ಸಾರಾಂಶ
ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರೌಢಶಾಲೆ ಹಾಗೂ ಕಾಲೇಜಿನ ಜೀವನದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಲು ಪ್ರತಿಯೊಬ್ಬರು ಪ್ರಯತ್ನ ಮಾಡಬೇಕೆಂದು ಕೊಣ್ಣೂರ ವಿರಕ್ತಮಠದ ಡಾ.ಚನ್ನವಿರೇಶ್ವರ ಶ್ರೀಗಳು ಹೇಳಿದರು.
ನರಗುಂದ: ಪ್ರತಿಯೊಬ್ಬ ವಿದ್ಯಾರ್ಥಿಗಳು ಪ್ರೌಢಶಾಲೆ ಹಾಗೂ ಕಾಲೇಜಿನ ಜೀವನದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಲು ಪ್ರತಿಯೊಬ್ಬರು ಪ್ರಯತ್ನ ಮಾಡಬೇಕೆಂದು ಕೊಣ್ಣೂರ ವಿರಕ್ತಮಠದ ಡಾ.ಚನ್ನವಿರೇಶ್ವರ ಶ್ರೀಗಳು ಹೇಳಿದರು.
ಅವರು ತಾಲೂಕಿನ ಕೊಣ್ಣರ ಗ್ರಾಮದ ಕೆಇಎಸ್ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್ ಎಸ್ ಎಸ್ ಚಟುವಟಿಕೆಗಳ ಹಾಗೂ ಕಾಲೇಜು ಸಂಸತ್ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿ, ಈ ಸಮಾಜದ ವಿದ್ಯಾರ್ಥಿಗಳು ಈ ದೇಶದ ಮುಂದಿನ ಉತ್ತಮ ನಾಗರಿಕರಾಗುವ ತಾವುಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯಲ್ಲಿ ಭಾಗವಹಿಸಿ ಸಾಧನೆ ಮಾಡಿ ನೀವು ಕಲಿಯುವ ಕಾಲೇಜಿಗೆ ಮತ್ತು ನಿಮ್ಮ ಪಾಲಕರಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ, ಸಂಸ್ಥೆಯ ಅಧ್ಯಕ್ಷ ಎಸ್. ಟಿ. ಚೌಡರೆಡ್ಡಿ, ಕಾರ್ಯದರ್ಶಿ ಎಸ್. ಬಿ. ಯಲಿಗಾರ, ನಿರ್ದೇಶಕರಾದ ಎನ್. ಕೆ. ಸೋಮಾಪೂರ, ಐ. ಐ. ಮಸೂತಿಮನಿ, ಎಸ್. ಪಿ. ಯಲ್ಲಪ್ಪಗೌಡ್ರ, ಆಢಳಿತಾಧಿಕಾರಿ ಎಸ್. ಕೆ. ಜೋಶಿ, ಎ.ಆರ್.ಹಿರೇಮಠ, ಮುಖ್ಯ್ಯೊಪಾಧ್ಯಾಯ ಎಸ್.ಎಂ. ಜುಮ್ಮಣ್ಣವರ, ರಾಠೋಡ, ಪ್ರಾಚಾರ್ಯರಾದ ಕೆ.ಎಂ. ಮಾಕಣ್ಣವರ ಸೇರಿದಂತೆ ಮುಂತಾದವರು ಇದ್ದರು.