ರಾಜ್ಯೋತ್ಸವ ಕಾರ್ಯಕ್ರಮವನ್ನು ಶಸಾಪ ಉಪಾಧ್ಯಕ್ಷ ಕೆ.ಎಂ.ವೀರೇಶ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕಲೆ, ಸಾಹಿತ್ಯದಿಂದ ಸಂಪತ್ಭರಿತ ಆಗಿರುವ ಕನ್ನಡ ನಾಡು- ನುಡಿಯ ಬಗ್ಗೆ ಅಧ್ಯಯನ ಮಾಡಿದರೆ ಕನ್ನಡದ ಶ್ರೇಷ್ಠತೆ ಅರ್ಥವಾಗುತ್ತದೆ ಎಂದು ರಾಜ್ಯ ಶರಣ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷ ಕೆ.ಎಂ. ವೀರೇಶ್ ಹೇಳಿದರು.ನಗರದ ಜೆಸಿಆರ್ ಬಡಾವಣೆಯ ಗಣಪತಿ ದೇವಸ್ಥಾನ ಆವರಣದಲ್ಲಿ 22ನೇ ವಾರ್ಡ್ ಪ್ರೇಮಾಭಿವೃದ್ಧಿ ಸಂಘ, ಗಣಪತಿ ದೇವಸ್ಥಾನ ಸಮಿತಿ, ಗಮಕ ಕಲಾಭಿಮಾನಿಗಳ ಸಂಘ, ಮಾರುತಿ ಭಜನಾ ಮಂಡಳಿ, ಸ್ಮರಾತ್ಮಿಕ ಮತ್ತು ಶಾರದ ಸಂಗೀತ ಶಾಲೆ ಆಶ್ರಯದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರ್ಮಿಕತೆಯ ಬೀಡು ನಮ್ಮ ಕನ್ನಡನಾಡು. ಕರ್ನಾಟಕ ಕಟ್ಟಲು ಹಲವಾರು ಗಣ್ಯರು ದುಡಿದು ಶ್ರಮಿಸಿದ್ದಾರೆ. ಇಂತಹ ಚೆಲುವ ಕನ್ನಡ ನಾಡನ್ನು ಕಟ್ಟಲು ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದರು.ಗಮಕ ಕಲಾ ಅಭಿಮಾನಿಗಳ ಸಂಘ ಅಧ್ಯಕ್ಷೆ ರಮಾದೇವಿ ಮಾತನಾಡಿ, ಕನ್ನಡ ನಾಡು- ನುಡಿ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದು, ಬೆಳೆಸುವುದು ಮುಂದಿನ ಯುವಪೀಳಿಗೆಯ ಜವಾಬ್ದಾರಿ ಎಂದರು.
ಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ಚಿದಾನಂದಪ್ಪ, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ರಮೇಶ್, ಕ್ಷೇಮಾಭಿವೃದ್ಧಿ ಸಂಘದ ಗೌರವ ಅಧ್ಯಕ್ಷ ಕೃಷ್ಣಮೂರ್ತಿ, ಸಂಘದ ಅಧ್ಯಕ್ಷ ಮುರುಗೇಶ್ ಗೌಡ ಮಾತನಾಡಿದರು.ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಸುರೇಶ್ ಬಾಬು, ಜಿಲ್ಲಾ ಕನ್ನಡ ರಾಜ್ಯೋತ್ಸವ ಸನ್ಮಾನ ಪಡೆದ ಹಿನ್ನೆಲೆ ವಿವಿಧ ಸಂಘ ಸಂಸ್ಥೆಗಳಿಂದ ಅವರನ್ನು ಸನ್ಮಾನಿಸಲಾಯಿತು.
ಸ್ವರಾತ್ಮಿಕ ಸಂಗೀತ ಶಾಲೆಯ ಚಂಪಕಾ ಶ್ರೀಧರ್ ಸಂಗಡಿಗರು, ಶಾರದಾ ಸಂಗೀತ ಶಾಲೆಯ ಮೀನಾಕ್ಷಿ ಭಟ್ ಸಂಗಡಿಗರು. ಕ್ಷೇಮಾಭಿವೃದ್ಧಿ ಸಂಘದ ಮಹಿಳಾ ಪದಾಧಿಕಾರಿಗಳು, ಮಾರುತಿ ಭಜನಾ ಮಂಡಳಿ ಸದಸ್ಯರು ಕನ್ನಡ ಗೀತಗಾಯನ- ನರ್ತನ ಕಾರ್ಯಕ್ರಮ ನಡೆಸಿಕೊಟ್ಟರು.ಕಾರ್ಯಕ್ರಮದಲ್ಲಿ ನವೀನ್, ಕೃಷ್ಣಪ್ಪ, ರಂಗಪ್ಪ, ಗೀತಾ, ಕಲಾ, ಸುಜಾತ, ಶೈಲಾ, ಉಮಾ ಇತರರು ಭಾಗವಹಿಸಿದ್ದರು.