ವಿದ್ಯಾರ್ಥಿಗಳು ಸಮುದಾಯ ಸೇವೆಯಲ್ಲಿ ತೊಡಗಿಕೊಳ್ಳಬೇಕು: ಮಂಜುನಾಥ ಕಾಂಚನ್

| Published : Aug 10 2024, 01:35 AM IST

ವಿದ್ಯಾರ್ಥಿಗಳು ಸಮುದಾಯ ಸೇವೆಯಲ್ಲಿ ತೊಡಗಿಕೊಳ್ಳಬೇಕು: ಮಂಜುನಾಥ ಕಾಂಚನ್
Share this Article
  • FB
  • TW
  • Linkdin
  • Email

ಸಾರಾಂಶ

ಮಣೂರು ಪಡುಕರೆಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇಂಟರ್‍ಯಾಕ್ಟ್ ಪದ ಪ್ರದಾನ ಸಮಾರಂಭ ನಡೆಯಿತು. ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ ಅನಿಲ್ ಸುವರ್ಣ ಪದ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಕೋಟ

ಇಲ್ಲಿನ ರೋಟರಿ ಕ್ಲಬ್ ಕೋಟ ಸಿಟಿ ಸಹಭಾಗಿತ್ವದಲ್ಲಿ ಮಣೂರು ಪಡುಕರೆಯ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಇಂಟರ್‍ಯಾಕ್ಟ್ ಪದ ಪ್ರದಾನ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ರೋಟರಿ ಜಿಲ್ಲೆಯ ಇಂಟರ್‍ಯಾಕ್ಟ್ ಉಪಸಭಾತಿ ಮಂಜುನಾಥ ಕಾಂಚನ್, ಮಕ್ಕಳಲ್ಲಿ ನಾಯಕತ್ವ ಹಾಗೂ ವ್ಯಕ್ತಿತ್ವ ಬೆಳೆಸುವಲ್ಲಿ ರೋಟರಿಯ ಅಂಗಸಂಸ್ಥೆ ಇಂಟರ್‍ಯಾಕ್ಟ್ ಕ್ಲಬ್‌ ಪ್ರಮುಖ ಪಾತ್ರ ವಹಿಸುತ್ತಿದೆ. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಮುಂದೆ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ ಅನಿಲ್ ಸುವರ್ಣ, ರೋಟರ್‍ಯಾಕ್ಟ್‌ ಕ್ಲಬ್ ನೂತನ ಅಧ್ಯಕ್ಷೆ ಅನುಶ್ರೀ, ಕಾರ್ಯದರ್ಶಿ ಪೂರ್ವಿ ಅವರಿಗೆ ಪದ ಪ್ರದಾನ ಮಾಡಿದರು.

ಸಭೆಯಲ್ಲಿ ರೋಟರಿ ವಲಯ ಸೇನಾನಿ ನಿತ್ಯಾನಂದ ನಾಯರಿ, ಕಾರ್ಯದರ್ಶಿ ಪ್ರಕಾಶ್ ಪೂಜಾರಿ, ಇಂಟರ್‍ಯಾಕ್ಟ್ ಕ್ಲಬ್ ಸಭಾಪತಿ ಉಮೇಶ್ ನಾಯರಿ, ಮಾಜಿ ಅಧ್ಯಕ್ಷ ಡಾ. ಗಣೇಶ್ ಯು., ನಿಯೋಜಿತ ಅಧ್ಯಕ್ಷ ಪ್ರಕಾಶ್ ಹಂದಟ್ಟು ಉಪಸ್ಥಿತರಿದ್ದರು.ಹಿರಿಯ ಶಿಕ್ಷಕಿ ಸುವರ್ಣ ಜಿ. ನಾವಡ ಸ್ವಾಗತಿಸಿದರು. ಶಾಲೆಯ ಇಂಟರ್‍ಯಾಕ್ಟ್ ಕೋ ಆರ್ಡಿನೇಟರ್ ಹೆರಿಯ ಮಾಸ್ಟರ್ ಪ್ರಾಸ್ತಾವಿಕ ಮಾತನಾಡಿದರು. ರಸಪ್ರಶ್ನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು. ಇಂಟರ್‍ಯಾಕ್ಟ್ ಕಾರ್ಯದರ್ಶಿ ಪೂರ್ವಿ ವಂದಿಸಿದರು. ಶಿಕ್ಷಕ ರಾಜೀವ ಕಾರ್ಯಕ್ರಮ ನಿರ್ವಹಿಸಿದರು.