ಸಾರಾಂಶ
ರೈತರು ಅವಶ್ಯವಿರುವ ಕುರಿ ಶೆಡ್, ಮೇಕೆ, ದನದ ಶೆಡ್, ಸೇರಿದಂತೆ ವೈಯಕ್ತಿಕ ಕಾಮಗಾರಿ ಅನುಷ್ಠಾನ ಮಾಡಿಕೊಳ್ಳಬೇಕು
ಕುಷ್ಟಗಿ: ತಾಲೂಕಿನ ಕೇಸೂರು ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಕೇಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಸೂರು ಗ್ರಾಮದ 1ನೇ ವಾರ್ಡಿನ ವಾರ್ಡ್ ಸಭೆ ನಡೆಯಿತು.
ಸಭೆಯಲ್ಲಿ ಬಸಯ್ಯ ಮಾತನಾಡಿ, ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿ, ತೋಟಗಾರಿಕೆ, ಕೃಷಿ ಇಲಾಖೆ, ಅರಣ್ಯ, ರೇಷ್ಮೆ ಇಲಾಖೆಗಳಿಂದ ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶಗಳಿದ್ದು ರೈತರು ಅವಶ್ಯವಿರುವ ಕುರಿ ಶೆಡ್, ಮೇಕೆ, ದನದ ಶೆಡ್, ಸೇರಿದಂತೆ ವೈಯಕ್ತಿಕ ಕಾಮಗಾರಿ ಅನುಷ್ಠಾನ ಮಾಡಿಕೊಳ್ಳಬೇಕು. ನರೇಗಾ ಯೋಜನೆಯ ಸದುಪಯೋಗಕ್ಕೆ ಮುಂದಾಗಬೇಕು ಎಂದು ತಿಳಿಸಿದರು.ಕೇಸೂರು ಪಿಡಿಒ ಕೆ. ವಾಗೀಶ ನರೇಗಾ ಯೋಜನೆ ಕುರಿತು ಮಾಹಿತಿ ನೀಡಿದರು. ಗ್ರಾಪಂ ಸದಸ್ಯ ಶುಕಮುನಿ ಈಳಗೇರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಉಮೇಶ ಮಡಿವಾಳರ, ಶಾರದಾ ಜಲಕಮಲದಿನ್ನಿ, ವೀರಯ್ಯ ಮಳಿಮಠ, ಶಾಮಿದ್ ಮುಜಾವರ, ಯಂಕಪ್ಪ ದಾಸರ, ಈರನಗೌಡ ಟೆಂಗುಂಟಿ, ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಸ್ವಸಹಾಯ ಸಂಘದವರು, ಗ್ರಾಮಸ್ಥರು ಗ್ರಾಪಂ ಸಿಬ್ಬಂದಿಗಳು ಇದ್ದರು.ನಾಯಿಗಳ ಹಾವಳಿ ನಿಯಂತ್ರಿಸಿ: ಕೇಸೂರು ಗ್ರಾಮದ ನಿವಾಸಿ ವಿಷ್ಣು ಅಂಗಡಿ ಮಾತನಾಡಿ, ನಮ್ಮ ಗ್ರಾಮದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಗ್ರಾಪಂಗೆ ಮನವಿ ಸಲ್ಲಿಸಿ ತಿಂಗಳಾಗುತ್ತ ಬಂದರೂ ಸ್ಥಳೀಯ ಆಡಳಿತ ನಿಯಂತ್ರಣಕ್ಕೆ ಮುಂದಾಗಿಲ್ಲ. ಈ ನಾಯಿಗಳು ಚಿಕ್ಕಮಕ್ಕಳಿಗೆ ಕಚ್ಚುವ ಸಾಧ್ಯತೆ ಇದ್ದು, ಕೂಡಲೇ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))