ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಬೇಕು

| Published : Aug 02 2024, 12:48 AM IST

ಸಾರಾಂಶ

ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳಲ್ಲಿ ದುಶ್ಚಟಗಳು ವ್ಯಕ್ತಿತ್ವವನ್ನೇ ಹಾಳು ಮಾಡುತ್ತಿವೆ. ಒಂದಿಲ್ಲೊಂದು ವ್ಯಸನ ಬದುಕನ್ನೇ ನರಕಕ್ಕೆ ಒಯ್ಯುತ್ತಿದೆ. ಕಾರಣ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಬೇಕೆಂದು ಇಲ್ಲಿನ ಭಂಡಾರಿ ಮತ್ತು ರಾಠಿ ಪದವಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಗಾಯತ್ರಿ ಕಲ್ಯಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಇಂದಿನ ದಿನಮಾನದಲ್ಲಿ ವಿದ್ಯಾರ್ಥಿಗಳಲ್ಲಿ ದುಶ್ಚಟಗಳು ವ್ಯಕ್ತಿತ್ವವನ್ನೇ ಹಾಳು ಮಾಡುತ್ತಿವೆ. ಒಂದಿಲ್ಲೊಂದು ವ್ಯಸನ ಬದುಕನ್ನೇ ನರಕಕ್ಕೆ ಒಯ್ಯುತ್ತಿದೆ. ಕಾರಣ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಾಗಬೇಕೆಂದು ಇಲ್ಲಿನ ಭಂಡಾರಿ ಮತ್ತು ರಾಠಿ ಪದವಿ ಕಾಲೇಜಿನ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಗಾಯತ್ರಿ ಕಲ್ಯಾಣಿ ಹೇಳಿದರು.

ಅವರು ಗುರುವಾರ ಭಂಡಾರಿ ಮತ್ತು ರಾಠಿ ಕಾಲೇಜಿನ ಎನ್. ಎಸ್. ಎಸ್. ಘಟಕ 1ಮತ್ತು 2 ರ ಅಡಿಯಲ್ಲಿ ಇಳಕಲ್ಲ ಶ್ರೀ ಮಹಾಂತ ಶ್ರೀಗಳ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ದುಶ್ಚಟಗಳಿಗೆ ಬಲಿಯಾಗದೇ ವಿದ್ಯಾರ್ಥಿಗಳು ಸತತ ಅಧ್ಯಯನ ಮತ್ತು ಮನೆಕೆಲಸಗಳಿಂದ ತಂದೆ, ತಾಯಿಗಳಿಗೆ ಸಹಾಯ ಮಾಡಿ ಮನೆಗೆ ಒಳ್ಳೆಯ ಮಕ್ಕಳಾಗಬೇಕು. ಮನೆ,ಮನ, ಪರಿಸರವನ್ನು ಶುದ್ಧವಾಗಿಡಬೇಕು. ಸಂಸ್ಕಾರವಂತ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಮಾಡಿ ಕಾಲೇಜುಗೆ ಒಳ್ಳೆಯ ಹೆಸರು ತರಲು ಸಾಧ್ಯ ಎಂದರು.

ಪ್ರಾಚಾರ್ಯ ಡಾ.ಎನ್.ವೈ.ಬಡಣ್ಣವರ ಅಧ್ಯಕ್ಷತೆ ವಹಿಸಿದ್ದರು. ಡಾ.ಎಂ ಎಸ್ ಪಾಟೀಲ್ ಮತ್ತು ಡಾ. ಗಿರೀಶ್ ಕುಮಾರ್ ವೇದಿಕೆಯಲ್ಲಿದ್ದರು. ಡಾ. ಮಂಜಣ್ಣ, ಡಾ. ನಾಗೇಂದ್ರ ಸ್ವಾಮಿ ಕಾರ್ಯಕ್ರಮ ನಡೆಸಿಕೊಟ್ಟರು.