ಸಾರಾಂಶ
ವಿಜಯಪುರ: ವಿದ್ಯಾರ್ಥಿಗಳು ಇಂದಿನ ದಿನಗಳಲ್ಲಿ ಮೊಬೈಲ್‌ಗೆ ದಾಸರಾಘುತ್ತಿರುವುದು ಅಪಾಯಕಾರಿ ಬೆಳವಣಿಗೆ. ಮೊಬೈಲ್ ಗೀಳಿನಿಂದ ಹೊರಬಂದು ಓದಿನತ್ತ ಮನಸು ಕೇಂದ್ರೀಕರಿಸಬೇಕು ಎಂದು ಪ್ರಾಂಶುಪಾಲ ಪಿ.ಎಂ.ಕೊಟ್ರೇಶ್ ತಿಳಿಸಿದರು.
ವಿಜಯಪುರ: ವಿದ್ಯಾರ್ಥಿಗಳು ಇಂದಿನ ದಿನಗಳಲ್ಲಿ ಮೊಬೈಲ್‌ಗೆ ದಾಸರಾಘುತ್ತಿರುವುದು ಅಪಾಯಕಾರಿ ಬೆಳವಣಿಗೆ. ಮೊಬೈಲ್ ಗೀಳಿನಿಂದ ಹೊರಬಂದು ಓದಿನತ್ತ ಮನಸು ಕೇಂದ್ರೀಕರಿಸಬೇಕು ಎಂದು ಪ್ರಾಂಶುಪಾಲ ಪಿ.ಎಂ.ಕೊಟ್ರೇಶ್ ತಿಳಿಸಿದರು.
ಹೋಬಳಿಯ ನಾರಾಯಣಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಶಾರದ ಪೂಜೆ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನ ತುಂಬಾ ಅಮೂಲ್ಯವಾದುದು. ಹಾಗಾಗಿ ಶಾಲಾ ದಿನಗಳಲ್ಲಿ ಮಕ್ಕಳು ಚೆನ್ನಾಗಿ ಓದಿ, ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಮಯ ಪರಿಪಾಲನೆಗೆ ಪ್ರಾಮುಖ್ಯತೆ ಕೊಡಬೇಕು ಎಂದರು.ದೈಹಿಕ ಶಿಕ್ಷಕ ಎಸ್.ಬಿ. ಬಾಲಚಂದ್ರ ಮಾತನಾಡಿ, ಜೀವನದಲ್ಲಿ ಶಿಸ್ತು ಮತ್ತು ಸಂಯಮದ ಮಹತ್ವವನ್ನು ಅರಿತಿರುವವರು ಜೀವನದಲ್ಲಿ ಸಾಧನೆಯ ಉತ್ತುಂಗಕ್ಕೆ ಏರುತ್ತಾರೆ. ಅಮೂಲ್ಯ ಸಮಯದ ಸದ್ಭಳಕೆ ಹಾಗೂ ನ್ಯಾಯೋಜಿತವಾಗಿ ಉಪಯೋಗಿಸಿಕೊಳ್ಳುವ ಚಾಣಾಕ್ಷತೆ ವಿದ್ಯಾರ್ಥಿಗಳಲ್ಲಿರಬೇಕು ಎಂದರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರವೇಶ ಪತ್ರಗಳನ್ನು ವಿತರಿಸಲಾಯಿತು. ಶಿಕ್ಷಕರಾದ ಎನ್.ಅಂಜನೇಯರೆಡ್ಡಿ, ಸುಷ್ಮಾ, ವೆಂಕಟೇಶಪ್ಪ, ಗಂಗರಾಜು, ಕೃಷ್ಣಪ್ಪ, ಸೌದರ್ಯ, ಯಾಶಮಿನ್, ಪ್ರತಿಭಾ, ಪಂಚಾಯಿತಿ ಸದಸ್ಯ ಮುರಳಿ, ಡೇರಿ ಅಧ್ಯಕ್ಷ ಚಂದ್ರಗೌಡ, ನಾರಾಯಣಗೌಡ, ಓಂಕಾರ್ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯರ್ದಶಿ ಮುನಿರಾಜು, ಎಸ್‌ಡಿಎಂಸಿ ಸದಸ್ಯರಾದ ಶಿವಪ್ಪ, ಮಹೇಶ್, ಗಾಯತ್ರಿದೇವಿ, ಕೃಷ್ಣಮೂರ್ತಿ ಅಡುಗೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.