ಸಾರಾಂಶ
ಭೂಮಿ, ಅಧಿಕಾರ, ಸಂಪತ್ತಿಗಾಗಿ ಲೌಕಿಕ ವಿಲಾಸಿ ಜೀವನಕ್ಕಾಗಿ ಪ್ರಗತಿಯ ಹೆಸರಿನಲ್ಲಿ ಮನುಷ್ಯ ಮಾಡುವ ಕೆಲಸಗಳಿಂದಾಗುವ ಪರಿಣಾಮ ವಚನದಲ್ಲಿ ಉಲ್ಲೇಖಿಸಲಾಗಿದೆ
ಕುಷ್ಟಗಿ: ದೇವರ ದಾಸಿಮಯ್ಯ ಪ್ರಜಾಪ್ರಭುತ್ವದ ಮೂಲ ಸೆಲೆಯೊಳಗೊಂಡ ವಚನ ರಚಿಸುವ ಮೂಲಕ ಕಲ್ಯಾಣ ಕ್ರಾಂತಿ ಮಾಡಿದರು ಎಂದು ನಿವೃತ್ತ ಪ್ರಾಚಾರ್ಯ ಆದಪ್ಪ ಸಾಲವಾಡಗಿ ಹೇಳಿದರು.
ತಾಲೂಕಿನ ಕೇಸೂರು ಗ್ರಾಮದ ಚನ್ನಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ದೇವರ ದಾಸಿಮಯ್ಯ ಜಯಂತಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದೇವರ ದಾಸಿಮಯ್ಯ ಮೊದಲ ಆದ್ಯ ವಚನಕಾರರಾಗಿದ್ದು, ಅವರು ರಚಿಸಿದ ಸುಮಾರು 176 ವಚನಗಳು ಲಭ್ಯವಾಗಿವೆ. ಈ ವಚನಗಳ ಮೂಲಕ ಆತ್ಮಸಾಕ್ಷಿಯೆ ದೇವರು ಎಂದು ಹೇಳಿದ್ದಾರೆ ಎಂದರು.ಇಂದಿನ ನಮ್ಮ ಸಮಾಜಕ್ಕೆ ದೇವರ ದಾಸಿಮಯ್ಯ ರಚಿಸಿದ ವಚನಗಳ ಅಧ್ಯಯನ ಅವಶ್ಯಕವಾಗಿದೆ. ಭೂಮಿ, ಅಧಿಕಾರ, ಸಂಪತ್ತಿಗಾಗಿ ಲೌಕಿಕ ವಿಲಾಸಿ ಜೀವನಕ್ಕಾಗಿ ಪ್ರಗತಿಯ ಹೆಸರಿನಲ್ಲಿ ಮನುಷ್ಯ ಮಾಡುವ ಕೆಲಸಗಳಿಂದಾಗುವ ಪರಿಣಾಮ ವಚನದಲ್ಲಿ ಉಲ್ಲೇಖಿಸಲಾಗಿದೆ. ಅವುಗಳ ಅಧ್ಯಯನ ಮನುಷ್ಯನನ್ನು ಅರಿಷಡ್ವರ್ಗಗಳಿಂದ ಗೆಲ್ಲಲು ಸಹಾಯ ಮಾಡುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಲ್ಲನಗೌಡ ಟೆಂಗುಂಟಿ, ಅಮರೇಶಪ್ಪ ಬಳಿಗೇರ, ನೀಲಕಂಠಪ್ಪ ಬಳಿಗೇರ, ಬಸವರಾಜ ತಾಳಿಕೋಟಿ, ಬಸವರಾಜ ತಂಗಡಗಿ, ಚಂದ್ರಗೌಡ ಟೆಂಗುಂಟಿ, ನಾಗಪ್ಪ ತಂಗಡಗಿ, ಈರನಗೌಡ ಟೆಂಗುಂಟಿ, ಸೋಮನಗೌಡ, ಯಚ್ಚರಪ್ಪ, ಲಕ್ಷ್ಮಮ್ಮ ಬಳಿಗೇರ, ನೀಲಮ್ಮ ತಂಗಡಗಿ, ಸೂಗಪ್ಪ ಸಾಲವಾಡಗಿ ಸೇರಿದಂತೆ ಅನೇಕರು ಇದ್ದರು.