ಸಾರಾಂಶ
ವಿದ್ಯಾರ್ಥಿ ದೆಸೆಯಲ್ಲಿಯೇ ಸ್ಪರ್ಧಾತ್ಮಕ ಜಗತ್ತಿಗೆ ಸವಾಲು ಹಾಕಿ ಮುನ್ನಡೆಯುವ ಇಚ್ಛಾಶಕ್ತಿಯನ್ನು ಒಳಗೊಂಡರೆ ಭವಿಷ್ಯದ ಬದುಕು ಹಸನಾಗಬಲ್ಲದು ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್. ಆನಂದ ತಿಳಿಸಿದರು.
ಹಾನಗಲ್ಲ: ವಿದ್ಯಾರ್ಥಿ ದೆಸೆಯಲ್ಲಿಯೇ ಸ್ಪರ್ಧಾತ್ಮಕ ಜಗತ್ತಿಗೆ ಸವಾಲು ಹಾಕಿ ಮುನ್ನಡೆಯುವ ಇಚ್ಛಾಶಕ್ತಿಯನ್ನು ಒಳಗೊಂಡರೆ ಭವಿಷ್ಯದ ಬದುಕು ಹಸನಾಗಬಲ್ಲದು ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್. ಆನಂದ ತಿಳಿಸಿದರು.
ಹಾನಗಲ್ಲನ ಎನ್‌ಸಿಜೆಸಿ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟ, ರಾಷ್ಟ್ರೀಯ ಮತದಾರರ ಸಾಕ್ಷರತಾ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಯುವಕರ ಪಾತ್ರ ಅತ್ಯಂತ ಮುಖ್ಯವಾದುದು. ದೇಶದ ಹಿತಕ್ಕಾಗಿ ನಮ್ಮನ್ನು ತೊಡಗಿಸಿಕೊಳ್ಳುವ ಮನಸ್ಸು ಯುವಕರಿಗೆ ಬೇಕು. ಇಂದಿನ ಯುವ ಪ್ರಜೆಗಳೇ ನಾಳಿನ ಪ್ರಜಾ ಪ್ರತಿನಿಧಿಗಳು ಎಂಬ ವಿಶ್ವಾಸ ನಿಮ್ಮಲ್ಲಿರಲಿ. ದೇಶದ ಹಿತಕ್ಕೆ ಎಲ್ಲರೂ ಒಟ್ಟಾಗಿ ಮುನ್ನಡೆದರೆ ದೇಶದ ಹಿತ ಕಾಯಲು ಸಾಧ್ಯ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ವಿದ್ಯಾರ್ಥಿ ನಿಲಯ ಪಾಲಕ ಬಿ.ಆರ್.ಪಾಟೀಲ, ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಮಾತ್ರ ನೆಮ್ಮದಿ ಸಾಧ್ಯ. ಜ್ಞಾನವೇ ನಮ್ಮ ನಿಜವಾದ ಸಂಪತ್ತು. ಅದರ ಸದುಪಯೋಗಕ್ಕೆ ಮುಂದಾಗೋಣ. ಕಾಲ ಹರಣ ಸಲ್ಲದು. ಕೀಳರಿಮೆ ಬಿಡಿ. ಎಲ್ಲವನ್ನೂ ಸಾಧಿಸಲು ಸಾಧ್ಯ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಅಕ್ಕಿವಳ್ಳಿ, ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ್ದು. ಇದು ಬಂಗಾರದ ಬದುಕು ಕಟ್ಟಿಕೊಳ್ಳಲು ಬೇಕಾಗುವ ಸಮಯ. ಈ ಸಮಯವನ್ನು ಬಂಗಾರ ಮಾಡಿಕೊಳ್ಳುವ ಕ್ರಿಯಾಶೀಲತೆ ವಿದ್ಯಾರ್ಥಿಗಳಲ್ಲಿರಬೇಕು ಎಂದರು.ಪ್ರಾಚಾರ್ಯ ರವಿ ಜಡೆಗೊಂಡರ ಆಶಯ ನುಡಿ ನುಡಿದರು. ಉಪಾಧ್ಯಕ್ಷ ಪಿ.ವಾಯ್.ಗುಡಗುಡಿ, ನಿರ್ದೆಶಕರಾದ ಸುರೇಶ ರಾಯ್ಕರ, ಅಶೋಕ ಹಂಗರಗಿ, ದುಶ್ಯಂತ ನಾಗರೊಳ್ಳಿ, ರವಿಚಂದ್ರ ಪುರೋಹಿತ, ರೇಖಾ ಶೆಟ್ಟರ, ಜಗದೇವ ಶಿಡ್ಲಾಪುರ, ಕಾರ್ಯದರ್ಶಿ ಮನೋಹರ ಬಳಿಗಾರ, ಕಾರ್ತಿಕ ಅಚಲಕರ, ಉಪನ್ಯಾಸಕರಾದ ಎಫ.ಎಸ್.ಕಾಳಿ, ಕೆ.ಬಿ.ಶೇಷಗಿರಿ, ಆಂಜನೇಯ ಹಳ್ಳಳ್ಳಿ, ಎಸ್.ಎಲ್. ಮಂಜುನಾಥ, ನಿಂಗರಾಜ ಗುಂಡೇಗೌಳಿ, ಪ್ರದೀಪ ಕಾಟೇಕರ, ಅಕ್ಷತಾ ಕೂಡಲಮಠ, ಜ್ಯೋತಿ ಚಿಕ್ಕಮಠ ಪಾಲ್ಗೊಂಡಿದ್ದರು.ಸಂಧ್ಯಾ ಯಾದವ ಸಂಗಡಿಗರು ಪ್ರಾರ್ಥನೆ ಹಾಡಿದರು. ಶ್ವೇತಾ ಗಡಿಯಣ್ಣನವರ, ಕವಿತಾ ಹಾವಳೇರ ಕಾರ್ಯಕ್ರಮ ನಿರೂಪಿಸಿದರು. ಸಿತಾರಾ ಪಾಟೀಲ ಭರತನಾಟ್ಯ ಪ್ರದರ್ಶಿಸಿದರು. ಆದರ್ಶ ಫೊರೋಜಿ ವಂದಿಸಿದರು.