ಸಾರಾಂಶ
ಆಳ್ವಾಸ್ ವೆಲ್ನೆಸ್ ತರಬೇತಿ ಕೇಂದ್ರದ ನಿರ್ದೇಶಕಿ ಡಾ. ದೀಪಾ ಕೊಠಾರಿ, ಆಳ್ವಾಸ್ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಡಾ. ಮೂಕಾಂಬಿಕಾ ಜಿ.ಎಸ್., ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಆಡ್ರಿ ಪಿಂಟೋ, ಕಾಲೇಜಿನ ಕುಲಸಚಿವ (ಮೌಲ್ಯ ಮಾಪನ) ನಾರಾಯಣ ಶೆಟ್ಟಿ, ವಿವಿಧ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳು ಭಾಗಿಯಾಗಿದ್ದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಅನಾರೋಗ್ಯ ಮತ್ತು ಕ್ಷೇಮ ಎಂಬುದು ಎರಡು ಭಿನ್ನ ವಿಚಾರಗಳು. ಕ್ಷೇಮ ತರಬೇತಿ ಕೇಂದ್ರವು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆ, ವೈಯಕ್ತಿಕ ಸಂಬಂಧಗಳು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ವಿಚಾರಿಸಿ, ಸಮಾಲೋಚಿಸುವ ಕಾರ್ಯವನ್ನು ಮಾಡುತ್ತವೆ. ಇದೊಂದು ಮಾನಸಿಕ ಆರೋಗ್ಯವನ್ನು ಉನ್ನತೀಕರಣದ ಪರಿಕಲ್ಪನೆಯಾಗಿದೆ ಎಂದು ಉಡುಪಿಯ ಎವಿ ಬಾಳಿಗಾ ಸಂಸ್ಥೆಯ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಹೇಳಿದರು.ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆಳ್ವಾಸ್ ಸೆಂಟರ್ ಫಾರ್ ವೆಲ್ನೆಸ್ ಟ್ರೈನಿಂಗ್ ಆಶ್ರಯದಲ್ಲಿ ಸೋಮವಾರ ನಡೆದ ವೆಲ್ನೆಸ್ ರೂಮ್ ಉದ್ಘಾಟನೆ ಮತ್ತು ಮಾನಸಿಕ ಸ್ವಾಸ್ಥ್ಯ ಕುರಿತ ಅಧಿವೇಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿದರು. ನೂತನವಾಗಿ ಉದ್ಘಾಟನೆಗೊಂಡ ಆಳ್ವಾಸ್ ವೆಲ್ನೆಸ್ ತರಬೇತಿ ಕೇಂದ್ರದಲ್ಲಿ ಗ್ರಂಥಸೂಚಿ, ಮಂಡಲ ಬಣ್ಣ ಮತ್ತು ಸಂಗೀತ ಚಿಕಿತ್ಸಾ ಕ್ರಮವಿಧಾನಗಳಿವೆ. ಈ ಕೇಂದ್ರವು ಮಾನಸಿಕ ಯೋಗಕ್ಷೇಮವನ್ನು ಉತ್ತೇಜಿಸಲು ಮತ್ತು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಉತ್ತಮ ಸಮುದಾಯವನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದರು.ಆಳ್ವಾಸ್ ವೆಲ್ನೆಸ್ ತರಬೇತಿ ಕೇಂದ್ರದ ನಿರ್ದೇಶಕಿ ಡಾ. ದೀಪಾ ಕೊಠಾರಿ, ಆಳ್ವಾಸ್ ಕಾಲೇಜಿನ ಐಕ್ಯೂಎಸಿ ಸಂಯೋಜಕಿ ಡಾ. ಮೂಕಾಂಬಿಕಾ ಜಿ.ಎಸ್., ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಆಡ್ರಿ ಪಿಂಟೋ, ಕಾಲೇಜಿನ ಕುಲಸಚಿವ (ಮೌಲ್ಯ ಮಾಪನ) ನಾರಾಯಣ ಶೆಟ್ಟಿ, ವಿವಿಧ ವಿಭಾಗದ ವಿದ್ಯಾರ್ಥಿ ಪ್ರತಿನಿಧಿಗಳು ಭಾಗಿಯಾಗಿದ್ದರು. ಸಮಾಜಕಾರ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸ್ವಪ್ನಾ ನಿರೂಪಿಸಿದರು.