ಔಷಧೀಯ ವಸ್ತುಗಳನ್ನು ವೀಕ್ಷಿಸಿದ ವಿದ್ಯಾರ್ಥಿಗಳು

| Published : Nov 12 2025, 03:15 AM IST

ಸಾರಾಂಶ

ವಿದ್ಯಾಗಿರಿಯ ಬಸವೇಶ್ವರ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಿಂದ ಮೂರು ದಿನಗಳ ಕೈಗಾರಿಕಾ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ವಿದ್ಯಾಗಿರಿಯ ಬಸವೇಶ್ವರ ಕಲಾ,ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದಿಂದ ಮೂರು ದಿನಗಳ ಕೈಗಾರಿಕಾ ಪ್ರವಾಸ ಹಮ್ಮಿಕೊಳ್ಳಲಾಗಿತ್ತು.

ಪ್ರಾರಂಭದಲ್ಲಿ ಕುಮಟಾದಲ್ಲಿರುವ ವಾತಜಾತ ಔಷಧೀಯ ವಸ್ತುಗಳ ಉತ್ಪಾದನೆ ಕೈಗಾರಿಕೆ ಸಂದರ್ಶಿಸಿದರು. ಕಂಪನಿಯ ಮುಖ್ಯಸ್ಥರಾದ ಡಾ. ವಸಂತಕುಮಾರ ರಾವ ಅವರು ಆಹಾರ ಸಂಯೋಜಕಗಳು, ಆಹಾರ ಸೇರ್ಪಡೆಗಳು, ,ಹಾಗೂ ಆಹಾರದ ಉತ್ಪಾದನೆಯಲ್ಲಿರುವ ರುಚಿ, ಬಣ್ಣ, ಸಂರಕ್ಷಣೆ ಮತ್ತು ಫಾರ್ಮಾ ಆಹಾರಗಳಾದ ರೆಗ್ಗಿಯಾನೊ, ಸ್ಪಾಲ್ಲಾ ಮುಂತಾದವುಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಿದರು.

ಹೊನ್ನಾವರದ ಶರಾವತಿ ನದಿ ಹಿನ್ನೀರಿನಲ್ಲಿರುವ ಶರಾವತಿ ಕಾಂಡ್ಲಾ ಮ್ಯಾಂಗ್ರೊವೆ ಅರಣ್ಯ ಕೇಂದ್ರದಲ್ಲಿ ಮಣ್ಣಿಲ್ಲದೆ ಕೇವಲ ನೀರಿನಲ್ಲಿ ಬೆಳೆಯುವ ಲಕ್ಕಿ ಬಿದಿರು, ರಬ್ಬರ್‌ ಸಸ್ಯ, ಕೋಲಿಯಸ್. ಬಿಗೋನಿಯಾಸ್ ಪ್ಲಾವಕ ಸಸ್ಯಗಳನ್ನು ವೀಕ್ಷಿಸಿದರು.

ಹೊನ್ನಾವರದಲ್ಲಿರುವ ಜಾಯ್ ಮತ್ತು ಎಂಜಾಯ್ ವಾಟರ್ ಪಾರ್ಕ್‌, ಯಾನ ಮತ್ತು ಜೋಗಾಗುಂಡಿಯಲ್ಲಿ ರಾಜಾ ರಾಣಿ ರಾಕೆಟ್ ಮತ್ತು ರೋವರ್‌ ನೀರು ಬೀಳುವ ದೃಶ್ಯಗಳನ್ನು ಸಂದರ್ಶಿಸಿ ಆನಂದಿಸಿದರು. ಪ್ರಾಧ್ಯಾಪಕರಾದ ರಾಚನಗೌಡ ಚಳಗೇರಿ, ರವಿ ಗೌಡರ. ಶ್ರೀನಿವಾಸ ಹಾದಿಮನಿ ವಿನಾಯಕ ತಪ್ಪಲದ ಶಿವಲೀಲಾ ಮರಿಕಟ್ಟಿ ಶ್ರೀನಿವಾಸ ಫಡ್ನೀಸ ಶೈಕ್ಷಣಿಕ ಪ್ರವಾಸದ ನೇತೃತ್ವ ವಹಿಸಿದ್ದರು. 40 ವಿದ್ಯಾರ್ಥಿಗಳು ಪ್ರವಾಸದ ಲಾಭ ಪಡೆದುಕೊಂಡರು.