ವಿದ್ಯಾರ್ಥಿಗಳು ದೇಶ ಕಟ್ಟುವ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು: ಪ್ರೊ.ಜಿ.ಬಿ.ಶಿವರಾಜ್

| Published : May 23 2024, 01:02 AM IST

ವಿದ್ಯಾರ್ಥಿಗಳು ದೇಶ ಕಟ್ಟುವ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು: ಪ್ರೊ.ಜಿ.ಬಿ.ಶಿವರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಮಾನವೀಯ ಮೌಲ್ಯಗಳೊಂದಿಗೆ ಯುವ ಸಮುದಾಯದ ಶಕ್ತಿ ಒಳ್ಳೆಯ ಕೆಲಸ ಕಾರ್ಯಗಳಿಗೆ ಸಮಾಜಮುಖಿ ಸೇವೆಗಳಿಗೆ ಬಳಕೆಯಾಗಬೇಕು. ಓರ್ವ ಕಳ್ಳ ಕಳ್ಳತನ ಮಾಡಲು ಸಾಕಷ್ಟು ತಯಾರಿ ಮಾಡಿಕೊಳ್ಳತ್ತಾನೆ ಎಂದರೆ, ಅದೇ ವಿದ್ಯಾರ್ಥಿಗಳು ತಮ್ಮ ಶಕ್ತಿ ಬಳಕೆ ಮಾಡಿ ಸಮಾಜದಲ್ಲಿನ ಸಮಾಜಮುಖಿ ಕೆಲಸ ಕಾರ್‍ಯಗಳನ್ನು ಇನ್ನೇಷ್ಟು ತಯಾರಿ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎನ್‌ಎಸ್‌ಎಸ್ ವಿದ್ಯಾರ್ಥಿಗಳು ದೇಶಕಟ್ಟುವ ಉತ್ತಮ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರಿನ ಗಾಂಧಿ ಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜ್ ಹೇಳಿದರು.

ತಾಲೂಕಿನ ಕದಲಗೆರೆ ಗ್ರಾಮದಲ್ಲಿ ಮೇಲುಕೋಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ನಡೆಯುತ್ತಿರುವ ಎನ್‌ಎಸ್‌ಎಸ್ ಶಿಬಿರ ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಯುವಶಕ್ತಿ ಹೊಂದಿರುವ ದೇಶ ಎಂದರೆ ಅದು ಭಾರತ. ಯುವಶಕ್ತಿ ಶ್ರಮ ಎಂದಿಗೂ ವ್ಯರ್ಥವಾಗಬಾರದು ಎಂದರು.

ಮಾನವೀಯ ಮೌಲ್ಯಗಳೊಂದಿಗೆ ಯುವ ಸಮುದಾಯದ ಶಕ್ತಿ ಒಳ್ಳೆಯ ಕೆಲಸ ಕಾರ್ಯಗಳಿಗೆ ಸಮಾಜಮುಖಿ ಸೇವೆಗಳಿಗೆ ಬಳಕೆಯಾಗಬೇಕು. ಓರ್ವ ಕಳ್ಳ ಕಳ್ಳತನ ಮಾಡಲು ಸಾಕಷ್ಟು ತಯಾರಿ ಮಾಡಿಕೊಳ್ಳತ್ತಾನೆ ಎಂದರೆ, ಅದೇ ವಿದ್ಯಾರ್ಥಿಗಳು ತಮ್ಮ ಶಕ್ತಿ ಬಳಕೆ ಮಾಡಿ ಸಮಾಜದಲ್ಲಿನ ಸಮಾಜಮುಖಿ ಕೆಲಸ ಕಾರ್‍ಯಗಳನ್ನು ಇನ್ನೇಷ್ಟು ತಯಾರಿ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜದ ಪ್ರಗತಿಗೆ, ಒಳ್ಳೆಯ ಕೆಲಸ ಕಾರ್‍ಯಗಳನ್ನು ನಡೆಸಲು ಮುಂದಾಗಬೇಕು ಎಂದರು.ಮಹರ್ಜನ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ.ಜಯಕುಮಾರಿ ಮಾತನಾಡಿ, ಎನ್‌ಎಸ್‌ಎಸ್ ಶಿಬಿರಗಳು ಮಕ್ಕಳಲ್ಲಿ ಶಿಸ್ತು, ಸಂಯಮದ ಜನತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಹಕಾರಿಯಾಗುತ್ತಿವೆ. ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಶಿಬಿರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಮಾರಂಭದಲ್ಲಿ ಪ್ರೊ.ಎಚ್.ಆರ್.ತಿಮ್ಮೇಗೌಡ ಮಾತನಾಡಿದರು. ಪ್ರಾಂಶುಪಾಲ ಡಾ.ಡಿ.ನಂಜುಂಡಯ್ಯ, ಕಾರ್‍ಯಕ್ರಮ ಅಧಿಕಾರ ಎಂ.ಎಸ್.ಕೃಷ್ಣ, ಸಹ ಶಿಬಿರಾಧಿಕಾರಿ ಸಿ.ಪರಮೇಶ್, ಮಹೇಶ್‌ಕುಮಾರ್, ಕಾವ್ಯ, ಎನ್.ಕೆ.ವಿಜಯಕುಮಾರ್, ಡಿ.ಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.