೆಯಲ್ಲಿ ಪಟ್ಟಣದ ಜ್ಞಾನಭಾರತಿ ವಿದ್ಯಾ ಕೇಂದ್ರದ ಸ್ಕಂದ ಕೆ.ಎಸ್.ಪ್ರಥಮ ಬಹುಮಾನ, ಶೃಂಗೇರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಡಶಾಲಾ ವಿಭಾಗದ ಶೃತಿ.ಆರ್.ಎನ್ ದ್ವಿತೀಯ ಬಹುಮಾನ,ಶೃಂಗೇರಿಯ ಜಯಭಾರತಿ ವಿದ್ಯಾಲಯದ ಪ್ರಣಮ್ಯ ಆರ್.ಎನ್.ತೃತಿಯಾ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.
ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಡಶಾಲಾ ವಿಭಾಗದ ಉಪಪ್ರಾಂಶುಪಾಲ ಶಶಿಧರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತೀರ್ಪುಗಾರರಾಗಿ ಚಿತ್ರಕಲಾವಿದರಾದ ರಾಜ್ ಗೋಪಾಲ್, ಬಸವರಾಜ್ ಅಂಬಿಗೆರ ಮತ್ತಿತರರು ಉಪಸ್ಥಿತರಿದ್ದರು. ನೆಮ್ಮಾರ್ ಅಬೂಬಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶೇಷಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.22 ಶ್ರೀ ಚಿತ್ರ 1-
ಶೃಂಗೇರಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಡಶಾಲಾ ವಿಭಾಗದಲ್ಲಿ ನಡೆದ ಕನ್ನಡ ಪ್ರಭ ಹಾಗೂ ಏಷಿಯನೆಟ್ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ದೆ,ಶೃಂಗೇರಿ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ವಿಜೇತರನ್ನು ಬಹುಮಾನ ನೀಡಿ ಗೌರವಿಸಲಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))