ಸಾರಾಂಶ
ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಕೊಡುವ ಉತ್ತಮ ಸಂಸ್ಕಾರವು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಭದ್ರಬುನಾದಿಯಾಗಿದೆ ಎಂದು ಸ್ಥಳೀಯ ವಾರದ ಆಸ್ಪತ್ರೆಯ ಡಾ.ಸೀಮಾ ವಾರದ್ ಹೇಳಿದರು.
ಕನ್ನಡಪ್ರಭ ವಾರ್ತೆ ಸಿಂದಗಿ
ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಲ್ಲಿ ಕೊಡುವ ಉತ್ತಮ ಸಂಸ್ಕಾರವು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಲು ಭದ್ರಬುನಾದಿಯಾಗಿದೆ ಎಂದು ಸ್ಥಳೀಯ ವಾರದ ಆಸ್ಪತ್ರೆಯ ಡಾ.ಸೀಮಾ ವಾರದ್ ಹೇಳಿದರು.ಸ್ಥಳೀಯ ವಿದ್ಯಾನಿಕೇತನ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಪ್ರೇರಣಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳು ವಿದ್ಯಾರ್ಥಿ ದೆಸೆಯಲ್ಲಿ ಶಿಸ್ತು ಬದ್ಧವಾದ ಜೀವನ ಅಳವಡಿಸಿಕೊಂಡು ಆರೋಗ್ಯ ರಕ್ಷಣೆ ಸ್ವಚ್ಛತೆ ಬಗ್ಗೆ ಕಾಳಜಿ ವಹಿಸಬೇಕು. ಪೋಷಕಾಂಶ ಮತ್ತು ಉತ್ತಮ ತರಕಾರಿಗಳ ಆಹಾರ ಪದ್ಧತಿ ಜೀವನದಲ್ಲಿ ರೂಡಿಸಿಕೊಂಡರೆ ಆರೋಗ್ಯ ಉತ್ತಮವಾಗುತ್ತದೆ. ಯೋಗ್ಯ ಆಹಾರವು ಉತ್ತಮ ಜ್ಞಾನಾರ್ಜನೆಗೆ ಸಹಕಾರಿಯಾಗಿದೆ ಎಂದ ಅವರು, ಮಕ್ಕಳು ಮೊಬೈಲ್‌ಗಿಳಿನಿಂದ ಹೊರಬಂದು ಹೆಚ್ಚು ಅಧ್ಯಯನ ಕಡೆ ಗಮನಹರಿಸಬೇಕು ಎಂದರು.
ಈ ವೇಳೆ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಶಕ್ತಿ ರಾಷ್ಟ್ರದ ಶಕ್ತಿ ವಿದ್ಯಾರ್ಥಿಯ ಬದುಕು ಅತ್ಯುತ್ತಮವಾದದ್ದು ಅಧ್ಯಯನದ ಕಡೆಗೆ ಹೆಚ್ಚು ಗಮನಹರಿಸಿ ಹೆಚ್ಚು ಸೃಜನಶೀಲರಾಗಬೇಕು ಎಂದರು. ಈ ವೇಳೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ವೇದಿಕೆಯ ಮೇಲೆ ಸಂಸ್ಥೆ ನಿರ್ದೇಶಕ ಪಿ. ಡಿ. ಕುಲಕರ್ಣಿ, ಮುಖ್ಯ ಶಿಕ್ಷಕಿ ಎಮ್. ಪಿ. ಬುಕ್ಕಾ ಇದ್ದರು. ಶಾಲೆ ಶಿಕ್ಷಕರಾದ ಆರ್.ಎಂ ಪಕೀರಪೂರ, ಸತೀಶ್ ಕುಲಕರ್ಣಿ, ಕಿರಣ್ ಕುಲಕರ್ಣಿ, ಸನತ್ ಕುಲಕರ್ಣಿ, ಅಲ್ತಾಫ್ ತಾಂಬೋಳಿ, ಅಕ್ಷಯ್ ಯಲಗಟ್ಟಿ, ಶ್ರೀಕಾಂತ್ ಹೂನಳ್ಳಿ, ಯಲ್ಲಾಲಿಂಗ ಹೊಸೂರ್, ಎಸ್. ಬಿ. ಕುಂಟೋಜಿ, ಎಂ. ಎಂ. ಜುಮ್ಮನಾಳ, ಬಿ.ಎಸ್.ಪಾಟೀಲ್, ಎಸ್. ವಿ. ಕಡಣಿ, ಎಂ.ಜಿ.ದ್ಯಾಮಗೊಂಡ, ವಿ.ಎ.ನಾಯಕ್, ವಿಜಯಲಕ್ಷ್ಮಿ ಆಲಾಳಮಠ, ಸಾವಿತ್ರಿ ವೀರಾಪುರ್, ಎನ್. ಜಿ.ಬಳಗಾನೂರ, ವಿ.ಕೆ.ಚೌಹಾಣ್, ಆರ್.ಎಸ್.ಶಿವಶಂಪಿಗೆರ, ಎಸ್.ಎಸ್. ಪಾಟೀಲ್, ತನುಜಾ ಹೂನಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.;Resize=(128,128))
;Resize=(128,128))