ಸಾರಾಂಶ
ಒಕ್ಕೂಟವು ಹಾಲು ಉತ್ಪಾದಕ ರೈತರು ಹಾಗೂ ಡೇರಿ ಕಾರ್ಯದರ್ಶಿಗಳಿಗೆ ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಸಂಬಂಧ ಗುಜರಾತ್‌ನಲ್ಲಿ ಎರಡು ದಿನಗಳ ಕಾಲ ಅಧ್ಯಯನ ತರಬೇತಿಗಾಗಿ ಒಕ್ಕೂಟದಿಂದ ಸುಮಾರು 45 ಮಂದಿ ಡೇರಿ ಕಾರ್ಯದರ್ಶಿಗಳಿಗೆ 8 ದಿನಗಳ ಕಾಲ ಪ್ರವಾಸಕ್ಕೆ ಕಳುಹಿಸಲಾಗಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಗುಜರಾತ್ ರಾಜ್ಯದ ಎನ್ ಡಿಡಿಬಿಯಲ್ಲಿ ಹಾಲು ಉತ್ಪಾದಕ ರೈತರು ಹಾಗೂ ಡೇರಿ ಕಾರ್ಯದರ್ಶಿಗಳಿಗೆ ನೀಡುವ ಅಧ್ಯಯನ ಪ್ರವಾಸಕ್ಕೆ ತೆರಳಿದ ತಂಡದ ಬಸ್‌ಗೆ ಮನ್ಮುಲ್ ನಿರ್ದೇಶಕ ಕಾಡೇನಹಳ್ಳಿ ರಾಮಚಂದ್ರು ಚಾಲನೆ ನೀಡಿದರು.ಪಟ್ಟಣ ಮನ್ಮುಲ್ ಉಪ ವ್ಯವಸ್ಥಾಪಕ ಕಚೇರಿಯ ಆವರಣದಲ್ಲಿ ಅಧ್ಯಯನ ಪ್ರವಾಸದ ಬಸ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಒಕ್ಕೂಟವು ಹಾಲು ಉತ್ಪಾದಕ ರೈತರು ಹಾಗೂ ಡೇರಿ ಕಾರ್ಯದರ್ಶಿಗಳಿಗೆ ಗುಣಮಟ್ಟದ ಹಾಲು ಉತ್ಪಾದನೆ ಮಾಡುವ ಸಂಬಂಧ ಗುಜರಾತ್‌ನಲ್ಲಿ ಎರಡು ದಿನಗಳ ಕಾಲ ಅಧ್ಯಯನ ತರಬೇತಿಗಾಗಿ ಒಕ್ಕೂಟದಿಂದ ಸುಮಾರು 45 ಮಂದಿ ಡೇರಿ ಕಾರ್ಯದರ್ಶಿಗಳಿಗೆ 8 ದಿನಗಳ ಕಾಲ ಪ್ರವಾಸಕ್ಕೆ ಕಳುಹಿಸಲಾಗಿದೆ ಎಂದರು.ಈ ಹಿಂದೆಯೂ ಸಹ 45 ಮಂದಿ ರೈತರು ಹಾಗೂ ಕಾರ್ಯದರ್ಶಿಗಳನ್ನು ಕಳುಹಿಸಲಾಗಿತ್ತು. ಇದೀಗ ಎರಡನೇ ಹಂತದಲ್ಲಿ ಮತ್ತೆ 45 ಮಂದಿಯನ್ನು ಕಳುಹಿಸಲಾಗಿದೆ. ಮೂರನೇ ಹಂತದಲ್ಲೂ ಸಹ ಮತ್ತಷ್ಟು ರೈತರನ್ನು ಅಧ್ಯಾಯನ ಪ್ರವಾಸಕ್ಕೆ ಕಳುಹಿಸಲಾಗುವುದು ಎಂದರು.
ಅಧ್ಯಯನ ಪ್ರವಾಸಕ್ಕೆ ತೆರಳಿರುವ ಡೇರಿ ಕಾರ್ಯದರ್ಶಿಗಳು ಆ ರಾಜ್ಯದಲ್ಲಿ ಉತ್ಪಾದನೆ ಮಾಡುವ ಗುಣಮಟ್ಟದ ಹಾಲು, ಸಂಘಗಳ ನಿರ್ವಹಣೆ, ಅಭಿವೃದ್ಧಿ ಕುರಿತಂತೆ ಮಾಹಿತಿ ಪಡೆದುಕೊಂಡು ನಮ್ಮಲ್ಲೂ ಅಳವಡಿಸಿಕೊಳ್ಳಬೇಕು ಎಂದರು.ಈ ವೇಳೆ ಮನ್ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ಮಾರ್ಗ ವಿಸ್ತರ್ಣಾಧಿಕಾರಿಗಳಾದ ಉಷಾ, ಜಗದೀಶ್ ಸೇರಿದಂತೆ ಡೇರಿ ಕಾರ್ಯದರ್ಶಿಗಳು ಹಾಜರಿದ್ದರು.