ಸಾರಾಂಶ
ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಭವಿಷ್ಯದ ಬರಹದಲ್ಲಿರುವ ಜಿಲ್ಲೆ ವಿದ್ಯಾರ್ಥಿಗಳಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ವಿಡಿಯೋ ಸಂದೇಶ ಮೂಲಕ ಶುಭ ಕೋರಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ದ್ವಿತೀಯ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಭವಿಷ್ಯದ ಬರಹದಲ್ಲಿರುವ ಜಿಲ್ಲೆ ವಿದ್ಯಾರ್ಥಿಗಳಿಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ವಿಡಿಯೋ ಸಂದೇಶ ಮೂಲಕ ಶುಭ ಕೋರಿದ್ದಾರೆ.ವಿದ್ಯಾರ್ಥಿ ಜೀವನದಲ್ಲಿ ಪಿಯುಸಿ ಬಹುಮುಖ್ಯ ಘಟ್ಟ. ಜಿಲ್ಲೆಯಲ್ಲಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿ. ನೀವು ಮಹತ್ವದ ಹಂತ ತಲುಪುತ್ತಿರುವ ಸಮಯ ಇದು. ದ್ವಿತೀಯ ಪಿಯು ಪರೀಕ್ಷೆಗಳು ನಿಮ್ಮ ಭವಿಷ್ಯದ ಕನಸುಗಳಿಗೆ ದಾರಿ ತೋರಿಸುತ್ತವೆ. ನಿಮ್ಮ ಶ್ರಮ, ವಿದ್ಯಾಭ್ಯಾಸ ಜೊತೆಗೆ ದೃಢಸಂಕಲ್ಪದೊಂದಿಗೆ ನೀವು ಈ ಹಂತ ಯಶಸ್ವಿಯಾಗಿ ಮುನ್ನಡೆಸುತ್ತೀರಾ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಪರೀಕ್ಷೆಗಳು ಕೇವಲ ಅಂಕಗಳನ್ನು ಪಡೆಯುವ ಹಂತವಲ್ಲ. ಅವು ನಿಮ್ಮ ಬದುಕಿನ ಮಹತ್ತರ ಪಾಠಗಳನ್ನು ಕಲಿಸುವ ಸೂಕ್ತ ಅವಕಾಶಗಳು. ಈ ಸಮಯದಲ್ಲಿ ಶಿಸ್ತಿನ ಜೀವನ ಮತ್ತು ಯೋಜಿತ ಅಧ್ಯಯನ ನಿಮಗೆ ಅತ್ಯಂತ ಸಹಾಯಕ ಆಗಬಹುದು. ತಪ್ಪದೇ ನಿಮ್ಮ ಆರೋಗ್ಯದ ಕಡೆ ಗಮನಹರಿಸಿ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ ಹಾಗೂ ಸಮಯ ಸೂಕ್ತವಾಗಿ ನಿರ್ವಹಿಸಿ. ಪ್ರಶ್ನೆಗಳನ್ನು ಓದುವಾಗ, ಉತ್ತರಿಸುವಾಗ ಸಮರ್ಪಕ ಸಮಯ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಮತೋಲಿತ ಆಹಾರ, ಸಮರ್ಪಕ ವಿಶ್ರಾಂತಿ ಹಾಗೂ ಆತ್ಮಸ್ಥೈರ್ಯ ಇರಬೇಕು. ಇದು ಸಾಧ್ಯವಾದಲ್ಲಿ ನೀವು ಉತ್ತಮವಾಗಿ ಪರೀಕ್ಷೆ ಬರೆಯಲು ಸಹಕಾರಿ ಆಗುತ್ತದೆ ಎಂದಿದ್ದಾರೆ.
- - - -28ಕೆಡಿವಿಜಿ31: ಡಾ.ಪ್ರಭಾ ಮಲ್ಲಿಕಾರ್ಜುನ