ಸಾರಾಂಶ
ತರೀಕೆರೆ, ವಿದ್ಯಾರ್ಥಿಗಳು ತಮ್ಮ ಮಾನಸಿಕ ಸ್ವಾಸ್ಥ್ಯ ಕಾಯ್ದುಕೊಂಡು ಅಚಲ ವಿಶ್ವಾಸದಿಂದ ಗುರಿಯೆಡೆಗೆ ಸಾಗಬೇಕು ಎಂದು ಧಾರವಾಡ ಖ್ಯಾತ ಮನೋಶಾಸ್ತ್ರಜ್ಞ ಡಾ.ತೇಜಸ್ವಿ ಟಿ.ಪಿ.ಹೇಳಿದ್ದಾರೆ.
ತರೀಕೆರೆಯಲ್ಲಿ ಮಾನಸಿಕ ಸ್ವಾಸ್ಥ್ಯ ಜಾಗೃತಿ ಕಾರ್ಯಕ್ರಮ.
ಕನ್ನಡಪ್ರಭ ವಾರ್ತೆ, ತರೀಕೆರೆವಿದ್ಯಾರ್ಥಿಗಳು ತಮ್ಮ ಮಾನಸಿಕ ಸ್ವಾಸ್ಥ್ಯ ಕಾಯ್ದುಕೊಂಡು ಅಚಲ ವಿಶ್ವಾಸದಿಂದ ಗುರಿಯೆಡೆಗೆ ಸಾಗಬೇಕು ಎಂದು ಧಾರವಾಡ ಖ್ಯಾತ ಮನೋಶಾಸ್ತ್ರಜ್ಞ ಡಾ.ತೇಜಸ್ವಿ ಟಿ.ಪಿ.ಹೇಳಿದ್ದಾರೆ.ಪಟ್ಟಣದ ಗ್ಲಾಸಿ ಕಿಡ್ಸ್ ಸದ್ವಿದ್ಯಾ ಪಬ್ಲಿಕ್ ಶಾಲೆಯಲ್ಲಿ . ಲಯನ್ಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ್ದ ಮಾನಸಿಕ ಸ್ವಾಸ್ಥ್ಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಒತ್ತಡ ನಿಭಾಯಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣ ಹೆಚ್ಚಾಗುತ್ತಿವೆ ಅದರಲ್ಲೂ ಎಲ್ಲಾ ಸೌಲಭ್ಯ ಗಳು ಹೆಚ್ಚಿರುವ ವ್ಯವಸ್ಥಿತ ಕುಟುಂಬದಲ್ಲಿಯೇ ಇಂಥ ಪ್ರಕರಣ ಹೆಚ್ಚು, ಮಾನಸಿಕ ರೋಗಗಳ ಬಗ್ಗೆ ಅಂಕಿ ಅಂಶಗಳ ಮೂಲಕ ವಿವರಿಸಿ ಭಾರತೀಯ ಮಾನಸಿಕ ರೋಗಿಗಳ ಹಾಗೂ ರೋಗ ಸ್ಥಿತಿಗಳ ಬಗೆಗೆ ಅತ್ಯಂತ ಸಂಕ್ಷಿಪ್ತವಾಗಿ ವಿವರಿಸಿದರು. ಕೀಲು ಮತ್ತು ಮೂಳೆ ತಜ್ಞ ಡಾ.ದೇವರಾಜ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಅಭ್ಯಾಸ ತಮ್ಮ ದೈನಂದಿನ ಬದುಕಿನಲ್ಲಿ ಹೇಗೆ ರೂಢಿಸಿಕೊಳ್ಳಬೇಕು ಎಂದರು. ಶಾಲೆ ಪ್ರಾಂಶುಪಾಲರಾದ ಹರ್ಷಿಣಿ ಡಿ.ಆರ್ ಮಾತನಾಡಿ ಹಿಂದೆ ಅವಿಭಕ್ತ ಕುಟುಂಬಗಳು ಅಸ್ತಿತ್ವದಲ್ಲಿದ್ದು ಪ್ರತಿಯೊಬ್ಬ ಸದಸ್ಯರು ಪರಸ್ಪರ ತಮ್ಮ ಭಾವನೆ ಹಂಚಿಕೊಳ್ಳುವ ಮೂಲಕ ಸಮಸ್ಯೆಗಳನ್ನು ಕುಳಿತು ಒಟ್ಟಾಗಿ ಚರ್ಚಿಸುತ್ತಿದ್ದರಿಂದ ಮಾನಸಿಕ ಖಿನ್ನತೆಗೆ ಅವಕಾಶವೇ ಇರುತಿರಲಿಲ್ಲ. ಇಂದು ವಿಭಕ್ತ ಕುಟುಂಬಗಳಿಂದಾಗಿ ಮನುಷ್ಯ ಮನುಷ್ಯ ನಡುವಿನ ಸಂಬಂಧ ಶಿಥಿಲಗೊಳ್ಳುತ್ತಿದೆ ಮಾನಸಿಕವಾಗಿ ಜನರು ದುರ್ಬಲಗೊಳ್ಳುತ್ತಿದ್ದಾರೆ. ಹಾಗಾಗಿ ಉತ್ತಮ ಜೀವನ ಶೈಲಿ ಹೊಂದುವ ಮೂಲಕ, ಉತ್ತಮ ಹವ್ಯಾಸಗಳ ಮೂಲಕ ಮಾನಸಿಕ ಸ್ವಾಸ್ಥ್ಯಕಾಯ್ದುಕೊಳ್ಳಬಹುದು ಎಂದು ತಿಳಿಸಿದರು. ಲಯನ್ಸ್ ಕ್ಲಬ್ ಉಪಾಧ್ಯಕ್ಷ ಎಜಾಜ್ ಪಾಶ, ಖಚಾಂಚಿ ನವೀನ್ ಕುಮಾರ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಲಯನ್ಸ್ ಕ್ಲಬ್ ಸಹಕಾರ್ಯದರ್ಶಿ ಉಮಾ ಪ್ರಕಾಶ್, ಮಂಜುಳಾ ವಿಜಯಕುಮಾರ್, ಶಿಕ್ಷಕ ಮಂಜುನಾಥ್ ಭಾಗವಹಿಸಿದ್ದರು.--
7ಕೆಟಿಆರ್.ಕೆ.8ಃತರೀಕೆರೆಯಲ್ಲಿ ಗ್ಲಾಸಿ ಕಿಡ್ಸ್ ಸದ್ವಿದ್ಯಾ ಪಬ್ಲಿಕ್ ಶಾಲೆಯಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರವಾಡ ಖ್ಯಾತ ಮನೋಶಾಸ್ತ್ರಜ್ಞ ಡಾ.ತೇಜಸ್ವಿ ಟಿ.ಪಿ. ಮಾತನಾಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))